ಲಾಕ್ ಡೌನ್ ನಿಂದ ಹೆಚ್ಚುತ್ತಿದ್ದೆ ಮದ್ಯವ್ಯಸನಿಗಳ ಸಮಸ್ಯೆ- ಉಲ್ಬಣಗೊಂಡ ಆತ್ಮಹತ್ಯೆ ಪ್ರಕರಣಗಳು

(ಉಡುಪಿ ಟೈಮ್ಸ್ )- ಲೇಖಕರು – ಡಾ.ಪಿ.ವಿ.ಭಂಡಾರಿ,ಮನೋವೈದ್ಯರು ಉಡುಪಿ

ಈಗ ಲಾಕ್ ಡೌನ್ ಆದಾಗಿಂದ ಜನಸಾಮಾನ್ಯರಿಗೆ ಬಹಳಷ್ಟು ತೊಂದರೆಗಳಿವೆ ..ಈ ತೊಂದರೆಗಳ ನಡುವೆ ನಾನು ಹೇಳುತ್ತಿರುವ ವಿಷಯ ಕೆಲವರು ಅಸಡ್ಡೆಯಿಂದ ಯೋಚಿಸಬಹುದು ..ಪ್ರತಿದಿನ ನಿಯಮಿತ ಮದ್ಯಪಾನ ನೋಡುತ್ತಿದ್ದ ವಯಸ್ಸಾದವರು ,ಬೆಳಗ್ಗಿನಿಂದಲೇ ಅನಿಯಮಿತ ಮದ್ಯಪಾನ ಮಾಡುತ್ತಿದ್ದ ಯುವಕರು ,ಮಧ್ಯ ವಯಸ್ಕರು ಇವರುಗಳು ಈಗಾಗಲೇ ಕಕ್ಕಾಬಿಕ್ಕಿಯಾಗಿದ್ದಾರೆ ..ಈ ಬಗ್ಗೆ ನಾನು ಲಾಕ್ ಡೌನ್ ನ ಮೊದಲ ದಿನವೇ ಬರೆದಿದ್ದೆ ..ಎರಡನೇ ದಿನ ಫೇಸ್ ಬುಕ್ಕಿನಲ್ಲಿ ಒಂದು ವಿಡಿಯೋ ಮಾಡಿ ಹಾಕಿದ್ದೆ..ಇದು ನಾನು ಮಡಿಕೇರಿಯಲ್ಲಿ ಹೋದ ವರ್ಷ ನಡೆದ ಪ್ರಕೃತಿ ವಿಕೋಪದ ಸಮಯದಲ್ಲಿ ಅಲ್ಲಿಯ ಜನರಲ್ಲಿ ಉಂಟಾಗಿದ್ದ ಸಮಸ್ಯೆಗಳ ಬಗ್ಗೆ ಓದಿದ ಲೇಖನದ ನೆನಪಿನಲ್ಲಿ ಲಾಕ್ ಡೌನ್ ಯೋಚಿಸಿ ಬರೆದಿದ್ದೇ .ಹಲವಾರು ವೈದ್ಯ ಮಿತ್ರರು ನನ್ನನ್ನು ಲೇವಡಿ ಮಾಡಿದ್ದರು .ಆದರೆ ಈಗ ಪೇಪರ್ ನಲ್ಲಿ ಓದುತ್ತಿದ್ದೀರಿ ..ಕರೋನಾ ಗಿಂತ ಬಹುಶಃ ರಾಜ್ಯದಲ್ಲಿ ಮದ್ಯ ವ್ಯಸನಿಗಳು ನ್ಯೂಸ್ ಮಾಡಿದ್ದಾರೆ .ನಾನು ಓದಿದಂತೆ ಐದು ಆತ್ಮಹತ್ಯೆಗಳು ಲೋಕವನ್ನು ನಂತರ ನಮ್ಮ ರಾಜ್ಯ ನೆರೆಕೆರೆಯ ರಾಜ್ಯಗಳಲ್ಲಿ ಆಗಿದೆ .ಯಾಕೆ ಹೀಗೆ ಆಗುತ್ತೆ ?
ಮದ್ಯಪಾನ ಪ್ರತಿದಿನ ಮಾಡುವವರು alcohol dependence syndrome ಎಂಬ ಕಾಯಿಲೆಯಿಂದ ಬಳಲುತ್ತಿರುತ್ತಾರೆ .ಅವರ ದೇಹವೇ ಮದ್ಯಪಾನದ ಮೇಲೆ ನಿರ್ಧಾರವಾಗುತ್ತದೆ ..ಹಲವರು ದೈಹಿಕವಾಗಿ ಮಾನಸಿಕವಾಗಿ ಮದ್ಯವ್ಯಸನದ ಮೇಲೆ ಅವಲಂಬಿತರಾಗುತ್ತಾರೆ .ಕುಡಿತ ಬಿಟ್ಟೊಡನೆ ಅವರಿಗೆ ಹಿಂತೆಗೆತದ ಚಿಹ್ನೆಗಳು ಪ್ರಾರಂಭವಾಗುತ್ತವೆ .ಈ ಹಿಂತೆಗೆತದ ಚಿನ್ನಗಳನ್ನು ಸರಳ ಚಿಹ್ನೆಗಳು ಮತ್ತು ಸಂಕೀರ್ಣ ಚಿಹ್ನೆಗಳು ಎಂದು ಕರೆಯುತ್ತೇವೆ .ಸರಳ ಚಿಹ್ನೆಗಳೆಂದರೆ ನಿದ್ರಾಹೀನತೆ ಹೃದಯ ಬಡಿತದ ಹೆಚ್ಚಳ ,ಹೆದರಿಕೆ ,ಕೂತಲ್ಲಿ ಕೂರಲು ಆಗುವುದಿಲ್ಲ ,ಮನಸ್ಸಿಗೆ ಒಂದು ಬಗೆಯ ಟೆನ್ಷನ್ ಆದ ಹಾಗೆ ಆಗುವುದು..ಸಂಕೀರ್ಣ ಚಿಹ್ನೆಗಳೆಂದರೆ ಫಿಟ್ಸ್ ಕಾಯಿಲೆ ಬರುವುದು ,ಕಿವಿಯಲ್ಲಿ ಮಾತನಾಡಿದ ಹಾಗೆ ಆಗುವುದು ,ಹೆದರಿಕೆ ,ಕಣ್ಣಿಗೆ ಪ್ರಾಣಿಗಳು ಕಾಣುವುದು ,ಮೈಯಲ್ಲಿ ನಡುಕ ,ಆತ್ಮಹತ್ಯೆಯ ಆಲೋಚನೆ ..ಇದನ್ನು “ನಡುಕ ಸನ್ನಿ “ಎಂದು ಕರೆಯುತ್ತೇವೆ ..ಇದು ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದಿದ್ದರೆ ಮಾರಣಾಂತಿಕವಾಗಬಹುದು ..ಈ ಸನ್ನಿಯಲ್ಲಿ ಕೆಲವರು ಕಿವಿಯಲ್ಲಿ ಆತ್ಮಹತ್ಯೆ ಮಾಡಿಕೊ ಎಂದು ಹೇಳಿದ ಹಾಗೆ ಆಗಿ ಆತ್ಮಹತ್ಯೆ ಮಾಡಿಕೊಂಡವರೂ ಇದ್ದಾರೆ ..ಒಟ್ಟಿನಲ್ಲಿ ಲಾಕ್ ಡೌನ್ ಜನಸಾಮಾನ್ಯರ ಒಳ್ಳೆಯದಕ್ಕೆ ಆಗಿದ್ದರು ಕುಡಿಯುವವರ ಪಾಲಿಗೆ ಸಮಸ್ಯೆಯೇ ಆಗಬಹುದು ..
ಸರಳ ಹಿಂತೆಗೆತದ ಚಿಹ್ನೆಗಳಿರುವವರು ನಾಲ್ಕೈದು ದಿನಗಳಲ್ಲಿ ಸರಿಯಾಗುತ್ತಾರೆ..ಆದರೆ ಅವರು ಕೂಡ ಈ ಸಂದರ್ಭದಲ್ಲಿ ತಮ್ಮ ಆರೋಗ್ಯದತ್ತ ಹೆಚ್ಚು ಗಮನ ಕೊಡಬೇಕು ..ಕುಡಿತವನ್ನು ಬಿಡಲು ಒಂದು ಒಳ್ಳೆಯ ಅವಕಾಶ ಸಿಕ್ಕಿದೆ ಎಂಬುದನ್ನು ತಿಳಿದುಕೊಳ್ಳಬೇಕು ..ಈ ಸಮಯದಲ್ಲಿ ಕುಡಿತ ಬಿಟ್ಟ ಕಾರಣ ಅತಿಯಾಗಿ ಬೆವರುವುದು ,ಇದರಿಂದಾಗಿ ನಿರ್ಜಲೀಕರಣ ಉಂಟಾಗಬಹುದು ..ಮನೆಯವರು ಈ ಕುಡಿತ ಬಿಟ್ಟು ಚಡ ಪಡಿಸುವವರಿಗೆ ಕಿರಿಕಿರಿ ಮಾಡದೆ ,ಅವರಿಗೆ ಹೆಚ್ಚು ತ್ರಾಸದಾಯಕ ಕೆಲಸಗಳನ್ನು ಕೊಡದೆ ನೋಡಿಕೊಳ್ಳುವುದು ಒಳಿತು .ಇಂಥವರು ನೀರು ಬಹಳ ಕುಡಿಯಬೇಕು ..ಕುಡಿತ ಬಿಡಲು ಒಂದು ಸದಾವಕಾಶ ಸಿಕ್ಕಿದೆ ಅಂದುಕೊಳ್ಳಬೇಕು ..
ಸಂಕೀರ್ಣ ಸಮಸ್ಯೆಗಳನ್ನು ಹೊಂದಿದವರು ಮೈ ಕೈ ನಡುಕ ಅತಿ ಹೆಚ್ಚು ಇದ್ದಲ್ಲಿ ಹತ್ತಿರದಲ್ಲಿ ಲಭ್ಯವಿರುವ ಕುಟುಂಬದ ವೈದ್ಯರು ಅಥವಾ ಸಣ್ಣ ಆಸ್ಪತ್ರೆಗಳಲ್ಲಿ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು .ಕುಡಿತ ಒಮ್ಮೆಲೆ ಬಿಟ್ಟಾಗ ಉಂಟಾಗುವ ಈ ಸಂಕೀರ್ಣ ಪರಿಸ್ಥಿತಿಗೆ ಬೆನ್ಸ್ೊಡೈಸೇಪಿನ್ಸ್ ಎಂಬ ಟ್ಯಾಬ್ಲೆಟ್ ಅಥವಾ ಇಂಜೆಕ್ಷನ್ ಗಳು ವೈದ್ಯರು ಉಪಯೋಗಿಸಿ ಈ ಸಂಕೀರ್ಣ ಪರಿಸ್ಥಿತಿಗೆ ಚಿಕಿತ್ಸೆಯನ್ನು ಕೊಡುತ್ತಾರೆ .ಒಳರೋಗಿಯಾಗಿ ಒಂದು ವಾರ ಇರಬೇಕಾಗಬಹುದು ..
ಒಟ್ಟಿನಲ್ಲಿ ಕರೋನಾ ಹೆಸರಿನಲ್ಲಿ ನಾವು ಬೇರೆ ಬೇರೆ ಇನ್ನು ಸರಳ ಹಾಗೂ ಸಂಕೀರ್ಣ ಕಾಯಿಲೆಗಳ ಬಗ್ಗೆ ಮರೆಯುವ ಸಾಧ್ಯತೆ ಇದೆ ..

Leave a Reply

Your email address will not be published. Required fields are marked *

error: Content is protected !!