ಕಾಮನ್ವೆಲ್ತ್:ಚಿನ್ನಕ್ಕೆ ಮುತ್ತಿಕ್ಕಿದ ಮಂಗಳೂರಿನ ಪ್ರದೀಪ್

ಕೆನಡ: ಸೈಂಟ್ ಜಾನ್ಸ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಮತ್ತು ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ – 2019 ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಮಂಗಳೂರಿನ ಪ್ರದೀಪ್ ಕುಮಾರ್ ಆಚಾರ್ಯ 83 ಕೆಜಿ ಸೀನಿಯರ್ ವಿಭಾಗದಲ್ಲಿ ಘಟಾನುಘಟಿ ಸ್ಪರ್ಧಿಗಳನ್ನು ಸೋಲಿಸಿ, ಚಿನ್ನದ ಪದಕವನ್ನು ಪಡೆದು ದೇಶಕ್ಕೆ ಮತ್ತು ಮಂಗಳೂರಿಗೆ ಹೆಮ್ಮೆ ಪಡುವಂತೆ ಮಾಡಿದ್ದಾರೆ.


ಭಾರತ ದೇಶದಿಂದ ಒಟ್ಟು 32 ಸ್ಪರ್ಧಿಗಳು ಭಾಗವಹಿಸಿದ್ದು, ಇವರಲ್ಲಿ ಮೂವರು ಕರ್ನಾಟಕದವರಿದ್ದು, ಅದರಲ್ಲೂ ಇಬ್ಬರು ಮಂಗಳೂರಿನವರು ಎಂಬುದು ಹೆಮ್ಮೆಯ ವಿಚಾರ.
ಇಂದು ನಡೆದ ಸ್ಪರ್ಧೆಯಲ್ಲಿ ಪ್ರದೀಪ್ ಕುಮಾರ್ ಆಚಾರ್ಯ ಚಿನ್ನದ ಪದಕ ಪಡೆದರೆ, ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಕೆನಡಾದ ಸ್ಪರ್ಧಿಗಳು ಬೆಳ್ಳಿ ಮತ್ತು ಕಂಚಿನ ಪದಕಕ್ಕೆ ತೃಪ್ತಿ ಗೊಂಡರು.


ಪ್ರದೀಪ್ ಅವರು ತಮ್ಮ ಮೊದಲ ಪ್ರಯತ್ನದಲ್ಲೇ 200ಕೆಜಿ ಭಾರವನ್ನು ಎತ್ತಿ, ಮೊದಲ ಪ್ರಯತ್ನದಲ್ಲೇ ಚಿನ್ನದ ಪದಕವನ್ನು ಪಡೆದರು. ನಾಳೆ ಮತ್ತೊಂದು ಸ್ಪರ್ಧೆಯಲ್ಲಿ ಪ್ರದೀಪ್ ಆಚಾರ್ಯ ಭಾಗವಹಿಸಲಿದ್ದಾರೆ.


ಪ್ರದೀಪ್ ಕುಮಾರ್ ಆಚಾರ್ಯ ಪ್ರಸ್ತುತ ಮಂಗಳೂರಿನಲ್ಲಿ ಸದ್ಗುರು ಫಿಟ್ನೆಸ್ ಅಂಡ್ ಸ್ಫೋರ್ಟ್ಸ್ ನಡೆಸುತ್ತಿದ್ದಾರೆ. ನಗರದ ಬಾಲಾಂಜನೇಯ ಜಿಮ್ನಾಷಿಯಂನಲ್ಲಿ ಸತೀಶ್ ಕುಮಾರ್ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.


 ನಾಳೆ 83 ಕೆಜಿ ಹಿರಿಯರ ವಿಭಾಗದಲ್ಲಿ ಪ್ರದೀಪ್ ಕುಮಾರ್ ಆಚಾರ್ಯ ಸ್ಪರ್ಧೆ ಮಾಡಲಿದ್ದರೆ, ಮತ್ತೋರ್ವ ಮಂಗಳೂರಿನ ಸ್ಪರ್ಧಿ ರತ್ತಿಕ್ ಕೆವಿ 83 ಕೆಜಿ ಕಿರಿಯರ  ವಿಭಾಗದಲ್ಲಿ ಸ್ಪರ್ಧೆ ಮಾಡಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!