ಸತತ ನಾಲ್ಕು ದಿನ ಬ್ಯಾಂಕ್ ಬಾಗಿಲು ಬಂದ್.!

ಮುಂದಿನವಾರ ಸರ್ಕಾರಿ ಸಾಮ್ಯಾದ ಬ್ಯಾಂಕುಗಳ ವಿಲೀನ ವಿರೋಧಿಸಿ ಮುಷ್ಕರ ಮತ್ತು ವಾರದ ಕೊನೆ ನಾಲ್ಕನೇ ಶನಿವಾರ ಇರುವುದರಿಂದ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ಬಾಗಿಲು ಮುಚ್ಚಿರುತ್ತದೆ. ಆದಷ್ಟು ಬೇಗ ಬ್ಯಾಂಕಿಂಗ್ ಗೆ ಸಂಬಂದಿಸಿದ ಕೆಲಸಗಳನ್ನು ಮುಗಿಸಿಕೊಂಡರೆ ಒಳ್ಳೆಯದು ಕೊನೆಗೆ ಎಟಿಎಂ ನಲ್ಲಿ ಹಣ ಲಭಿಸುವುದು ಕಷ್ಟಕರವಾಗಬಹುದು.

ಸರ್ಕಾರಿ ಸ್ವಾಮ್ಯದ ಹತ್ತು ಬ್ಯಾಂಕುಗಳನ್ನು ವೀಲಿನಗೊಳಿಸಿರುವುದನ್ನು ವಿರೋಧಿಸಿ ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಪೆಢರೇಷನ್ (ಎಐಬಿಒಸಿ), ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಶನ್ (ಎಐಬಿಒಎ), ಇಂಡಿಯನ್ ನ್ಯಾಷನಲ್ ಬ್ಯಾಂಕ್ ಆಫೀಸರ್ಸ್ ಕಾಂಗ್ರೆಸ್ (ಐಎನ್‌ಬಿಒಸಿ), ನ್ಯಾಷನಲ್ ಆರ್ಗನೈಸೇಶನ್ ಆಫ್ ಬ್ಯಾಂಕ್ ಆಫೀಸರ್ಸ್ (ನೋಬೊ) ಈ ನಾಲ್ಕು ಬ್ಯಾಂಕಿಂಗ್ ಒಕ್ಕೂಟಗಳು ಮುಷ್ಕರಕ್ಕೆ ಕರೆ ನೀಡಿವೆ.

ಸೆಪ್ಟಂಬರ್ ತಿಂಗಳಿನ 4ನೆ ವಾರ 4 ದಿನ ಬ್ಯಾಂಕ್ ಬಂದ್ ಆಗಲಿವೆ. ದೇಶದಾದ್ಯಂತ ಬ್ಯಾಂಕ್ ಉದ್ಯೋಗಿಗಳ ಸಂಘಟನೆಯು ಸೆಪ್ಟೆಂಬರ್ 26 ಮತ್ತು 27 ರಂದು ಬ್ಯಾಂಕ್ ಮುಷ್ಕರಕ್ಕೆ ಬ್ಯಾಂಕ್ ಕರೆ ನೀಡಿದೆ. ದೇಶದಾದ್ಯಂತ ಸೆಪ್ಟೆಂಬರ್ 26 ಗುರುವಾರ ಮತ್ತು ಸೆಪ್ಟೆಂಬರ್ 27 ಶುಕ್ರವಾರದಂದು ಮುಷ್ಕರ ಕೈಗೊಳ್ಳಲಿವೆ. ಬಳಿಕ ಇದೇ ರೀತಿ ಸೆಪ್ಟೆಂಬರ್ 28 ರಂದು 4ನೇ ಶನಿವಾರ ರಜೆ ಇರಲಿದೆ. ಸೆಪ್ಟೆಂಬರ್ 29 ಭಾನುವಾರ ಆಗಿರುವುದರಿಂದ ಬ್ಯಾಂಕ್ ಬಾಗಿಲು ತೆರೆಯುದಿಲ್ಲ.

ಸತತ ನಾಲ್ಕು ದಿನ ಬ್ಯಾಂಕ್ ಗೆ ರಜೆ ಇರುವುದರಿಂದ ಎಟಿಎಂನಲ್ಲಿ ಕೂಡ ನಗದು ಸಮಸ್ಯೆಗಳನ್ನು ಎದುರಿಸಬಹುದು. ಏಕೆಂದರೆ, ಬ್ಯಾಂಕುಗಳು ಪ್ರತಿದಿನ ಕೂಡ ಎಟಿಎಂಗಳಿಗೆ ಹಣವನ್ನು ತುಂಬಿಸಿರುತ್ತದೆ. ಇಂತಹ ಸಂದರ್ಭದಲ್ಲಿ, ಮುಷ್ಕರ ಮತ್ತು ರಜೆ ಇರುವುದರಿಂದ ಎಟಿಎಂ ಭರ್ತಿ ಮಾಡುವಿಕೆಯಲ್ಲಿ ಸಹ ಪರಿಣಾಮ ಬೀರಬಹುದು.ನಾಲ್ಕು ದಿನಗಳ ಕಾಲ ರಜೆ ಇರುವುದರಿಂದ ಮತ್ತು ನವರಾತ್ರಿ ಹಬ್ಬವು ಬರುವುದರಿಂದ ಹಣಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಎದುಗರಾದಾರು ಎದುರಾಗಬಹುದು ಎಂಬುದು ತಜ್ಞರ ಅಭಿಪ್ರಾಯ. ಈ ಸಮಯದಲ್ಲಿ ಆನ್ಲೈನ್ ನಲ್ಲಿ ನೀವು ಬ್ಯಾಂಕಿಂಗ್ ಅನ್ನು ಉಪಯೋಗಿಸಬಹುದು..

ಸೆಪ್ಟೆಂಬರ್ 26 ಗುರುವಾರ :- ಮುಷ್ಕರ
ಸೆಪ್ಟೆಂಬರ್ 27 ಶುಕ್ರವಾರ :- ಮುಷ್ಕರ
ಸೆಪ್ಟೆಂಬರ್ 28( ನಾಲ್ಕನೇ ಶನಿವಾರ) :- ಸರ್ಕಾರಿ ರಜೆ
ಸೆಪ್ಟೆಂಬರ್ 29 ಭಾನುವಾರ :- ರಜೆ

Leave a Reply

Your email address will not be published. Required fields are marked *

error: Content is protected !!