ಉಡುಪಿಯಲ್ಲೂ ಖರ್ಜೂರ ಬೆಳೆದ ಉದ್ಯಮಿ ಮಹಮ್ಮದ್ ಸಾಧಿಕ್

ಉಡುಪಿ: ಖರ್ಜೂರ…ದೇಹಕ್ಕೆ ಪೌಷ್ಟಿಕಾಂಶ ಬಾಯಿಗೆ ರುಚಿ ನೀಡುವ ಖರ್ಜೂರ ಯಾರಿಗೆ ತಿಳಿದಿಲ್ಲ ಹೇಳಿ. ಹಿಂದೆ ವಿದೇಶದಿಂದ ಊರಿಗೆ ಬಂದಾಗ ಮಾತ್ರ ಖರ್ಜೂರ ತಿನ್ನಲು ಸಿಗುತ್ತಿತ್ತು ಯಾಕೆಂದ್ರೆ ಖರ್ಜೂರ ಮರುಭೂಮಿಯ ಫಲ. ನಮ್ಮ ಊರಿನಲ್ಲಿ ಖರ್ಜೂರ ಬೆಳೆಸುವುದು ಅಷ್ಟು ಸುಲಭದ ಮಾತಲ್ಲ. ಆದ್ರೆ ಮರುಳುಗಾಡಿನಲ್ಲಿ ಬೆಳೆಯುವ ಬೆಳೆಯನ್ನು ಕರಾವಳಿಯಲ್ಲೂ ಬೆಳೆಸಿ ಸೈ ಎನಿಸಿಕೊಂಡಿರುವ ಉದ್ಯಮಿ ಮಹಮ್ಮದ್ ಸಾಧಿಕ್ ದೀನಾರ್.

ಸಮಶೀತೋಷ್ಣವಲಯದ ಮರಳುಗಾಡಿನಲ್ಲಿ ಮಾತ್ರವೇ ಬೆಳೆಯಬಹುದಾದ ಹೇರಳ ಪೌಷ್ಠಿಕಾಂಶವುಳ್ಳ ಖರ್ಜೂರವನ್ನು ಮಲ್ಲಾರಿನಲ್ಲಿ ಬೆಳೆಯುವ ಮೂಲಕ ಮಲ್ಲಾರು ಗ್ರಾ.ಪಂ. ಮಾಜಿ ಅಧ್ಯಕ್ಷ, ಕಾಪುವಿನ ಉದ್ಯಮಿ ಮಹಮ್ಮದ್ ಸಾಧಿಕ್ ದೀನಾರ್ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ.

ಕಾಪು ಸಮೀಪದ ಮಲ್ಲಾರು ಗ್ರಾಮದ ಕೊಂಬಗುಡ್ಡೆಯ ಮಹಮ್ಮದ್ ಸಾಧಿಕ್ ದೀನಾರ್ ಅವರ ಮನೆಯ ವರಾಂಡದಲ್ಲಿ `ಮರುಭೂಮಿಯ ಫಲ’ ಖರ್ಜೂರದ ೩ ಗಿಡಗಳು ಬೆಳೆದು ನಿಂತಿದ್ದು, ಅದರಲ್ಲಿ ಎರಡು ಗಿಡಗಳು ಫಲ ನೀಡಲಾರಂಭಿಸಿದೆ.

ಮಲ್ಲಾರು ಗ್ರಾಮದಲ್ಲಿ ಸಾಧಿಕ್ ಅವರ ಕುಟುಂಬವನ್ನು ಹೊರತುಪಡಿಸಿದರೆ ಮತ್ತೆ ಎರಡು ಕುಟುಂಬಗಳು ಖರ್ಜೂರ ಬೆಳೆಸಲು ಮುಂದಾಗಿವೆ. ಕಾಪು ಫ್ಲೈವುಡ್ ಸೆಂಟರ್‌ನ ಉದ್ಯಮಿ ನಜೀರ್ ಅಹಮದ್ ಅವರು 3 ಗಿಡಗಳನ್ನು ನೆಟ್ಟಿದ್ದು, ಮತ್ತೋರ್ವ ಉದ್ಯಮಿ ಅಬ್ಕೋ ಗ್ರೂಪ್‌ನ ಮಹಮ್ಮದ್ ಅಸ್ಲಂ ಖಾಝಿ ಅವರು ೮ ಗಿಡಗಳನ್ನು ನೆಟ್ಟಿದ್ದಾರೆ. ಇದೀಗ ಸಾಧಿಕ್ ಅವರ ತೋಟದಲ್ಲಿ ಬೆಳೆದಿರುವ ಖರ್ಜೂರ ಗಿಡಗಳು ಹಣ್ಣು ಬಿಟ್ಟಿರುವುದರಿಂದ ಮತ್ತಷ್ಟು ಮಂದಿ ಖರ್ಜೂರ ಬೆಳೆಸುವ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

10 ಸಾವಿರ ರೂ. ಕೊಟ್ಟು ಗಿಡ ತರಿಸಲಾಗಿತ್ತು :

ಮುಸ್ಲಿಂ ಸಮುದಾಯ ಮತ್ತು ಖರ್ಜೂರ ಹಣ್ಣಿಗೆ ಹತ್ತಿರದ ನಂಟಿದ್ದು, ಅರಬ್ ರಾಷ್ಟ್ರಕ್ಕೆ ತೆರಳಿದ್ದ ಸಂದರ್ಭ ಸಂಬಂಧಿಕರು ತಿಳಿಸಿದ ಮೇರೆಗೆ ಮಹಮ್ಮದ್ ಸಾಧಿಕ್ ಅವರು ಖರ್ಜೂರ ಗಿಡವನ್ನು ನೆಡಲು ಚಿಂತನೆ ನಡೆಸಿ, ಆಂಧ್ರಪ್ರದೇಶದ ಧರ್ಮಪುರಿಯಿಂದ ೧೦ ವರ್ಷದ ಗಿಡವನ್ನು 10 ಸಾವಿರ ರೂಪಾಯಿ ಹಣ ಕೊಟ್ಟುತರಿಸಿದ್ದರು. ಹತ್ತು ವರ್ಷ ಪ್ರಾಯದ ಖಜೂರ ಗಿಡ ನೆಟ್ಟ ವರ್ಷದೊಳಗೆ ಫಲ ನೀಡಿದ್ದು, ಮೊದಲ ವರ್ಷವೇ 15 ರಿಂದ 20 ಕೆ.ಜಿಯಷ್ಟು ಇಳುವರಿಯನ್ನು ನೀಡಿದೆ.

ಪ್ರಥಮ ವರ್ಷದಲ್ಲೇ ಉತ್ತಮ ಇಳುವರಿ:

ಕನಿಷ್ಟ 25 ಡಿಗ್ರಿಯಿಂದ 30 ಡಿಗ್ರಿಯವರೆಗೆ ಉಷ್ಣತೆ ಇರುವ ಸಂದರ್ಭದಲ್ಲಿ ಅಂದರೆ ಬೇಸಗೆಯಲ್ಲಿ ಫಸಲು ನೀಡುವ ಖರ್ಜೂರ ಗಿಡವು ಪ್ರಥಮ ವರ್ಷದಲ್ಲೇ ಉತ್ತಮ ಇಳುವರಿಯನ್ನು ನೀಡಿದೆ. ಅಲ್ಲಾಹುವಿನ ಪ್ರಸಾದದ ರೂಪದಲ್ಲಿ ಬೆಳೆದ ಖರ್ಜೂರ ಹಣ್ಣನ್ನು ಮಸೀದಿಗಳಲ್ಲಿ, ನೆರೆಮನೆಯವರಿಗೆ ಮತ್ತು ಸಂಬಂಧಿಕರಿಗೆ ಹಂಚುವ ಮೂಲಕ ಸಾಧಿಕ್ ಮತ್ತು ಮನೆಯವರು ಸಂಭ್ರಮಿಸಿದ್ದಾರೆ.

ಹೂ ಬಿಟ್ಟ ಬಳಿಕ ವಿಶೇಷ ಆರೈಕೆ:

ಮನೆಯ ವರಾಂಡದಲ್ಲಿ ಬೆಳೆಸಿರುವ ಖರ್ಜೂರದ ಗಿಡಗಳಲ್ಲಿ ಹೂವು ಬಿಟ್ಟಾಗ ದುಬೈಯಲ್ಲಿರುವ ಸಂಬಂಧಿಕರನ್ನು ಮತ್ತು ಪರಿಚಯದ ನರ್ಸರಿಯವರನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗಿದ್ದು, ಅವರ ಸಲಹೆಯಂತೆ ಗಿಡಗಳ ಆರೈಕೆ ಮಾಡಿದ್ದೇನೆ. ಎರಡು ವಾರಗಳ ಬಳಿಕ ಫಸಲು ಬರಲು ಆರಂಭವಾಗಿದ್ದು, ಇದೀಗ ಹೇರಳ ಖರ್ಜೂರದ ಹಣ್ಣುಗಳನ್ನು ನೋಡಿ ಖುಷಿ ಮತ್ತು ಅಚ್ಚರಿ ಉಂಟಾಗಿದೆ ಎನ್ನುತ್ತಾರೆ ಕರಾವಳಿ ಮಣ್ಣಿನಲ್ಲಿ ಖರ್ಜೂರ ಬೆಳೆದ ಮಹಮ್ಮದ್ ಸಾಧಿಕ್.

ಖರ್ಜೂರ ಗಿಡಗಳನ್ನು ಬೆಳೆಸಿರುವ ವಿಧಾನ:

ಆಂಧ್ರದಿಂದ ತರಿಸಲಾಗಿದ್ದ ಗಿಡಗಳನ್ನು 4 ಅಡಿ ಅಗಲ ಮತ್ತು 4 ಅಡಿ ಆಳದ ಹೊಂಡ ತೋಡಿ, ಸಮುದ್ರ ತೀರದ ಮರಳನ್ನು ತುಂಬಿಸಿ ನೆಡಲಾಗಿತ್ತು. ಮರ ಬೆಳೆಯುತ್ತಾ ಹೋದಂತೆ ಅಗತ್ಯಕ್ಕೆ ತಕ್ಕಷ್ಟು ನೀರನ್ನು ನಿರಂತರವಾಗಿ ಕೊಡಲಾಗಿದೆ. ಖರ್ಜೂರ ಗಿಡಗಳು ಸಾಮಾನ್ಯವಾಗಿ ಜನವರಿ-ಮಾರ್ಚ್ ನಡುವೆ ಹೊಂಬಾಳೆ ರೂಪದಲ್ಲಿ ಹೂ ಬಿಡುತ್ತವೆ. ನಂತರ ಆ ಹೊಂಬಾಳೆ ಒಡೆದುಕೊಳ್ಳುತ್ತದೆ.

ಹೆಣ್ಣು ಮತ್ತು ಗಂಡು ಗಿಡಗಳ ಹೊಂಬಾಳೆ ಒಂದೇ ಬಾರಿಗೆ ಒಡೆಯುವ ಸಂದರ್ಭ ಜೇನು ಹುಳಗಳಿಂದ ಪರಾಗ ಸ್ಪರ್ಶ ನಡೆದು, ಬಳಿಕ ಫಲ ನೀಡಲಾರಂಭಿಸುತ್ತವೆ. ಪರಾಗಸ್ಪರ್ಶವಾದ 20 ದಿನಗಳಲ್ಲಿ ಹೊಂಬಾಳೆಯಲ್ಲಿ ಸಣ್ಣ ಸಣ್ಣ ಪಿಂದೆಗಳು ಮೂಡುತ್ತವೆ. ಪಿಂದೆ ರೂಪದ ಕಾಯಿಗಳು ಮೂರು ತಿಂಗಳಲ್ಲಿ ಹಸಿರು ಬಣ್ಣದೊಂದಿಗೆ ಬೆಳೆದು, ೪ನೇ ತಿಂಗಳಿಗೆ ಕಂದು ಬಣ್ಣಕ್ಕೆ ತಿರುಗಿ, ಕೇಸರಿ ಮಿಶ್ರಿತ ಹಳದಿ ಬಣ್ಣಕ್ಕೆ ಬಂದಾಗ ಹಣ್ಣು ಪಕ್ವವಾಗಿರುತ್ತದೆ, ಕೊಯ್ಲು ಮಾಡಬಹುದು.

ಉಷ್ಣ ವಲಯದ ಬೆಳೆಯಾದರೂ ನೀರು ಅತ್ಯಗತ್ಯ: ಖರ್ಜೂರ ಉಷ್ಣ ವಲಯದ ಬೆಳೆ. ಖರ್ಜೂರ ಗಿಡಗಳು ಹೂ ಬಿಡುವಾಗ, ಕಾಯಿ ಕಚ್ಚುವಾಗ ಹೆಚ್ಚು ಉಷ್ಣತೆಯ ಪರಿಸ್ಥಿತಿ ಇರಬೇಕು. ಮರಳು, ಗೋಡು, ಜೇಡಿ ಮಿಶ್ರಿತ ಗೋಡು ಮುಂತಾದ ಹಲವಾರು ಬಗೆಯ ಮಣ್ಣುಗಳಲ್ಲಿ ಬೆಳೆಯಬಲ್ಲವಾದರೂ ಇದಕ್ಕೆ ನೀರು ಮತ್ತು ಗಾಳಿ ಸರಾಗವಾಗಿ ಚಲಿಸಬಲ್ಲಂಥ ಪ್ರದೇಶ ಬೇಕು. ಮರಳು ಮಿಶ್ರಿತ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುವ ಖರ್ಜೂರದ ಮರಕ್ಕೆ ನೀರು ಹೆಚ್ಚು ಬೇಕು. ಖರ್ಜೂರದ ಮರದ ಬೇರುಗಳು ನೆಲದಲ್ಲಿ ೬-೯ ಅಡಿಯಷ್ಟು ಆಳಕ್ಕೆ ಇಳಿಯುವುದರಿಂದ ಅಷ್ಟು ಆಳದವರೆಗೆ ತೇವವಿರುವಂತೆ ನೋಡಿಕೊಳ್ಳಬೇ

Leave a Reply

Your email address will not be published. Required fields are marked *

error: Content is protected !!