ಕಟಪಾಡಿ : ಸಂತ ವಿನ್ಸೆಂಟ್ ಡಿ ಪಾವ್ಲ್ ದೇವಾಲಯದಲ್ಲಿ ಪ್ರತಿಭಾ ಪುರಸ್ಕಾರ ವಿತರಣೆ

ಉಡುಪಿ: ಸಂತ ವಿನ್ಸೆಂಟ್ ದಿ ಪಾವ್ಲ್ ದೇವಾಲಯ ಕಟಪಾಡಿ ಇದರ ಕೆಥೊಲಿಕ್ ಸಭಾ ಘಟಕ, ಕೌಟಂಬಿಕ ಆಯೋಗ ಮತ್ತು ಧಾರ್ಮಿಕ ಆಯೋಗದ ಜಂಟಿ ಸಹಯೋಗದೊಂದಿಗೆ ಭಾನುವಾರ ಪ್ರತಿಭಾ ಪುರಸ್ಕಾರ, ಯುವಕರ ದಿನಾಚರಣೆ ಮತ್ತು ಹೆತ್ತವರ ದಿನಾಚರಣೆಯನ್ನು ನಡೆಯಿತು .
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚರ್ಚಿನ ಧರ್ಮ ಗುರುಗಳಾದ ವಂ|ರೋನ್ಸನ್ ಡಿಸೋಜಾ ಅವರು ವಿದ್ಯಾರ್ಥಿಗಳು ತಮ್ಮ ಕಲಿಕೆಯೊಂದಿಗೆ ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದಿರಬೇಕು ಈ ಮೂಲಕ ಸಮಾಜದ ಹಾಗೂ ದೇಶದ ಯಶಸ್ವಿ ನಾಗರಿಕರಾಗಿ ಬಾಳುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಹತ್ತನೇ ತರಗತಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಸಲಾಯಿತು. ಇದೇ ವೇಳೆ ಯಾಜಕರ ದಿನಾಚರಣೆಯ ನೆನಪಿಗಾಗಿ ಹೋಲಿಕ್ರೋಸ್ ಸೆಮನರಿಯ ಧರ್ಮಗುರುಗಳಾದ ವಂ|ಡೆರೆನ್ಸ್ ಮತ್ತು ವಂ ಡಾಯಸ್ ಇವರುಗಳನ್ನು ಹಾಗೂ ಚರ್ಚಿನಲ್ಲಿ 50 ವರ್ಷ ವೈವಾಹಿಕ ಜೀವನ ಪೊರೈಸಿದ ವಿನ್ಸೆಂಟ್ ಮತ್ತು ಐಡಾ ಡಿಸೋಜಾ ದಂಪಂತಿಯನ್ನು ಸನ್ಮಾನಿಸಲಾಯಿತು.
ವಾಲ್ಟರ್ ರೊಜಾರಿಯೊ, ಗ್ರೇಸಿ ಮೊಂತೆರೋ ಮತ್ತು ಸಲೋನಿ ಇವರುಗಳು ಹೆತ್ತವರು ಮತ್ತು ಯಾಜಕರ ಸೇವೆಯ ಕುರಿತು ಅಭಿಪ್ರಾಯ ಹಂಚಿಕೊಂಡರು.
ಚರ್ಚಿನ ಪಾಲನಾ ಸಮಿಯ ಉಪಾಧ್ಯಕ್ಷರಾದಲೆಸ್ಲಿಸುವಾರಿಸ್, ಕಾರ್ಯದರ್ಶಿ ಕ್ಯಾಥರಿನ್ ರೊಡ್ರಿಗಸ್, 18 ಆಯೋಗಗಳ ಸಂಚಾಲಕ ವಿಲ್ಪ್ರೇಡ್ ಲೂವಿಸ್, ಕುಂಟುಂಬ ಆಯೋಗದ ಸಂಚಾಲಕಿ ಶಾಂತಿ ಮೊಂತೆರೋ, ಕಥೊಲಿಕ್ ಸಭಾ ಅಧ್ಯಕ್ಷರಾದ ಬ್ರಾಯನ್ ಕೊರೆಯಾ, ಕಾರ್ಯದರ್ಶಿ ನೆಲ್ಸನ್ ಬಾರ್ನೇಸ್ ಉಪಸ್ಥಿತರಿದ್ದರು.
ಲವೀನಾ  ಪಿರೇರಾ ಸ್ವಾಗತಿಸಿ ಅಲ್ವಿಟಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!