ಹಸಿರು ಗಿಳಿಯಾರು ಕಾರ್ಯಕ್ರಮಕ್ಕೆ ಕಾರಂತಜ್ಜನ ಊರಿನಲ್ಲಿ ಚಾಲನೆ

ಕುಂದಾಪುರ:- ಇಲ್ಲಿನ ಕೋಟ ಮೂಡುಗಿಳಿಯಾರಿನ ಜನಸೇವಾ ಟ್ರಸ್ಟ್ ಮತ್ತು ಗೀತಾನಂದ ಫೌಂಡೇಶನ್ ಮತ್ತು ಫ್ರೆಂಡ್ಸ್ ಗಿಳಿಯಾರು ಆಶ್ರಯದಲ್ಲಿ ಔಷದಿ ಗಿಡಗಳ,ಫಲ,ಪುಷ್ಪ ವೃಕ್ಷಗಳ ‘ಹಸಿರು ಗಿಳಿಯಾರು’ ಕಾರ್ಯಕ್ರಮಕ್ಕೆ ನಿನ್ನೆ ಕೋಟ ಪಶು ಆಸ್ಪತ್ರೆ ಆವರಣದಲ್ಲಿ ಚಾಲನೆ ನೀಡಲಾಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಕೋಟ ಪಶು ವೈದ್ಯರಾದ ಡಾ|ಅರುಣ್ ಕುಮಾರ್ ಶೆಟ್ಟಿ ಮಾತನಾಡಿ ‘ಗಿಡ ನೆಡುವುದು ಎಷ್ಟು ಜವಬ್ದಾರಿಯ ಕೆಲಸವೋ, ಅದರ ಪಾಲನೆಯೂ ಅಷ್ಟೇ ಜವಬ್ದಾರಿಯ ಕೆಲಸ’ ಎಂದರು.

ಈ ಸಂಧರ್ಭ ಕ್ಯಾನ್ಸರ್ ನಿವಾರಕ ಲಕ್ಷ್ಮಣಫಲ, ರಾಮಫಲ, ಕಹಿಬೇವು, ರಂಜೆ, ಚಿಕ್ಕು, ಜಾಮ್ ಫ್ರೂಟ್ಸ್ ಮುಂತಾದ ಐವತ್ತಕ್ಕೂ ಹೆಚ್ಚು ಬಗೆಯ ಗಿಡಗಳನ್ನು ನೆಡಲಾಯಿತು.

ಉದ್ಯಮಿ ಬೋಜಪೂಜಾರಿ,ಸ್ವಾಮಿ ಯಾಗಾಂಭರ್ ನಾಥ ಜಿ,ಸುರೇಂದ್ರ ಹೆಗ್ಡೆ,ಗೀತಾನಂದ ಫೌಂಡೇಶನ್ ನ ರವಿ ಕಿರಣ್, ನ್ಯಾಯವಾದಿಗಳಾದ ಟಿ.ಮಂಜುನಾಥ್ ಗಿಳಿಯಾರು,
ಜನಸೇವಾ ಟ್ರಸ್ಟ್ ನ ವಸಂತ್ ಗಿಳಿಯಾರ್, ಪ್ರವೀಣ್ ಯಕ್ಷಿಮಠ, ಅರುಣ್ ಶೆಟ್ಟಿ, ಅಶೋಕ್ ಬನ್ನಾಡಿ, ಹೈಕಾಡಿ ವಿಜಯ್ ಶೆಟ್ಟಿ, ಅಭಿಜಿತ್ ಪಾಂಡೇಶ್ವರ, ಶರತ್ ಕೊತ್ತಾಡಿ ಹರೀಶ್ ಕಿರಣ್ ತುಂಗಾ, ಕಿರಣ್ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!