ಸೌತ್ ಇಂಡಿಯನ್ ಬಿಸಿನೆಸ್ ಅವಾರ್ಡ್ ವಿನ್ನರ್ ಅಹಮದ್ ಗೆ ಜೆಸಿಐ ಸೊರಬ ಸಿಂಧೂರದಿಂದ ಸನ್ಮಾನ

 ಮೈಸೂರಿ:  ಸೈರಾಫಿಲ್ಸ್ ಮೀಡಿಯಾ ಮತ್ತು ರೀಸರ್ಚ್ ಪ್ರೈ. ಲಿಮಿಟೆಡ್  ಇತ್ತೀಚೆಗೆ ಏರ್ಪಡಿಸಿದ್ದ ಜಲ್ ಮಹಲ್ ರೆಸಾರ್ಟ್ ನಲ್ಲಿ  ,”ಸೌತ್ ಇಂಡಿಯನ್ ಬಿಸಿನೆಸ್ ಅವಾರ್ಡ್ – 2019″ರ  ವೆಡ್ಡಿಂಗ್ ಪ್ಲಾನರ್ಸ್ ಕೆಟಗರಿಯಲ್ಲಿ ಮಲೆನಾಡು  ವೆಡ್ಡಿಂಗ್ ಪ್ಲಾನರ್ಸ್ ಎಂಬ ಸಂಸ್ಥೆಗೆ ಬೆಸ್ಟ್ ವೆಡ್ಡಿಂಗ್ ಪ್ಲಾನರ್ಸ್ ಎಂಬ ಪ್ರಶಸ್ತಿ ಬಂದಿದೆ .ಇದರ ಮಾಲೀಕರಾದ ಜೆಸಿಐ ಸೊರಬ ವೈಜಯಂತಿ ನಿರ್ದೇಶಕರು ಜಾವೀದ್ ಅಹ್ಮದ್ ಇವರು ಪಡೆದುಕೊಂಡಿರುತ್ತಾರೆ, ಜಾಹೀದ್ ಇವರ ಶ್ರಮ ಮತ್ತು ಕೊಡುಗೆ ಆಧರಿಸಿ ಪ್ರಶಸ್ತಿ ನೀಡಲಾಗಿತ್ತು .
ಇವರ ಪ್ರತಿಭೆ ಹಾಗೂ ಸೇವೆಯನ್ನು ಗುರುತಿಸಿ ಜೆಸಿಐ ಸೊರಬ ಸಿಂಧೂರ ಹಾಗೂ ದೊಡ್ಡಮನೆ ರಾಮಪ್ಪ  ಶ್ರೀಧರ್ (DRS) ಸೇವಾ ಟ್ರಸ್ಟ್ ವತಿಯಿಂದ ಇವರನ್ನು ಸನ್ಮಾನಿಸಲಾಯಿತು .
ಈ ಕಾರ್ಯಕ್ರಮದಲ್ಲಿ ಜೆಸಿಐ ಸೊರಬ ಸಿಂಧೂರ ಘಟಕದ ಅಧ್ಯಕ್ಷರಾದ ಪೂಜಾ ಪ್ರಶಾಂತ್ ದೊಡ್ದಮನೆ, ಉಷಾ ಸಿದ್ಧಲಿಂಗ ಸ್ವಾಮಿ ,ರೂಪಾ ಮಧುಕೇಶ್ವರ್ ಜ್ಯೋತಿ ಶಿವಕುಮಾರ್, ಆರತಿ ಮಹಾಂತೇಶ್ ,ವೀಣಾ ವಿನಯ್ ಕುಮಾರ್ ,ಗೀತಾ ನಿಂಗಪ್ಪ ,ಮಂಜುಳಾ ಸುರೇಶ್, ಗೀತಾ ಮಲ್ಲಿಕಾರ್ಜುನ್, ಶ್ರೀಮತಿ ಜೋಶಿ ,ದೊಡ್ಡಮನೆ ರಾಮಪ್ಪ  ಶ್ರೀಧರ ಸೇವಾ ಟ್ರಸ್ಟ್  ಅಧ್ಯಕ್ಷರಾದ ಪ್ರಶಾಂತ್ ದೊಡ್ಡಮನೆ, ಪಟ್ಟಣ ಪಂಚಾಯಿತಿ ಸದಸ್ಯೆ ಶ್ರೀರಂಜಿನಿ ಪ್ರವೀಣ್ ಕುಮಾರ್,ಸರಸ್ವತಿ ನಾವುಡ, ರೇಖಾ  ಲೆಕಪ್ಪ ,  ವಿಜಯಲಕ್ಷ್ಮಿ,  ಜೆಸಿಐ ಸೊರಬ ವೈಜಯಂತಿ ಅಧ್ಯಕ್ಷರಾದ ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!