ವಿಶ್ವಕಪ್‌ನಲ್ಲಿ ‘ಹಿಟ್‌ಮ್ಯಾನ್’ ರೋಹಿತ್ ಶರ್ಮಾ ಶತಕಗಳ ದಾಖಲೆ!
ಇಂಡೋ ಪಾಕ್ ಕದನಲ್ಲಿ ದಾಖಲೆ ಬರೆದ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ. ಪಾಕ್ ವಿರುದ್ಧ ಪಂಧ್ಯದಲ್ಲಿ ಧೋನಿ ದಾಖಲೆ ಮುರಿದ ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮ್ಯಾನ್ ರೋಹಿತ್ ಶರ್ಮಾ, ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ಮುರಿದು ಅಗ್ರಸ್ಥಾನವನ್ನ ತಮ್ಮದಾಗಿಸಿಕೊಂಡಿದ್ದಾರೆ.
357+ ಸಿಕ್ಸರ್ಗಳ ಮೂಲಕ ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅವರದ್ದು ಅಗ್ರಸ್ಥಾನ. ಪಾಕಿಸ್ತಾನದ ಎದುರು ಕೇವಲ 34 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ರೋಹಿತ್ ಶರ್ಮಾ.ಬಳಿಕ ನೋಡ ನೋಡುತ್ತಿದ್ದಂತೆಯೇ 75ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದರು.
ಹೆಚ್ಚು ಸಿಕ್ಸರ್ಗ್‌ಗಳನ್ನ ಬಾರಿಸಿ ಬ್ಯಾಟ್ಸ್ಮನ್ ಎಂಬ ದಾಖಲೆ ಒಂದೆಡೆಡಯಾದರೆ, ಇನ್ನೂ ಅವರ ಏಕದಿನ ಕ್ರಿಕೆಟ್ ವೃತ್ತಿ ಬದುಕಿನ 24ನೇ ಶತಕವಾಗಿದೆ. ಒಟ್ಟಾರೆ ಇಂಡೊ – ಪಾಕ್ ಕ್ರಿಕೆಟ್ ಕದನದಲ್ಲಿ ರೋಚಕ ರೀತಿಯಲ್ಲಿ ದಾಖಲೆ ಬರೆದ ರೋಹಿತ್ ಶರ್ಮಾ ಈ ಬಾರಿ ಅಗ್ರಸ್ಥಾನವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.