ನಮ್ಮೂರ ಹೆಮ್ಮೆಯ ಸೈನಿಕ

ಉಡುಪಿ ಜಿಲ್ಲೆಯಲ್ಲಿ ಬರುವ ಸುಂದರ ಪ್ರಕೃತಿ ಮಾತೆಯ ಹಸಿರಿನ ಒಪ್ಪು ಓರಣಗಳಿಂದ ಕಂಗೋಳಿಸುವ ನಮ್ಮೂರು ಆವರ್ಸೆ.

ಧರೆಯೊಳು ಸುಪ್ರಸಿದ್ಧವೆನಿಸಿದ ಪಂಚ ಶಂಕರನಾರಾಯಣ ದೇವಸ್ಥಾನಗಳಲ್ಲಿ ಒಂದಾದ ಆವರ್ಸೆ ಶ್ರೀ ಶಂಕರನಾರಾಯಣ ದೇವರು ನಮ್ಮೂರ ಗ್ರಾಮ ದೇವರು ಹಾಗೂ ನಮ್ಮೆಲ್ಲರ ಕಾಯೋ ದೇವರು. ಎತ್ತರದಿಂದ ಹರಿದು ಬರುವ ಸೀತಾ ನದಿ ನಮ್ಮೂರ ಜೀವನದಿ ಹಾಗೂ ಜೀವನಾಡಿ.

ಆವರ್ಸೆ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆ ನಮ್ಮೂರ ಜ್ಞಾನ ಕೇಂದ್ರ. ಸಾವಿರ ಸಂಖ್ಯೆಯ ವಿದ್ಯಾರ್ಥಿಗಳ ಜ್ಞಾನದ ಹಸಿವೆಯನ್ನು ನೀಗಿಸಿದ್ದು ಈ ಸಂಸ್ಥೆಯ ಹೆಮ್ಮೆ. ದೇಶ ಕಾಯುವ ಸೈನಿಕರನ್ನು ದೇಶಕ್ಕೆ ಅನ್ನ ನೀಡುವ ರೈತರನ್ನು ಸಾಹಿತಿಗಳನ್ನು ಕಲಾವಿದರನ್ನು ವೈದ್ಯರನ್ನು ವಕೀಲರನ್ನು ಶಿಕ್ಷಕರನ್ನು ಸಮಾಜಕ್ಕೆ ಕೊಟ್ಟ ಹೆಮ್ಮೆ ಈ ಎರಡು ಶಿಕ್ಷಣ ಸಂಸ್ಥೆಗಳದ್ದು.

ಆವರ್ಸೆ ಹತ್ತಿರದಲ್ಲಿ ಚೋರಾಡಿ ಎನ್ನುವ ಪುಟ್ಟ ಪ್ರದೇಶದಲ್ಲಿ 1985ನೇ ಇಸವಿ ಮೇ 5ನೇ ತಾರೀಕಿನಂದು ನಾಗಯ್ಯ ಶೆಟ್ಟಿ ಹಾಗೂ ಗಿರಿಜಮ್ಮ ದಂಪತಿಗಳ 3ನೇ ಮಗನಾಗಿ ಪ್ರಭಾಕರ್ ಶೆಟ್ಟಿ ಅವರು ಜನಿಸಿದರು.
ಪ್ರಭಾಕರ್ ಶೆಟ್ಟಿಯವರು ತಮ್ಮ ಪ್ರಾರ್ಥಮಿಕ ಶಿಕ್ಷಣವನ್ನು ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆ ಚೋರಾಡಿಯಲ್ಲಿ ಮುಗಿಸಿದರು. ತದನಂತರ ಆವರ್ಸೆ ಸರಕಾರಿ ಪ್ರೌಢ ಶಾಲೆಯೆಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಮುಗಿಸಿದರು.

ನಂತರ ಪದವಿಪೂರ್ವ ಶಿಕ್ಷಣಕ್ಕಾಗಿ ಶ್ರೀ ದುರ್ಗಾಪರಮೇಶ್ವರಿ ಪದವಿ ಪೂರ್ವ ಕಾಲೇಜ್ ಮಂದರ್ತಿ ಸೇರಿಕೊಂಡರು. ಪಿ ಯು ಸಿ ಮುಗಿದ ಮೇಲೆ ಶ್ರೀಮತಿ ರುಕ್ಮಿಣೀ ಶೆಡ್ತಿ ಸ್ಮಾರಕ ನ್ಯಾಷನಲ್ ಪದವಿ ಕಾಲೇಜು ಬಾರ್ಕೂರಿನಲ್ಲಿ ಕಲಾ ವಿಭಾಗದಲ್ಲಿ ತಮ್ಮ ಪದವಿಯನ್ನು ಮುಗಿಸಿದರು.

ಚಿಕ್ಕಂದಿನಿಂದಲು ದೇಶಾಭಿಮಾನವನ್ನು ಬೆಳೆಸಿಕೊಂಡ ಪ್ರಭಾಕರ್ ಅವರು ಮುಂದೊಂದು ದಿನ ಭಾರತೀಯ ಸೈನ್ಯವನ್ನು ಸೇರಬೇಕು ದೇಶಕ್ಕಾಗಿ ದುಡಿಯಬೇಕು ಎನ್ನುವ ಹೆಬ್ಬಯಕೆಯನ್ನು ಹೊಂದಿದ್ದರು.
ಸೈನ್ಯಕ್ಕೆ ಸೇರಬೇಕು ಎನ್ನುವ ಕಾರಣಕ್ಕಾಗಿ ಪದವಿ ಶಿಕ್ಷಣ ಮುಗಿದ ನಂತರ ತಮ್ಮ ಪ್ರಯತ್ನವನ್ನು ಮುಂದುವರಿಸುತ್ತಾರೆ. ಸೇನೆಗೆ ಸೇರಬೇಕಾದರೆ ಕಟ್ಟು ಮಸ್ತಿನ ದೇಹವಿದ್ದರೆ ಸಾಲದು ಭಾವ್ಯ ಭರತಭೂಮಿಯನ್ನು ಹೃದಯದವೆಂಬ ತೊಟ್ಟಿಲಿನಲಿಟ್ಟು ಪೂಜಿಸುವ ಮನಃಸ್ಥಿತಿ ಕೂಡ ಇರಬೇಕು.

ಅದೊಂದು ಸುಂದರ ಶ್ರಾವಣ ಕಾಲ. ಹಳ್ಳಿ ಹುಡುಗನ ಅದ್ರಷ್ಟ ಬದಲಾಗುವ ಕಾಲ ಬಂದೇ ಬಿಟ್ಟಿತು. ಬಹುದಿನಗಳ ಪರಿಶ್ರಮಕ್ಕೆ ಫಲ ದೊರಕೀತು. 2006ರಲ್ಲಿ ಹಾಸನದಲ್ಲಿ ನಡೆದ ಭೂಸೇನಾ ನೇಮಕಾತಿ ಶಿಬಿರದಲ್ಲಿ ಪ್ರಭಾಕರ್ ಅವರು ಭಾರತೀಯ ಭೂಸೇನೆಗೆ ಆಯ್ಕೆಯಾದರು.

ಒಂದೆಡೆ ಸೈನ್ಯಕ್ಕೆ ಸೇರಿದ ಖುಷಿ ಇನ್ನೊಂದೆಡೆ ಪೋಸ್ಟಿಂಗ್ ಆಗಿರುವುದು ಜಮ್ಮು ಕಾಶ್ಮೀರಕ್ಕೆ…….ಜಮ್ಮು ಕಾಶ್ಮೀರ ಭಾರತದ ಭೂ ಭಾಗವೇ ಆಗಿದ್ದರು ಕಣ್ಣ ಮುಂದೆ ಸಾವಿನ ರುದ್ರ ನರ್ತನ ನಡೆಯುವ ಭಯಾನಕ ಜಗತ್ತು.
ಬಂದುದೆಲ್ಲವು ಬರಲಿ ಜೊತೆಗೆ ತೀರ್ಥ ವಿನಾಯಕನ ದಯವಂದಿರಲಿ ಎಂದು ಹಳ್ಳಿ ಹುಡುಗ ದಿಲ್ಲಿಯ ಕಡೆ ಪ್ರಯಾಣ ಬೆಳೆಸುತ್ತಾನೆ.

ಮೈ ಕೊರೆಯುವ ಚಳಿ,ಮಳೆ ಹಿಮಪಾತ,ಇಂದು ಜೊತೆಗಿರುವವನು ನಾಳೆ ಜೊತೆಗಿರುವನೋ ಎಲ್ಲವೊ ಎನ್ನುವ ನೋವು. ಇದನೆಲ್ಲ ಸಹಿಸಿಕೊಂಡು ಸತತ 10 ವರ್ಷ ಅಂದರೆ 2006 ರಿಂದ 2016 ರರ ತನಕ ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದರು. ಪ್ರಸ್ತುತ ಪ್ರಭಾಕರ್ ಅವರು ಗುಜರಾತ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಸ್ತುತ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಪ್ರಭಾಕರ್ ಅವರು 2011 ರಲ್ಲಿ ನಾಗರತ್ನ ಶೆಟ್ಟಿ ಎನ್ನುವವರನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪ್ರಭಾಕರ್ ಅವರೇ ನಿಮ್ಮನ್ನು ನಮ್ಮ ಅವರ್ಸೆಯ ಮಣ್ಣಿನ ಮಗ ಎಂದು ಹೇಳಿಕೊಳ್ಳುದಕ್ಕೆ ನಮಗೆ ಅಪಾರವಾದ ಹೆಮ್ಮೆ ಇದೆ.

ತಂದೆ ತಾಯಿ ಕೃಷಿಯನ್ನು ಮಾಡಿಕೊಂಡು ಮಗನಿಗೆ ವಿದ್ಯಾಭ್ಯಾಸ ನೀಡಿ ಭಾರತ ಮಾತೆಯ ಸೇವೆ ಮಾಡುದಕ್ಕೆ ಅವಕಾಶ ಮಾಡಿಕೊಟ್ಟ ನಿಮಗೆ ನಮ್ಮೂರ ಜನರ ಪರವಾಗಿ ಅಭಿನಂದನೆಗಳು. ಅವರ್ಸೆಯ ಮಣ್ಣಿನಲ್ಲಿ ಹುಟ್ಟಿ ತೀರ್ಥವಿನಾಯಕನ ಸನ್ನಿಧಾನದಲ್ಲಿ ಬೆಳೆದ ನಿಮ್ಮ ಕೀರ್ತಿ ಜಗವೆಲ್ಲ ಬೆಳಗಲಿ.

ದೇಶ ಕಾಯುವ ಕಾಯಕವನ್ನು ಆಯ್ಕೆ ಮಾಡಿಕೊಂಡು ನಮ್ಮೂರಿಗೆ ಗೌರವವನ್ನು ತಂದುಕೊಟ್ಟ ನಿಮಗೆ ಅನಂತ ಅನಂತ ಧನ್ಯವಾದಗಳು.
ನಾವೆಲ್ಲರೂ ಅನುದಿನವು ಆರಾಧಿಸುವ ಆರಾಧ್ಯ ಮೂರ್ತಿ ಮಂದರ್ತಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ಆಯಸ್ಸು ಆರೋಗ್ಯ ಭಾಗ್ಯವನಿತ್ತು ಸದಾ ಕಾಲ ಸಲಹಲಿ.

Leave a Reply

Your email address will not be published. Required fields are marked *

error: Content is protected !!