ವೈದ್ಯಕೀಯ ವೃತ್ತಿ ಪವಿತ್ರವಾದದ್ದು : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಡಾ। ಪಿ.ಎಸ್ ಭಟ್

ಉಡುಪಿ: ಯಶಸ್ಸಿಗೆ ಕಠಿಣ ಪರಿಶ್ರಮವೊಂದೇ ಮಾರ್ಗ.  ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರವಾದದ್ದು ಎಂದು  ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾಧ್ಯಾಪಕ , ಖ್ಯಾತ ಹೃದಯ ರೋಗ ಚಿಕಿತ್ಸಕ, ಕರ್ನಾಟಕ  ರಾಜ್ಯೋತ್ಸವ   ಪ್ರಶಸ್ತಿ ಪುರಸ್ಕೃತ  ಡಾ। ಪಿ.ಎಸ್ ಸೀತಾರಾಮ ಭಟ್ ಅಭಿಪ್ರಾಯ ಪಟ್ಟರು.  ಅವರು ಭಾರತೀಯ ವೈದ್ಯಕೀಯ ಸಂಘ, ಉಡುಪಿ ಶಾಖೆ ಹೋಟೆಲ್ ಕಿದಿಯೂರ್ ನಲ್ಲಿ ಆಯೋಜಿಸಿದ್ದ ವೈದ್ಯರ ದಿನಾಚರಣೆ ಸಮಾರಂಭದಲ್ಲಿ  ಮುಖ್ಯ ಅತಿಥಿಯಾಗಿ ಮಾತನಾಡುತಿದ್ದರು.

   

ಈ ವರ್ಷದ ಡಾ| ಬಿ.ಸಿ.ರಾಯ್  ಪ್ರಶಸ್ತಿಯನ್ನು ಖ್ಯಾತ ವೈದ್ಯರಾದ ಡಾ| ಎಂ. ಎಸ್  ಉರಾಳ, ಡಾ। ದಮಯಂತಿ ಕೆ.ಎಂ., ಡಾ| ಜೆ.ಸಿ ದೇವಾಡಿಗ ಇವರುಗಳಿಗೆ ಕೊಡ ಮಾಡಲಾಯಿತು. ಅಧ್ಯಕ್ಷರ  ವಿಶೇಷ ಪ್ರಶಸ್ತಿಯನ್ನು  ಡಾ। ಕೇಶವ ನಾಯಕ್ ಇವರಿಗೆ ನೀಡಲಾಯಿತು.

  

ಈ ಸಂಧರ್ಭದಲ್ಲಿ ವೃತ್ತಿ ಮಿತ್ರರಿಗೆ ನಡೆಸಿದ ಒಳಾಂಗಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.     ಕಾರ್ಯದರ್ಶಿ ಡಾ| ಕೃಷ್ಣಾನಂದ ಮಲ್ಯ , ಸಹ ಖಜಾಂಜಿ ಡಾ। ರಾಜಗೋಪಾಲ ಭಂಡಾರಿ ಉಪಸ್ಥಿತರಿದ್ದರು    ಉಡುಪಿ ಕರಾವಳಿ  ಐಎಮ್ಎ ಅಧ್ಯಕ್ಷ  ಡಾ। ಗುರುಮೂರ್ತಿ ಭಟ್ ಸ್ವಾಗತಿಸಿದರು. ಡಾ| ಗಣಪತಿ ಹೆಗ್ಡೆ ವಂದಿಸಿದರು. ಡಾ| ರಮಾ  ಎ ಶೆಟ್ಟಿ ನಿರೂಪಿಸಿದರು.  ಸಭಾ  ಕಾರ್ಯಕ್ರಮದ   ಬಳಿಕ ಡಾ| ಅಭಿಷೇಕ್ ಕೊರಡ್ಕಲ್ ಅವರಿಂದ ಸಂಗೀತ ರಸಮಂಜರಿ   ಸಂಪನ್ನಗೊಂಡಿತು.

Leave a Reply

Your email address will not be published. Required fields are marked *

error: Content is protected !!