ಕೈಬೆರಳಿನ ಮೂಳೆ ಮುರಿತದ ಸಮಸ್ಯೆ-ಶಿಖರ್ ಧವನ್ ತಾಯ್ನಾಡಿಗೆ

ಲಂಡನ್: ಕೈಬೆರಳಿನ ಮೂಳೆ ಮುರಿತದ ಸಮಸ್ಯೆ ಕಾರಣ ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ವಿಶ್ವಕಪ್ ಟೂರ್ನಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಬಿಸಿಸಿಐ ಅಧಿಕೃತವಾಗಿ ಘೋಷಿಸಿತ್ತು.

ಇದರ ಬೆನ್ನಲ್ಲೇ ವಿಶ್ವಕಪ್ ಟೂರ್ನಿಯಲ್ಲಿ ಮುಂದುವರಿಯಲು ಸಾಧ್ಯವಾಗದೇ ಟೂರ್ನಿ ಮಧ್ಯದಲ್ಲೇ ತಾಯ್ನಾಡಿಗೆ ಹಿಂದಿರುವ ಬೇಸರದಲ್ಲಿ ೩೩ ವರ್ಷದ ಅನುಭವಿ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್, ತಮ್ಮ ಹಾಗೂ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶವನ್ನು ವಿಡಿಯೋ ಮುಖಾಂತರ ರವಾನಿಸಿದ್ದಾರೆ.

ಧವನ್ ತಮ್ಮ ಅದೀಕೃತ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳ ಮೂಲಕ ಏಕಕಾಲದಲ್ಲಿ ವಿಡಿಯೊ ಸಂದೇಶವನ್ನು ರವಾನಿಸಿದ್ದಾರೆ. ದುರದೃಷ್ಟವಶಾತ್, ನನ್ನ ಹೆಬ್ಬೆರಳು ಸಮಯಕ್ಕೆ ಸರಿಯಾಗಿ ಸರಿ ಹೋಗುವಂತೆ ಕಾಣುತ್ತಿಲ್ಲ. ವಿಶ್ವಕಪ್ ಟೂರ್ನಿಯಲ್ಲಿ ನನ್ನ ದೇಶವನ್ನು ಪ್ರತಿನಿಧಿಸಬೇಕೆಂಬ ಹೆಬ್ಬಯಕೆ ನನ್ನಲ್ಲಿತ್ತು. ಇದೀಗ ತಾಯ್ನಾಡಿಗೆ ಹಿಂದಿರುಗಿ ಬಹುಬೇಗನೆ ಚೇತರಿಸಿ ಮುಂದಿನ ಸರಣಿಗಳಿಗೆ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದರ ಕಡೆಗೆ ಶ್ರಮಿಸಲಿದ್ದೇನೆ,” ಎಂದು ಧವನ್ ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!