ಬಹರೇನ್ ಬಿಲ್ಲವಾಸ್ ಅದ್ದೂರಿಯಾಗಿ ನಡೆದ ಗುರು ಜಯಂತಿ

ಬಹರೇನ್- ಅನಿವಾಸಿ ಬಿಲ್ಲವರ ಒಕ್ಕೂಟವಾದ ಬಹರೇನ್ ಬಿಲ್ಲವಾಸ್ ಬ್ರಹ್ಮ್ಮ ಶ್ರೀ ನಾರಾಯಣ ಗುರುಗಳ 165 ನೇ ಜಯಂತಿಯನ್ನು ಕರ್ನಾಟಕ ಸೋಶಿಯಲ್ ಕ್ಲಬ್ ನ ಸಭಾಂಗಣದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು

.
ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಮುದಾಯದ ಸದಸ್ಯರು ಹಾಗು ಆಹ್ವಾನಿತ ಅತಿಥಿಗಳು ಸೇರಿ ಸುಮಾರು 250 ಸದಸ್ಯರು ಈ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಪೂಜಾ ವಿಧಿವಿಧಾನಗಳನ್ನು ಪ್ರಕಾಶ್ ಬೆಂಗ್ರೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಬಹರೇನ್ ಬಿಲ್ಲವಾಸ್ ವತಿಯಿಂದ ಡಿಸೆಂಬರ್ 16 ರಂದು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ “ತುಳುವ ಸಂಭ್ರಮ – 2019” ಇದರ ಮನವಿ ಪತ್ರವನ್ನು ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಲಾಯಿತು. ಇದೆ ವೇದಿಕೆಯಲ್ಲಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು . ಬಹರೇನ್ ಬಿಲ್ಲವಾಸ್ ನ ಅಧ್ಯಕ್ಷರಾದ ಸುರೇಂದ್ರ ಉದ್ಯಾವರ್ ಅವರ ನೇತೃತ್ವದಲ್ಲಿ ಲೋಲಾಕ್ಷಿ ರಾಜಾರಾಮ್ ಹಾಗು ಕಮಲಾಕ್ಷ ಅಮೀನ್ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Leave a Reply

Your email address will not be published. Required fields are marked *

error: Content is protected !!