ವೈದ್ಯಕೀಯ ಪ್ರತಿನಿಧಿ ಸಂಘ, ಜಯಂಟ್ಸ್ ಗ್ರೂಪ್ ವತಿಯಿಂದ ಸನ್ಮಾನ ಕಾರ್ಯಕ್ರಮ

ಉಡುಪಿ: ವೈದ್ಯಕೀಯ ಪ್ರತಿನಿಧಿಗಳ ಸಂಘ(ಕೆ.ಎಸ್.ಎಂ ಎಸ್.ಅರ್.ಎ) ಮತ್ತು ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಇದರ ವತಿಯಿಂದ 17 ವರ್ಷದ ವೈದ್ಯರ ದಿನಾಚರಣೆ ಮತ್ತು ಹಿರಿಯ ಸಾಧಕ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ಹೋಟೆಲ್ ಕಿದಿಯೂರಿನ ಮಾಧವ ಕೃಷ್ಣ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಖ್ಯಾತ ವೈದ್ಯೆ ಮಣಿಪಾಲ ಸೋನಿಯಾ ಕ್ಲಿನಿಕ್ ನ ಡಾ|| ಗಿರಿಜಾ ಮಾತನಾಡಿ, ವೈದ್ಯರು ತಮ್ಮ ಸರ್ವಸ್ವವನ್ನು ಬದಿಗಿರಿಸಿ ರೋಗಿಗಳ ರಕ್ಷಣೆಗೆ ತನ್ನ ಬದುಕನ್ನು ಸವೆಸುತ್ತಿದ್ದಾರೆ, ವೈದ್ಯರನ್ನು ನೋಡುವ ದೃಷಿಕೋನ ಬದಲಾಗಬೇಕು ಅವರಿಗೂ ಕೂಡ ಖಾಸಗಿ ಜೀವನವಿದೆ ಎಂದರು. ವೈದ್ಯರಲ್ಲಿ ದೇವರನ್ನು ಕಾಣುವವರು ಬಹಳ ಜನ ಆದರೆ ವೈದ್ಯರು ದೇವರಲ್ಲ ಬದಲಾಗಿ ತಮಲ್ಲಿರುವ ಜ್ಞಾನವನ್ನು ಸಮಾಜದ ಆರೋಗ್ಯ ಕಾಪಾಡುವ ಕಾರ್ಯನಿರ್ವಹಿಸುವವರು ಅವರ ಮೇಲೆ ನಡೆಯುವ ಹಲ್ಲೆ ಪ್ರಕರಣಗಳು ಖಂಡನೀಯ ಎಂದರು.

ಹಿರಿಯ ಸಾಧಕ ವೈದ್ಯರಾದ ಕೆ.ಎಂ.ಸಿ ಮಣಿಪಾಲದ ಸ್ತ್ರೀರೋಗ ವಿಭಾಗದ ಯೂನಿಟ್ ಮುಖ್ಯಸ್ಥ ಡಾ|| ಪ್ರತಾಪ್ ಕುಮಾರ್, ಹಿರಿಯ ವೈದ್ಯ ಡಾ|| ಪಿ.ಗಣಪತಿ ರಾವ್,ಕುಂದಾಪುರದ ಖ್ಯಾತ ಕುಟುಂಬ ವೈದ್ಯರಾದ ಡಾ|| ಹೆಚ್.ರಾಮಮೋಹನ್, ಖ್ಯಾತ ಆಯುರ್ವೇದ ವೈದ್ಯರಾದ ಡಾ|| ಕೆ.ರಾಮಚಂದ್ರ ನಂಬಿಯಾರ್‌ರವರನ್ನು ವಿಶೇಷ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ವೈದ್ಯರುಗಳಿಗೆ ಗಿಡ ನೀಡಿ ಗೌರವಿಸಲಾಯಿತು.

ಕಾರ್‍ಯಕ್ರಮದಲ್ಲಿ ಜಯಂಟ್ಸ್ ಅದ್ಯಕ್ಷ ಸುಂದರ ಪೂಜಾರಿ, ಜಯಂಟ್ಸ್ ಮಾಜಿ ಫೆಡರೇಶನ್ ಅದ್ಯಕ್ಷ ಮಧುಸೂಧನ್ ಹೇರೂರು, ಪ್ರಸನ್ನ ಕಾರಂತ್, ಶ್ರೀನಾಥ್ ಕೋಟ, ರಮೇಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!