ವೈದ್ಯಕೀಯ ವೃತ್ತಿ ಪವಿತ್ರವಾದದ್ದು : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ। ಪಿ.ಎಸ್ ಭಟ್
ಉಡುಪಿ: ಯಶಸ್ಸಿಗೆ ಕಠಿಣ ಪರಿಶ್ರಮವೊಂದೇ ಮಾರ್ಗ. ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರವಾದದ್ದು ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾಧ್ಯಾಪಕ , ಖ್ಯಾತ ಹೃದಯ ರೋಗ ಚಿಕಿತ್ಸಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ। ಪಿ.ಎಸ್ ಸೀತಾರಾಮ ಭಟ್ ಅಭಿಪ್ರಾಯ ಪಟ್ಟರು. ಅವರು ಭಾರತೀಯ ವೈದ್ಯಕೀಯ ಸಂಘ, ಉಡುಪಿ ಶಾಖೆ ಹೋಟೆಲ್ ಕಿದಿಯೂರ್ ನಲ್ಲಿ ಆಯೋಜಿಸಿದ್ದ ವೈದ್ಯರ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತಿದ್ದರು.
ಈ ವರ್ಷದ ಡಾ| ಬಿ.ಸಿ.ರಾಯ್ ಪ್ರಶಸ್ತಿಯನ್ನು ಖ್ಯಾತ ವೈದ್ಯರಾದ ಡಾ| ಎಂ. ಎಸ್ ಉರಾಳ, ಡಾ। ದಮಯಂತಿ ಕೆ.ಎಂ., ಡಾ| ಜೆ.ಸಿ ದೇವಾಡಿಗ ಇವರುಗಳಿಗೆ ಕೊಡ ಮಾಡಲಾಯಿತು. ಅಧ್ಯಕ್ಷರ ವಿಶೇಷ ಪ್ರಶಸ್ತಿಯನ್ನು ಡಾ। ಕೇಶವ ನಾಯಕ್ ಇವರಿಗೆ ನೀಡಲಾಯಿತು.
ಈ ಸಂಧರ್ಭದಲ್ಲಿ ವೃತ್ತಿ ಮಿತ್ರರಿಗೆ ನಡೆಸಿದ ಒಳಾಂಗಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯದರ್ಶಿ ಡಾ| ಕೃಷ್ಣಾನಂದ ಮಲ್ಯ , ಸಹ ಖಜಾಂಜಿ ಡಾ। ರಾಜಗೋಪಾಲ ಭಂಡಾರಿ ಉಪಸ್ಥಿತರಿದ್ದರು ಉಡುಪಿ ಕರಾವಳಿ ಐಎಮ್ಎ ಅಧ್ಯಕ್ಷ ಡಾ। ಗುರುಮೂರ್ತಿ ಭಟ್ ಸ್ವಾಗತಿಸಿದರು. ಡಾ| ಗಣಪತಿ ಹೆಗ್ಡೆ ವಂದಿಸಿದರು. ಡಾ| ರಮಾ ಎ ಶೆಟ್ಟಿ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಡಾ| ಅಭಿಷೇಕ್ ಕೊರಡ್ಕಲ್ ಅವರಿಂದ ಸಂಗೀತ ರಸಮಂಜರಿ ಸಂಪನ್ನಗೊಂಡಿತು.