ಚುನಾವಣೆ ನಡೆಯುದಾದರೆ ನಾನು ರೆಡಿ -ಕಾಂಗ್ರೆಸ್ ಶಾಸಕ ಯು.ಟಿ.ಖಾದರ್

ಮಂಗಳೂರು –   “ಎಲೆಕ್ಷನ್ ಗೆ ಹೋಗಲು ನಾನು ತಯಾರಿದ್ದೇನೆ.  ಅದರೆ  ಅದು ಪಕ್ಷದಿಂದ ತೀರ್ಮಾನವಾಗ್ಬೇಕು. ನಾನು ವೈಯಕ್ತಿಕವಾಗಿ ಚುನಾವಣೆಗೆ ಹೋಗಲು ನಾಳೆಯೇ  ತಯಾರಾಗಿದ್ದೇನೆ. ಇವತ್ತು ಎರಡು ಬ್ಲಾಕ್ ಮೀಟಿಂಗ್ ಕೂಡ ಮಾಡಿ ಬಂದಿದ್ದೇನೆ‌”  ಎಂದು ಕಾಂಗ್ರೆಸ್ ಶಾಸಕ ಯು.ಟಿ.ಖಾದರ್  ಮಂಗಳೂರಿನಲ್ಲಿ  ಪತ್ರಕರ್ತರಿಗೆ ಹೇಳಿದರು.
ಬಿಜೆಪಿ ಇಷ್ಟೆಲ್ಲಾ ಮಾಡಿದ್ದು ಸರ್ಕಾರ ರಚಿಸುವ ಸಲುವಾಗಿ. ಅವರ ಉತ್ತಮವಾಗಿ ಕೆಲಸ ಮಾಡಿದ್ರೆ ನಾವು ಸಹಕಾರ ಕೊಡುತ್ತೇವೆ.ಆದ್ರೆ ಈ ಜಂಜಾಟದಲ್ಲಿ ಅವರು ಅದೇಗೆ ಸರ್ಕಾರ ಮಾಡುತ್ತಾರೆ?.
 ಬಹುಮತ ಇದ್ದಾಗಲೆ ಮೂರು ಜನ ಸಿಎಂ ಬದಲಾಯಿಸಿದರು .
ವಿಶ್ವಾಸ ಮತದ ವೇಳೆ ಬಿಜೆಪಿಯವರಿಂದ 1000 ಕೋಟಿ ಹಗರಣ ಆರೋಪ ವಿಚಾರ  ಮಾಜಿ ಸಚಿವ ಯು.ಟಿ.ಖಾದರ್.ತನ್ನ ಆರೋಪವನ್ನ ಸಮರ್ಥಿಸಿಕೊಳ್ಳುತ್ತಾ “ನಾನು ಅರೋಪ ಮಾಡಿದ್ದು , ಮಾದ್ಯಮಗಳಲ್ಲಿ ಬಂದಿದ್ದನ್ನು ನೋಡಿ. ಆಡೀಯೋ ರಿಲೀಸ್ ನಲ್ಲಿ 30,40,50 ಕೋಟಿ ಅಂತಾ ಇತ್ತು.ಅದೆಲ್ಲಾ ಅಷ್ಟು ಶಾಸಕರಿಗೆ ಎಷ್ಟಾಗುತ್ತೆ ಅಂತಾ ಲೆಕ್ಕಾಚಾರ ಮಾಡಿದೆ ಅಲ್ಲದೆ ಬಾಂಬೆ , ಪುಣೆ, ವಿಮಾನದ ಖರ್ಚು ಎಲ್ಲಾ ಸೇರಿದರೆ ಸಾವಿರ ಕೋಟಿ ಆಗುತ್ತೆ.ಇದನ್ನು ಲೆಕ್ಕ ಹಾಕಿ ಹೇಳಿದೆ ಹೊರತು ಎಷ್ಟು ಕೊಟ್ಟಿದ್ದಾರೆ ಅನ್ನುವುದು ನನಗೂ ಗೊತ್ತಿಲ್ಲ ಎಂದರು ಇದು ಶಾಸಕರು ಹೊರಗಡೆ ಬಂದ ಬಳಿಕ ಗೊತ್ತಾಗುತ್ತೆ..ಸಮನ್ವಯತೆ ನಮ್ಮ ನಡುವೆ ಚೆನ್ನಾಗಿದೆ.ಈಗ ಮೈತ್ರಿ ಮತ್ತೆ ಗಟ್ಟಿಯಾಗಿದೆ.ಸರಿಯಿಲ್ಲದವರು ಬಿಟ್ಟು ಹೋಗಿದ್ದಾರೆ.  ಎಂದು ಯು.ಟಿ.ಖಾದರ್ ಈ ಸಂದರ್ಭದಲ್ಲಿ ಹೇಳಿದರು…

Leave a Reply

Your email address will not be published. Required fields are marked *

error: Content is protected !!