ಪ್ರಶಾಂತ್ ಪೂಜಾರಿ ಕೊಲೆ ಆರೋಪಿ ಬಂಧನ

ಉಡುಪಿ : ಬೈರಂಪಳ್ಳಿ ಗ್ರಾಮದ ದೂಪದಕಟ್ಟೆ ಎಂಬಲ್ಲಿ ಪ್ರಶಾಂತ ಪೂಜಾರಿ  ಕೊಲೆ ಪ್ರಕರಣದ  ಪ್ರಮುಖ  ಆರೋಪಿ  ಸಚಿನ್ ನಾಯ್ಕ್ ಎಂಬಾತನ  ಬಂಧನ . ಜುಲೈ 11 ರಂದು ವೈಷ್ಣವಿ ಬಸ್ಸಿನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದ ಪ್ರಶಾಂತ ಪೂಜಾರಿಯು ರಾತ್ರಿ ಮನೆಯಲ್ಲಿರುವ ಸಮಯ ಮಧರಾತ್ರಿ ಸರಿ ಸುಮಾರು 12 ಗಂಟೆಗೆ ಇಬ್ಬರು ಯುವಕರು ಮೋಟಾರು ಸೈಕಲ್‌ನಲ್ಲಿ ಪ್ರಶಾಂತ ಪೂಜಾರಿಯ ಮನೆಗೆ ಬಂದು ಮನೆ ಬಾಗಿಲು ಬಡಿದು ಪ್ರಶಾಂತ ಪೂಜಾರಿಯನ್ನು ಮನೆಯಿಂದ ಹೊರಗೆ ಕರೆಯಿಸಿ ಬಳಿಕ ಕತ್ತಿಯಿಂದ ಮೈ ಮೇಲೆ ಸಿಕ್ಕ ಸಿಕ್ಕಲ್ಲಿ ಕಡಿದು ಕೊಲೆ ಮಾಡಿದ ಬಳಿಕ ಆರೋಪಿಗಳು ಬಂದ ಮೋಟಾರು ಸೈಕಲ್‌ನ್ನು ಅಲ್ಲಿಯೇ ಸ್ವಲ್ಪ ದೂರದಲ್ಲಿ ಬಿಟ್ಟು ಪರಾರಿಯಾಗಿದ್ದು ಈ ಸಂಬಂಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ಆರೋಪಿ ರಕ್ಷಕ್ (19) ಎಂಬಾತನನ್ನು ಜುಲೈ 14 ರಂದು ಬಂಧಿಸಿ  ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಯು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುತ್ತಾನೆ. ಪ್ರಕರಣ ವರದಿಯಾದಂದಿನಿಂದ ಆರೋಪಿ ಸಚಿನ್ ನಾಯ್ಕ್ ತಲೆ ಮರೆಸಿಕೊಂಡಿದ್ದ
    ಬ್ರಹ್ಮಾವರ ವೃತ್ತ ನಿರೀಕ್ಷಕರು ಮತ್ತು ಹಿರಿಯಡ್ಕ ಠಾಣಾ ಪಿಎಸ್‌ಐರವರು ಮಾಹಿತಿ ಸಂಗ್ರಹಿಸುತ್ತಿದ್ದು  ಮಂಗಳವಾರ ಆರೋಪಿ ಸಂಜೆ ವೇಳೆ ಬೆಳ್ತಂಗಡಿ ತಾಲೂಕು ವೇಣೂರು ಮೂರ್ಜೆ ಕ್ರಾಸ್ ಬಸ್ಸು ನಿಲ್ದಾಣದ ಬಳಿ ಬಸ್ಸಿಗೆ ಕಾಯುತ್ತಿರುವ ಮಾಹಿತಿ ಆಧಾರದ ಮೇಲೆ ಹಿರಿಯಡ್ಕ ಠಾಣಾ ಪಿಎಸ್‌ಐ ಮತ್ತು ಸಿಬ್ಬಂದಿಗಳು ವೇಣೂರು ಮೂರ್ಜೆ ಕ್ರಾಸ್ ಬಸ್ಸು ನಿಲ್ದಾಣದ ಬಳಿ ವಶಕ್ಕೆ ಪಡೆದುಕೊಂಡಿದ್ದು ಆರೋಪಿ ಸಚಿನ್ ನಾಯ್ಕನನ್ನು (20) ದಸ್ತಗಿರಿ ಮಾಡಿರುತ್ತಾರೆ. ಆರೋಪಿ ಸಚಿನ್ ನಾಯ್ಕ, ರಕ್ಷಕ್ ಮತ್ತು ಕೊಲೆಯಾದ ಪ್ರಶಾಂತ ಪೂಜಾರಿ ಸ್ನೇಹಿತರಾಗಿದ್ದು, ಈ ಹಿಂದೆ ಪ್ರಶಾಂತ ಪೂಜಾರಿಯು ಉಡುಪಿಯ  ರಕ್ಷಕ್‌ನಿಗೆ ಮತ್ತು ಸಚಿನ್‌ಗೆ ರೂಪಾಯಿ 50,000/- ಸಾಲವನ್ನು ಉಡುಪಿಯ ಪಂಚಮಿ ಸೌಹಾರ್ದ ಸಹಕಾರಿ ಸಂಘದಿಂದ ಕೊಡಿಸಿದ್ದು ಈ ಬಗ್ಗೆ ಕಮಿಷನ್ ಆಗಿ ರಕ್ಷಕ್‌ನು ರೂಪಾಯಿ 5,000/- ವನ್ನು ಇಬ್ಬರಿಂದಲೂ ಪಡೆದುಕೊಂಡಿರುವುದಲ್ಲದೆ, ಬ್ಯಾಂಕಿನಿಂದ ಪಡೆದ ಸಾಲದಲ್ಲಿ ರೂಪಾಯಿ 20,000/-ವನ್ನು ಕೂಡಾ ಪ್ರಶಾಂತ ಪೂಜಾರಿ ಮತ್ತೆ ವಾಪಾಸು ಕೊಡುವುದಾಗಿ ಸಾಲ ಪಡೆದುಕೊಂಡಿರುತ್ತಾನೆ. ಪ್ರಶಾಂತ ಪೂಜಾರಿಯು ತೆಗೆದುಕೊಂಡ ಹಣವನ್ನು ವಾಪಾಸು ನೀಡದೆ ಸತಾಯಿಸುತ್ತಿದ್ದು, ಇದೇ ದ್ವೇಷದಿಂದ ಆರೋಪಿತರಾದ ರಕ್ಷಕ್ ಮತ್ತು ಸಚಿನ್ ನಾಯ್ಕರವರು ಸೇರಿ ದಿನಾಂಕ 11/07/2019ರಂದು ಬೈರಂಪಳ್ಳಿ ಗ್ರಾಮದ ದೂಪದ ಕಟ್ಟೆ ಎಂಬಲ್ಲಿರುವ ಪ್ರಶಾಂತ ಪೂಜಾರಿಯ ಮನೆಗೆ ಹೋಗಿ ಪ್ರಶಾಂತ ಪೂಜಾರಿಗೆ ಕತ್ತಿಯಿಂದ ಹೊಡೆದು  ಕೊಲೆ ಮಾಡಿರುತ್ತಾರೆ.  ಆರೋಪಿ ಸಚಿನ್ ನಾಯ್ಕ ಎಂಬಾತನ ಮೇಲೆ ಬೇರೆ ಯಾವುದೇ ಪ್ರಕರಣ ಇರುವುದಿಲ್ಲ. ಆರೋಪಿ ಸಚಿನ್ ನಾಯ್ಕನಿಗೆ ಮಾನ್ಯ ನ್ಯಾಯಾಲಯವು ತನಿಖೆಯ ಸಲುವಾಗಿ 4 ದಿನ  ಪೊಲೀಸ್ ಕಸ್ಟಡಿಗೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!