11 ಸಾವಿರ ರನ್ ಕ್ಲಬ್ ಸೇರಿದ 9ನೇ ಆಟಗಾರ ಕೊಹ್ಲಿ

ಮ್ಯಾಂಚೆಸ್ಟರ್, ಜೂನ್ ೧೬: ಟ್ವೀಟರ್‌ನಲ್ಲಿ ಸದ್ದು ಮಾಡುತ್ತಿರುವ ಕಿಂಗ್ ಕೊಹ್ಲಿ. ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ ೧೧ ಸಾವಿರ ರನ್‌ಗಳನ್ನು ಗಳಿಸಿದ ವಿಶ್ವ ದಾಖಲೆಯನ್ನು ಬರೆದಿರುವ ಕೊಹ್ಲಿ.

ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದ ಪಂದ್ಯದಲ್ಲಿ ಎದುರಾಳಿ ತಂಡ ಪಾಕಿಸ್ತಾನದ ವಿರುದ್ಧ ಅರ್ಧಶತಕ ಸಿಡಿಸಿದ ಟೀಂ ಇಂಡಿಯಾದ ನಾಯಕನ ಸಾಧನೆಯನ್ನು ಇದೀಗ ಅಂಕಿ ಅಂಶಗಳ ಮೂಲಕ ಟ್ವಿಟ್ಟರ್‌ನಲ್ಲಿ ಕೊಂಡಾಡಲಾಗಿದೆ.

ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಕೊಹ್ಲಿಗೆ11 ಸಾವಿರ ರನ್ ಗಡಿ ಮುಟ್ಟಲು 57 ರನ್‌ಗಳ ಅಗತ್ಯವಿತ್ತು. ಈ ಪಂದ್ಯದಲ್ಲಿ ತಂಡದ ಮೊತ್ತ 290/3 ಆಗಿದ್ದಾಗ, 57ರನ್ ಗಳಿಸಿದ್ದ ಕೊಹ್ಲಿ ಹೊಸ ಇತಿಹಾಸ ಬರೆದು ಸುದ್ದಿಯಾದ್ರು. 230 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 222 ಇನ್ನಿಂಗ್ಸ್ ಗಳಲ್ಲಿ ಕೊಹ್ಲಿ 11 ಸಾವಿರ ರನ್‌ಗಳ ಗಡಿ ದಾಟಿದ್ದಾರೆ. ಹಾಲಿ ಏಕದಿನ ಕ್ರಿಕೆಟ್ ಮಾದರಿಯ ನಂ.1 ಆಟಗಾರ ಕೊಹ್ಲಿ ಅವರು 11 ಸಾವಿರ ರನ್ ಕ್ಲಬ್ ಸೇರಿದ ೯ನೇ ಆಟಗಾರ ಎನಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!