ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ “ಸುಧಾರಿತ ಯೂರೋಡೈನಾಮಿಕ್ ಪ್ರಯೋಗಾಲಯ”ದ ಉದ್ಘಾಟನೆ
ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸುಧಾರಿತ ಯೂರೋಡೈನಾಮಿಕ್ ಪ್ರಯೋಗಾಲಯವನ್ನು ಮಾಜಿ ಸಚಿವ ,ಶಾಸಕರಾದ ಹೆಚ್.ಕೆ ಪಾಟೀಲ ಉದ್ಘಾಟಿಸಿದರು .
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಹೆಚ್ ಕೆ ಪಾಟೀಲ್ ಅವರು “ಭಾರತವು ಮಣಿಪಾಲದ ಬಗ್ಗೆ ಹೆಮ್ಮೆಪಡುತ್ತದೆ, ಏಕೆಂದರೆ ವಿಶ್ವದಾದ್ಯಂತ 500ರೊಳಗೆ ಸ್ಥಾನ ಪಡೆದಿರುವ ಏಕೈಕ ವಿಶ್ವವಿದ್ಯಾಲಯ ಮಾಹೆ ಮಣಿಪಾಲ ಆಗಿದೆ. ಉತ್ತರ ಕರ್ನಾಟಕದ ಜನರು ಶ್ರೀಯುತ ಪೈ ಅವರನ್ನು ರೂಪೈ ಎಂದು ಕರೆಯುತ್ತಾರೆ. ಏಕೆಂದರೆ ಅವರು ಶಿಕ್ಷಣ, ಆರೋಗ್ಯ ಮತ್ತು ಹಣಕಾಸು ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಮಣಿಪಾಲ ಸಮೂಹವನ್ನು ಉತ್ತಮ ಹಾಗೂ ಮಾದರಿ ಸಂಸ್ಥೆಯಾಗಿ ಅಭಿವೃದ್ಧಿಹೊಂದಿದೆ, ಏಕೆಂದರೆ ಇದು ಉತ್ತಮ ದೂರದೃಷ್ಟಿತ್ವದ ನಾಯಕ, ಸಮರ್ಥ ಆಡಳಿತಗಾರರು ಮತ್ತು ಶ್ರಮಜೀವಿಗಳನ್ನು ಕೆಲಸಗಾರರನ್ನಾಗಿ ಪಡೆದುಕೊಂಡಿದೆ. ಆರೋಗ್ಯ ಮತ್ತು ಗುಣಮಟ್ಟದ ಚಿಕಿತ್ಸೆಯಲ್ಲಿ ಮಣಿಪಾಲ ತನ್ನ ಶ್ರೇಷ್ಠತೆಗೆ ಹೆಸರುವಾಸಿಯಾಗಿದೆ” ಎಂದರು.
ಮೂತ್ರಕೋಶ, ಮೂತ್ರಾಂಗವ್ಯೂಹದ ಸ್ಫಿಂಕ್ಟರ್ (ಉಂಗುರದಂಥ ಮುಚ್ಚಳ) ಮತ್ತು ಪೆಲ್ವಿಕ್ ಫ್ಲೋ ಎಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತಿಳಿದುಕೊಳ್ಳಲು ಯೂರೋಡೈನಾಮಿಕ್ ಅಧ್ಯಯನಗಳು ಮುಖ್ಯ. ಹಾಗಾಗಿ, ಡಿಟ್ರಸರ್ (ಮೂತ್ರಾಶಯದ ಸ್ನಾಯು) ಕಾರ್ಯಾಚರಣೆ, ಮೂತ್ರಾಂಗವ್ಯೂಹದ ಸ್ಫಿಂಕ್ಟರ್ ಮತ್ತು ಪೆಲ್ವಿಕ್ ಫ್ಲೋ ಚಟುವಟಿಕೆಗಳನ್ನು ವಿಶ್ಲೇಷಿಸಲು ಇದನ್ನು ಉಪಯೋಗಿಸಲಾಗುತ್ತದೆ. ಮೂತ್ರ ಸೋರಿಕೆ, ಅವಸರದ ಮೂತ್ರ ವಿಸರ್ಜನೆಯ ರೋಗಿಗಳಲ್ಲಿ ಈ ತೊಂದರೆಗಳಿಗೆ ಕಾರಣವೇನು ಎಂಬುದನ್ನು ಕಂಡುಕೊಳ್ಳಲು ವಿಶೇಷ ಉಪಕರಣ ಬಳಸಿ ಮಾಡಿದ ಅಧ್ಯಯನಗಳು ಬಹಳಷ್ಟು ಸಹಕಾರಿಯಾಗಿವೆ.
ಯೂರೋಡೈನಾಮಿಕ್ ಅಧ್ಯಯನವು ಮೂತ್ರ ಬರಿದುಮಾಡುವ ತೊಂದರೆ ಇರುವ ಪಾರ್ಕಿನ್ಸನ್ಸ್ ರೋಗಿಗಳಿಗೆ, ಮೂತ್ರನಾಳದ ತೊಂದರೆಯಿರುವ ಪುರುಷರಲ್ಲಿ ಬೆನ್ನುಹುರಿಯಲ್ಲಿ ಹಾನಿಯಾಗುವುದನ್ನು ತಡೆಯಲು, ಮೂತ್ರ ಹಿಡಿದಿಟ್ಟುಕೊಳ್ಳುವ ಸಮಸ್ಯೆ ಇರುವ ಸ್ತ್ರೀಯರಿಗೆ, ಮಕ್ಕಳಲ್ಲಿ ಮೂತ್ರದ ತೆರಪು ಹಿಂಭಾಗದಲ್ಲಿ ಇರುವ ಸಮಸ್ಯೆ (ಪೋಸ್ಟೀರಿಯರ್ ಯುರೆಥ್ರಲ್ ವಾಲ್ವ್) ಮತ್ತು ಸೆಕೆಂಡರಿ ವಿಯುಅರ್ ಇರುವವರಲ್ಲಿ ಈ ಸಮಸ್ಯೆಗಳ ನಿರ್ವಹಣೆಗೆ ಮಾರ್ಗದರ್ಶನ ನೀಡಲು ಮತ್ತು ಅನುಸರಣೆಗೆ ಯೂರೋಡೈನಾಮಿಕ್ ಅಧ್ಯಯನ ಸಹಾಯ ಮಾಡುತ್ತದೆ. ಮೂತ್ರ ಬರಿದು ಮಾಡುವಿಕೆಯ ಹಲವು ದರ್ಜೆಯ ತೊಂದರೆಗಳಿರುವ ರೋಗಿಗಳಿಗೆ ಚಿಕಿತ್ಸಾ ತಂತ್ರಗಳನ್ನು ಯೋಜಿಸಲು ಯೂರೋಡೈನಾಮಿಕ್ಸ್ ಅಧ್ಯಯನ ನೆರವಾಗುತ್ತದೆ.