ದನಕಳೆದುಕೊಂಡವರ ನೆರವಿಗೆ ಬಂದ ಕ್ರಿಕೆಟ್ ತಂಡ

ಹೆಬ್ರಿ:- ಇಲ್ಲಿನ ಹೆಬ್ರಿಯ ಸೆಳ್ಳೆಕಟ್ಟೆ ಎಂಬಲ್ಲಿ ಕಳೆದ ವಾರ ಗೋಪಾಲಕೃಷ್ಣ ನಾಯ್ಕ‌ ಎಂಬವರ ಮನೆಯ ಕೊಟ್ಟಿಗೆಗೆ ನುಗ್ಗಿ ಗೋಕಳ್ಳರು ಮೂರು ಜರ್ಸಿ ದನಗಳನ್ನು ಕದ್ದೋಯ್ದಿದ್ದು ಹೆಬ್ರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪಿ.ಎಸ್.ಐ ಮಹಾಬಲ ಶೆಟ್ಟಿಯವರು ಪ್ರಕರಣದ ಬೆನ್ನತ್ತಿ ಇದಾಗಲೇ ಗೋದಲ್ಲಾಳಿಯೊಬ್ಬನನ್ನು ಬಂಧಿಸಿದ್ದಾರೆ ಹಾಗೂ ಇತರೆ ಗೋಕಳ್ಳರಿಗಾಗಿ ಬಲೆ ಬೀಸಿದ್ದಾರೆ.

ನೆರವಿಗೆ ಬಂದ ಕ್ರಿಕೆಟ್ ತಂಡ..!

ಹೈನುಗಾರಿಕೆಯನ್ನೇ ಬದುಕನ್ನಾಗಿ ಮಾಡಿಕೊಂಡು ಹೆಬ್ರಿಯ ಸಹಕಾರಿ ಸಂಘವೊಂದರಿಂದ ಬರೋಬ್ಬರಿ ಐದು ಲಕ್ಷ ರುಪಾಯಿಗಳನ್ನು ಗೋಪಾಲಕೃಷ್ಣ ನಾಯ್ಕರು ಮಿನಿಡೈರಿಗೆಂದು ತೆಗೆದು ಜೀವನಸಾಗಿಸುತ್ತಿದ್ದರು.

ಗೋಕಳ್ಳರ ಈ ಕೃತ್ಯದಿಂದ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣಗೊಂಡಿದ್ದು ಹೈನುಗಾರಿಕೆಯನ್ನೇ ನಂಬಿಕೊಂಡಿದ್ದ ಕುಟುಂಬಕ್ಕೆ ನುಂಗಲಾರದ ಪೆಟ್ಟು ಬಿದ್ದಂತಾಗಿದೆ.
ಗೋಪಾಲಕೃಷ್ಣರ ಕಣ್ಣೀರನ್ನು ನೋಡಿ ಊರ ಯುವಮನಸ್ಸುಗಳು ಕೈಲಾದಮಟ್ಟಿಗೆ ಸಹಾಯ ಮಾಡಲು ನಿಂತಿದ್ದು ಪ್ರಸ್ತುತ ಸೆಳ್ಳೆಕಟ್ಟೆಯ ‘ರೆಡ್ ಬ್ಯಾಕ್ಸ್’ ಕ್ರಿಕೆಟ್ ತಂಡವು ಸುಮಾರು ಹನ್ನೆರಡು ಸಾವಿರದಷ್ಟು ಹಣವನ್ನು ಗೋಪಾಲಕೃಷ್ಣ ನಾಯ್ಕರ ಕುಟುಂಬಕ್ಕೆ ನೀಡಿದ್ದಾರೆ.

ಕ್ರಿಕೆಟ್ ಆಡಿ ಮೋಜು-ಮಸ್ತಿಗಳೆಂದು ಕಾಲಕಳೆಯುವ ಸಮಯದಲ್ಲಿ ನೊಂದವರ ಕಣ್ಣೀರು ಒರೆಸುವ ಕಾರ್ಯಕ್ಕೆ ಮುಂದಾದ ಯುವಕರು ಸ್ಥಳೀಯರ ಮೆಚ್ಚುಗೆಗೆ ಕಾರಣವಾಗಿದ್ದಾರೆ.

1 thought on “ದನಕಳೆದುಕೊಂಡವರ ನೆರವಿಗೆ ಬಂದ ಕ್ರಿಕೆಟ್ ತಂಡ

Leave a Reply

Your email address will not be published. Required fields are marked *

error: Content is protected !!