ರಾಜ್ಯ ರಾಜಧಾನಿಯಲ್ಲಿ ಕುಂದಾಪುರದ ಸಂಘಟನೆ ಲೋಕಾರ್ಪಣೆ

ಬೆಂಗಳೂರು:- ರಾಜ್ಯ ರಾಜಧಾನಿ ಮಹಾನಗರಿ ಬೆಂಗಳೂರಿನಲ್ಲಿ ಕುಂದಾಪುರದವರ ಸಂಖ್ಯೆ ಹೆಚ್ಚಿದೆ. ತಮ್ಮ ವಿಶಿಷ್ಟವಾದ ಕನ್ನಡದಿಂದಲೇ ರಾಜ್ಯಾದ್ಯಂತ ಗುರುತಿಸಲ್ಪಡುವ ಇವರ ಆಡುನುಡಿ ಕೇಳೋದೆ ಚೆಂದ.

ಕುಂದಾಪುರ ಕ‌ನ್ನಡ ಅಂತಲೇ ಖ್ಯಾತಿ ಗಳಿಸಿರುವ ಈ ಭಾಗದ ಜನರ ಪ್ರೀತಿಯೂ ದೊಡ್ಡದು. ಹೋಟೇಲ್, ಬೇಕರಿ, ಬ್ಯಾಂಕಿಂಗ್, ಉದ್ಯೋಗ, ಸಿನಿಮಾ, ಪತ್ರಿಕೋಧ್ಯಮ ಹೀಗೆ ಇವರು ಕೈಯಾಡಿಸದ ಕ್ಷೇತ್ರಗಳೇ ಇಲ್ಲ.ಹೀಗೆ ಉದರ ನಿಮಿತ್ಯಂ ಉದ್ಯೋಗ ಅನ್ನೋ ಹಾಗೆ ಬೆಂಗಳೂರು ಸೇರಿರುವ ಕುಂದಾಪುರದ ಕೆಲ ಯುವಮನಸ್ಸುಗಳು ಇದೀಗ ತಮ್ಮದೇ ಒಂದು ಸಮಾನಮನಸ್ಕರ ತಂಡವೊಂದನ್ನು ಕಟ್ಟಿಕೊಂಡಿದೆ.

ಕುಂದಾಪುರಿಯನ್ಸ್-ಹ್ವಾಯ್ ನಾವ್ ಮರ್ರೆ’ ಎಂಬ ಚೆಂದದ ಹೆಸರಿಟ್ಟುಕೊಂಡಿರೋ ಈ ಯುವಸಂಘಟನೆ ನಿನ್ನೆ ಲೋಕಾರ್ಪಣೆಗೊಂಡಿತು. ನಾಗರಬಾವಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ತಂಡದ ಲೋಗೋ ಮತ್ತು ಟೀಶರ್ಟ್ ಅನಾವರಣಗೊಳಿಸಲಾಯಿತು.
ಕೆ.ಜಿ.ಎಫ್, ಉಗ್ರಂ ಖ್ಯಾತಿಯ ಹೆಸರಾಂತ‌ ಸಂಗೀತ ನಿರ್ದೇಶಕ ಕುಂದಾಪುರ ಮೂಲದ ರವಿ ಬಸ್ರೂರು ತಂಡದ ಲೋಗೋವನ್ನು ಅನಾವರಣಗೊಳಿಸಿದರು.

ಕಾರ್ಯಕ್ರಮದಲ್ಲಿ ತಂಡದ ಸದಸ್ಯರಾದ ಬಿಟಿವಿಯ ಸುದ್ದಿ ನಿರೂಪಕ ರಂಜಿತ್ ಶಿರಿಯಾರ,ಯುವ ಪತ್ರಕರ್ತ ರೂಪೇಶ್ ಪೂಜಾರಿ ಬೈಂದೂರು,ಶ್ರೀಕಾಂತ್,ನವೀನ್ ಆಚಾರ್ಯ ಸೇರಿದಂತೆ ತಂಡದ ಸರ್ವ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!