ನಾಳೆ ಶಾಲೆ-ಕಾಲೇಜುಗಳಿಗೆ ರಜೆ ಇಲ್ಲ. ಕಿಡಿಗೇಡಿಗಳಿಂದ ವಾಟ್ಸಾಪ್ನಲ್ಲಿ ರಜೆಯ ಬಗ್ಗೆ ಸುಳ್ಳುಸುದ್ದಿ

ಉಡುಪಿ :ಜಿಲ್ಲೆಯಲ್ಲಿ ನಾಳೆ(ಗುರುವಾರ ಜುಲೈ 25 ) ಯಾವುದೇ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ, ಕೆಲವೊಂದು ಕಿಡಿಗೇಡಿಗಳು ಕಳೆದ ಎರಡು ದಿನಗಳಿಂದ ಶಾಲೆಗೆ ರಜೆ ಎಂಬ ಮಾಧ್ಯಮಗಳ ವರದಿಯನ್ನು ತಿರುಚಿ ಜುಲೈ 25 ರಂದು ಶಾಲೆ ,ಕಾಲೇಜಿಗೆ ರಜೆ ಎಂಬ ತಲೆಬರಹದಡಿ ಪೋಸ್ಟರನ್ನು ವಾಟ್ಸಪ್ ಮೂಲಕ ಹರಿಯುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತ ಸ್ಪಷ್ಟನೆ ನೀಡಿದ್ದು ನಾಳೆ ಎಂದಿನಂತೆ ಶಾಲಾ-ಕಾಲೇಜು ತೆರೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ರಜೆಯ ಬಗ್ಗೆ ಯಾವುದೇ ಸುಳ್ಳು ಸುದ್ದಿಗೆ ಒಳಗಾಗದೆ ಮಕ್ಕಳನ್ನು ಶಾಲಾ-ಕಾಲೇಜಿಗೆ ಕಳುಹಿಸಲು ಜಿಲ್ಲಾಡಳಿತ ಮನವಿ ಮಾಡಿಕೊಂಡಿದ್ದೆ.

ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿದ ಮಳೆಯಿಂದ ಜಿಲ್ಲಾಡಳಿತವು ಮಂಗಳವಾರ ಹಾಗೂ ಬುಧವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿತ್ತು.

Leave a Reply

Your email address will not be published. Required fields are marked *

error: Content is protected !!