ಬಡವರಿಗೆ ಗುಣಮಟ್ಟದ ಔಷಧ ಕಡಿಮೆ ದರದಲ್ಲಿ ಪೂರೈಕೆ:ಡಾ.ಅನಿಲಾ

ಉಡುಪಿ: ದೇಶದಲ್ಲಿರುವ 5,600 ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳಿದ್ದು ಬಡವರಿಗೆ  ಗುಣಮಟ್ಟದ ಔಷಧಗಳನ್ನು ಕಡಿಮೆ ದರದಲ್ಲಿ ಪೂರೈಸುತಿದೆ ಎಂದು ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ರಾಜ್ಯದ ನೋಡೆಲ್‌ ಅಧಿಕಾರಿ ಡಾ.ಅನಿಲಾ ತಿಳಿಸಿದರು .

ಸುದ್ದಿಗಾರರೊಂದಿಗೆ ಮಾತನಾಡುತ್ತ ಅವರು ಕರ್ನಾಟಕದ ಪ್ರತಿಯೊಂದು ತಾಲೂಕಿನಲ್ಲಿ ಜನೌಷಧ ಕೇಂದ್ರಗಳನ್ನು ತೆರೆಯಲಾಗಿದೆ. ಜನೌಷಧ ಮಾರಾಟದಲ್ಲಿ ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಜನೌಷಧ ಕೇಂದ್ರಗಳಲ್ಲಿ ದೊರೆಯುವ ಜನರಿಕ್ ಔಷದಗಳ ಮೇಲೆ ಬ್ರಾಂಡೆಂಡ್‌ ಕಂಪನಿಗಳ ಲೇಬಲ್ ಇರದಿದ್ದರೂ ಅತ್ಯುತ್ತಮ ಗುಣಮಟ್ಟವನ್ನು ಹೊಂದಿರುತ್ತದೆ.

ದೇಶದ ಪಮುಖ ಔಷಧ ತಯಾರಿಕಾ ಕಂಪನಿಗಳ ಔಷದಗಳು ಮಾರುಕಟ್ಟೆಯಲ್ಲಿ ₹ 100ಕ್ಕೆ ಸಿಗುವುದು  ಜನೌಷಧ ಕೇಂದ್ರಗಳಲ್ಲಿ ಕೇವಲ ₹ 10ಕ್ಕೆ ಸಿಗುತ್ತದೆ. ಗುಣಮಟ್ಟದಲ್ಲಿ ಯಾವುದೇ ಸಮಸ್ಯೆ ಇಲ್ಲದಿರುವ ಈ  ಔಷಧಗಳು ನಿಗದಿತ ಮಾನದಂಡ ಅನುಸರಿಸುತಿದ್ದು, ಇದೇ ಕಾರಣಕ್ಕೆ 29 ಔಷಧ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಿದರು. ಬಡವರ ಅನುಕೂಲಕ್ಕೆ ಸ್ಥಾಪಿಸಿದರೂ  ಜನೌಷಧ ಕೇಂದ್ರಗಳ ಉಪಯೋಗ ಶ್ರೀಮಂತರಿಗೆ ಸಹ ದಕ್ಕುತ್ತಿದೆ. ಜನೌಷಧ ಕೇಂದ್ರಗಳನ್ನು ಗ್ರಾಮೀಣ ಭಾಗಕ್ಕೆ ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ. ಬ್ರಾಂಡೆಡ್‌ ಔಷಧಗಳಿಗೂ ಜನರಿಕ್‌ ಔಷಧಗಳ ಮಧ್ಯೆ ಗುಣಮಟ್ಟದಲ್ಲಿ ವ್ಯತ್ಯಾಸ ಇಲ್ಲದ ಕರಣ ಜನೌಷಧ ಕೇಂದ್ರಗಳ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.


ಜನೌಷಧಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವಂತಿಲ್ಲ. ರಾಜ್ಯದಲ್ಲಿ ಜನೌಷಧ ಪೂರೈಕೆ ಮಾಡಲು 2 ಸಂಸ್ಥೆಗಳಿಗೆ ಮಾತ್ರ ಬಿಪಿಪಿಐ ಪರವಾನಗಿ ನೀಡಿದೆ. ಖರೀದಿ ಹಾಗೂ ಮಾರಾಟ ಪ್ರಕ್ರಿಯೆ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ನಡೆಯುವುದರಿಂದ ದುರುಪಯೋಗ ಸಾಧ್ಯವಿಲ್ಲ ಎಂದರು.
ಕರ್ನಾಟಕ ಸರ್ಕಾರದ ಜನಸಂಜೀವಿನಿ ಕೇಂದ್ರಗಳಿಗೂ ಕೇಂದ್ರ ಸರ್ಕಾರದ ಜನೌಷಧ ಕೇಂದ್ರಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಡಾ.ಅನಿಲಾ  ವಿವರಿಸಿದರು ಕಾರ್ಯಕ್ರಮದಲ್ಲಿ ಬಿಪಿಪಿಐ ಮಾರಾಟ ವಿಭಾಗದ ಜನರಲ್ ಮ್ಯಾನೇಜರ್‌ ಧೀರಜ್ ಶರ್ಮಾ, ವಿತರಕ ಅಭಿಷೇಕ್‌ ಜೈನ್‌, ಸಾಗರ್ ತೇಜ್‌ಪಾಲ್‌ ಉಪಸ್ಥಿತರಿದ್ದರು … 

Leave a Reply

Your email address will not be published. Required fields are marked *

error: Content is protected !!