ಗಾಂಜಾ ಸೇವಿಸುತ್ತಿದ್ದ ಮೂವರ ಬಂಧನ

ಕಾರ್ಕಳ : ಕೆದಿಂಜೆ ಗ್ರಾಮದ ಮಂಜರಪಲ್ಕೆ ಬಸ್ ನಿಲ್ದಾಣದ ಬಳಿ ಸಿಗರೇಟ್‌ನಲ್ಲಿ ಗಾಂಜಾ ಸೇವಿಸುತ್ತಿದ್ದ ಮೂವರನ್ನು ಕಾರ್ಕಳ ಗ್ರಾಮಾಂತರ ಠಾಣಾ ಎಸ್‌ಐ ನಾಸಿರ್ ಹುಸೇನ್ ಗುರುವಾರ ಬಂಧಿಸಿದ್ದಾರೆ.

ಬೆಳಗಾವಿ ನಿಪ್ಪಾಣಿ ತಾಲೂಕಿನ ಮಹದೇವ್ ಗಲ್ಲಿ ನಿವಾಸಿ ಓಂಕಾರ್ ಮಹೇಶ್ ಪಾಟೀಲ್ (20 ವ), ಕುಂದಾಪುರ ತಾಲೂಕಿನ ಕುಂಭಾಶಿ ನಿವಾಸಿ ಮನೋಜ್ (20ವ), ಮೂಡಬಿದ್ರೆ ತಾಲೂಕು ಶಿರ್ತಾಡಿ ನಿವಾಸಿ ಅಬ್ದುಲ್ ರಝಾಕ್ (36ವ) ಬಂಧಿತ ಆರೋಪಿಗಳು.

ಈ ಮೂವರು ಆರೋಪಿಗಳು ಗುರುವಾರ ಮಂಜರಪಲ್ಕೆ ಬಸ್ ನಿಲ್ದಾಣದ ಬಳಿ ಸಿಗರೇಟ್‌ನಲ್ಲಿ ಗಾಂಜಾ ಸೇರಿಸಿ ಸೇವಿಸುತ್ತಿರುವುದು ತಿಳಿದು ಬಂದಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢಪಪಟ್ಟಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!