ಗೋಪಾಲ್ ಭಂಡಾರಿ ನಿಧನ; ಕೋಟ ಶ್ರೀನಿವಾಸ್ ಪೂಜಾರಿ ಸಂತಾಪ

ಕಾರ್ಕಳದ ಗೋಪಾಲ ಭಂಡಾರಿಯವರು ರಾಜಕಾರಣದ ಚೌಕಟ್ಟು ಮೀರಿ ನನ್ನ ಸ್ನೇಹಿತರು. ತಮಾಷೆ, ಪ್ರೀತಿ, ಆತ್ಮೀಯತೆ, ನಂಬಿಕೆಗೆ ಬಾವುಕರಾಗುವವರು. ಅವರು ಹಣವಂತ, ರಾಜಕೀಯ ಕ್ಷೇತ್ರದಲ್ಲಿ ಗುಣವಂತ ರಾಜಕಾರಣಿ. ಒಂದರ್ಥದಲ್ಲಿ ಕ್ಷೇತ್ರದ ಕಡು ಬಡವರ ಒಡನಾಡಿ.

ಸಣ್ಣ ಸಮುದಾಯದಿಂದ ಮೇಲೆದ್ದು ಬಂದು ವಿಧಾನ ಸೌಧದ ಮೆಟ್ಟಿಲೇರಿದವರು. ಮೊನ್ನೆ ಮೊನ್ನೆಯಷ್ಟೆ ಹಸ್ತಲಾಘವ ನೀಡುತ್ತಾ ಪ್ರೀತಿಯ ನಗೆಯೊಂದಿಗೆ ನಾವಿಬ್ಬರು ಸಮಾನ ಸ್ನೇಹಿತರು ಎಂದಿದ್ದರು. ಅವರು ನಂಬಿದ ಸಿದ್ದಾಂತಗಳಿಗೆ ಬದ್ದರಾಗಿ ನುಡಿದಂತೆ, ನಿನ್ನೆಯವರೆಗೂ ನಡೆದಿದ್ದರು. ಆದರೇನು, ಕರುಣೆ ಇಲ್ಲದ ಸಾವಿನೊಂದಿಗೆ ನಮ್ಮ ಭಂಡಾರಿಯವರು ನಿರ್ಗಮಿಸಿದ್ದಾರೆ. ಮನದ ಮೂಲೆಯಲ್ಲಿ ನನ್ನೊಬ್ಬ ಸ್ನೇಹಿತರನ್ನು ಕಳೆದುಕೊಂಡ ನೋವು. ಅವರ ಬಂಧುಗಳಿಗೆ ಅವರನ್ನಗಲಿದ ದುಃಖ ಭರಿಸುವ ಶಕ್ತಿ ಶ್ರೀ ದೇವರು ನೀಡಲಿ ಎಂದು ವಿಧಾನ ಪರಿಷತ್ ವಿಪಕ್ಷನಾಯಕ ಕೋಟ ಶ್ರೀನಿವಾಸ ಪೂಜಾರಿ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!