ಹೊಳೆ ಮೀನುಗಳಿಗೆ ಭಾರೀ ಬೇಡಿಕೆ – ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಳೆ ಮೀನುಗಳು

ಮಳೆಗಾಲ ಬಂತೆಂದರೆ ಸಾಕು, ಹೊಳೆ ಮೀನಿಗೆ ಭಾರಿ ಬೇಡಿಕೆ. ಸಮುದ್ರದಲ್ಲಿ ಯಾಂತ್ರಿಕ ದೋಣಿಯ ಮೀನುಗಾರಿಕೆ ಸ್ಥಗಿತಗೊಂಡಿರುವುದರಿಂದ ಇತ್ತ ಮೀನು ಪ್ರಿಯರು ಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯುವ ಖುಷಿಯಲ್ಲಿರುತ್ತಾರೆ, ಸಿಹಿ ನೀರಿನ ಮೀನುಗಾರಿಕೆಗೆ ಈಗ ಹೆಚ್ಚು ಬೇಡಿಕೆಯಿದೆ. ಹಾಗಾಗಿ ಹೊಳೆಗಳಲ್ಲಿ ಬಲೆ ಬೀಸಿ ತಂದ ಮೀನುಗಳು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ..

ಸಮುದ್ರದ ತಾಜಾ ಮೀನುಗಳು ಸಿಗದ ಕಾರಣ,ಮೀನು ಪ್ರಿಯರು ಹೊಳೆ ಬದಿಗಳಲ್ಲಿ ಹಾಗೂ ಸೇತುವೆಯ ಮೇಲ್ಭಾಗದಲ್ಲಿ ನಿಂತು ಗಾಳ ಹಾಕುವುದನ್ನು ನಮಗೆ ಅಲ್ಲಲ್ಲಿ ಕಾಣಸಿಗುತ್ತವೆ. ಕೆಲವರು ಹವ್ಯಾಸಕ್ಕಾಗಿ ಗಾಳ ಹಾಕಿದರೆ ಇನ್ನೂ ಕೆಲವರು ಜೀವನೋಪಯಕ್ಕಾಗಿ ಗಾಳ ಹಾಕಿ ಮೀನು ಹಿಡಿದು ಮಾರಾಟ ಮಾಡುವುದುದನ್ನು ಕಾಣಬಹುದು.

 

ಹೊಳೆ ಮೀನಿನ ರುಚಿ ಅರಿತ ಕೆಲವರು ಈ ಮೀನು ಖರೀದಿಗೆ ಮುಗಿಬೀಳುತ್ತಾರೆ. ಅದರಲ್ಲೂ ಮರಿ ಮುಗುಡು, ಮುಗುಡು, ಮಡಂಜಿ, ಇರ್ಪೆ, ಮಟ್ಟೆ, ಚೀಂಕಟೆ ಮೀನುಗಳಿಗಂತೂ ಎಲ್ಲಿಲ್ಲದ ಬೇಡಿಕೆ ಇದೆ. ಎಷ್ಟೇ ದುಬಾರಿಯಾದ್ರು ಸರಿ ಹೊಳೆ ಮೀನಿನ ಸಾರು ಮಾತ್ರ ಮಾಡಿ ಸವಿಲೇಬೇಕು. ಹೊರಗಡೆ ಒಂದೇ ಸಮನೇ ಸುರಿಯುವ ಮಳೆಯ ಚಳಿಗೆ ಒಳಗಡೆ ಊಟಕ್ಕೆ ಹೊಳೆ ಮೀನಿನ ಪದಾರ್ಥ ಇದ್ರೆ ಬೇರೆ ಊಟದ ಗಮ್ಮತ್ತೆ ಬೇಡ.

ಹೊಳೆಯ ಮೀನುಗಳು ಕೇವಲ ರುಚಿಕರವಷ್ಟೇ ಅಲ್ಲದೆ, ಆರೋಗ್ಯಕ್ಕೂ ಹಾಗೂ ಕೆಲವೊಂದು ಖಾಯಿಲೆಗಳಿಗೆ ರಾಮಬಾಣ ಹೌದು ಎನ್ನುತ್ತಾರೆ. ಅದನೇ ಇರಲಿ ಮೀನಿನ ಆಫ್ ಸೀಸನ್‌ನಲ್ಲಿ ಹೊಳೆ ಮೀನಿಗೆ ಮಾತ್ರ ಸಕತ್ ಡಿಮ್ಯಾಂಡ್ . ಅದ್ರಲ್ಲೂ ಗಾಳದಿಂದ ಹಿಡಿದ ಫ್ರೆಶ್ ಮೀನಿಗಾಗಿ ನೋ ಚೌಕಾಸಿ  ಯಾಕೆಂದ್ರೆ ರೇಟ್ ಹೆಚ್ಚಾಯಿತು ಅಂದ್ರೆ ಬೇರೆಯವರು ಮೀನನ್ನು ಖರೀದಿ ಮಾಡುತ್ತಾರೆ. ಸಾಮಾನ್ಯವಾಗಿ ನಾನ್‌ವಜಿಟೇರಿಯನ್ ಅವರು ಹೊಳೆ ಮೀನಿನ ರುಚಿ ನೋಡಿರ್‍ತಾರೆ ಒಂದ್ವೇಳೆ ಇಲ್ಲ ಅಂದ್ರೆ ಮಿಸ್ ಮಾಡದೇ ಒಮ್ಮೆ ಹೊಳೆ ಮೀನಿನ ಖಾದ್ಯ ಸೇವಿಸಿ ನೋಡಿ.

 

ರೂಪೇಶ್ ಜೆ.ಕೆ

1 thought on “ಹೊಳೆ ಮೀನುಗಳಿಗೆ ಭಾರೀ ಬೇಡಿಕೆ – ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಳೆ ಮೀನುಗಳು

Leave a Reply to Dhanraj Cancel reply

Your email address will not be published. Required fields are marked *

error: Content is protected !!