ಶಿಲುಬೆ ನಿಷೇಧ ಪೋಸ್ಟರ್ ಮನಸ್ಸಿಗೆ ನೋವಾಗಿದೆ- ಕಥೊಲಿಕ್ ಸಭಾ

ಉಡುಪಿ : ಉಡುಪಿ ಜಿಲ್ಲೆಯ ಉದ್ಯಾವರ ಸಮೀಪದ ಹಿಂದೂ ಯುವಕನನ್ನು , ಮುಲ್ಕಿ ಸಮೀಪದ ಡಿವೈನ್ ರಿಟ್ರೀಟ್ ಸೆಂಟರ್ ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ  ಹಿಂದೂ ಸಂಘಟನೆಗಳು ಇದೇ ಸೆಪ್ಟೆಂಬರ್ 26 ರಂದು ಆಯೋಜಿಸಿರುವ ಪ್ರತಿಭಟನೆ ಹಾಗೂ ಪ್ರತಿಭಟನೆ ಹೆಸರಿನಲ್ಲಿ ಪವಿತ್ರ ಶಿಲುಬೆಯನ್ನು ನಿಷೇಧಿಸುವ ಚಿತ್ರ ಪೋಸ್ಟರ್ ನಲ್ಲಿ  ಹಾಕಿರುವುದು ಕ್ರೈಸ್ತರ ಮನಸ್ಸಿಗೆ  ನೋವುಂಟು ಮಾಡಿದೆ ಎಂದು ಕಥೋಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಉಡುಪಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಆಲ್ವಿನ್ ಕ್ವಾಡ್ರಸ್ ಮಾತನಾಡುತ್ತಾ, ಕ್ರೈಸ್ತ ಸಮುದಾಯವು ಈ ದೇಶದ ಶೈಕ್ಷಣಿಕ, ಸಾಮಾಜಿಕ, ಆರೋಗ್ಯ ಕ್ಷೇತ್ರಕ್ಕೆ ಕಳೆದ ನೂರಾರು ವರ್ಷಗಳಿಂದ ತನ್ನದೇ ಆದ ಕೊಡುಗೆಯನ್ನು ನೀಡಿಕೊಂಡು ಬಂದಿದ್ದು, ಶಾಂತಿಯುತ ಸಮಾಜ ರೂಪಿತಗೊಳ್ಳಲು ತನ್ನ ಸೇವೆಯನ್ನು ನೀಡಿಕೊಂಡು ದೇಶದ ಎಲ್ಲ ಸಮುದಾಯಗಳೊಂದಿಗೆ ಬೆರೆತು ಬಾಳುತ್ತಿದೆ.

ಸೇವೆಯೇ ತಮ್ಮ ಧ್ಯೇಯವಾಗಿಟ್ಟುಕೊಂಡು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕ್ರೈಸ್ತರು ಸೌಹಾರ್ದತೆ ವಾತವರಣ ದೊಂದಿಗೆ ಕೂಡಿ ಬಾಳುತ್ತಿದ್ದು, ಈ ಸೌಹಾರ್ದತೆಗೆ ಮತಾಂತರ ಎಂಬ ಹೆಸರಿನಲ್ಲಿ ಕಿಚ್ಚು ಹಚ್ಚುವ ಕೆಲಸ ಕೆಲವೊಂದು ವ್ಯಕ್ತಿಗಳಿಂದನಡೆಯುತ್ತಿರುವುದು ಖೇದಕರ ವಿಚಾರವಾಗಿದೆ ಎಂದರು. ಕ್ರೈಸ್ತ ರು ಮತಾಂತರ ಮಾಡುತ್ತಾರೆ ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ. ನಿಜವಾಗಿಯೂ ಮತಾಂತರ ನಡೆದಿದ್ದೇ ಆದಲ್ಲಿ,  ಇಂದು ಭಾರತದಲ್ಲಿ ಕ್ರೈಸ್ತರ ಜನಸಂಖ್ಯೆ ಕಡಿಮೆಯೆಂದರೂ 15-20 ಶೇಕಡಾ ಇರಬೇಕಿತ್ತು. ಆದರೆ ವಿದೇಶಿಯರ ಆಳ್ವಿಕೆಯಿಂದ ಹಿಡಿದು ಇಂದಿನವರೆಗೂ ಅದು 2.5% ರ ಆಸುಪಾಸಿನಲ್ಲಿ ಇದೆ ಎಂಬುದಾಗಿ ತಿಳಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ; ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 350 ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು ಸೇರಿದಂತೆ, ಆರೋಗ್ಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಯನ್ನು ಈ ಸಮಾಜದ ಎಲ್ಲಾ ಸಮುದಾಯಕ್ಕೆ ನೀಡುತ್ತಿದೆ. ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ,ಎಲ್ಲಾ ಧರ್ಮದ ವಿದ್ಯಾರ್ಥಿಗಳು ಸಮಾನವಾಗಿ ಶಿಕ್ಷಣವನ್ನು ಪಡೆಯುತ್ತಿದ್ದು, ಎಲ್ಲಿಯೂ ಕೂಡ ಮತಾಂತರಗಳುನಡೆದ ಉದಾಹರಣೆ ಗಳಿಲ್ಲ. ಎಲ್ಲಾ ಮಕ್ಕಳಿಗೆ ಭಾರತೀಯತೆಯ ಪಾಠವನ್ನು ಕಲಿಸುವ ಕೆಲಸವನ್ನು ಕ್ರೈಸ್ತ ಶಿಕ್ಷಣ ಸಂಸ್ಥೆಗಳು ನಡೆಸುತ್ತಿದ್ದೆ ಎಂದರು.
 ಎಲ್ಲಿಯಾದರೂ ಬಲವಂತದ ಮತಾಂತರ ಪ್ರಕ್ರಿಯೆ ನಡೆದಲ್ಲಿ ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳುವಂತೆಮತ್ತು ಇದಕ್ಕೆ ನಮ್ಮ ಕ್ರೈಸ್ತ ಸಮುದಾಯದ ಕೂಡ ಬೆಂಬಲ ವಾಗಿರುತ್ತದೆ ಎಂಬುದಾಗಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶದ ನಿಕಟಪೂರ್ವ ಅಧ್ಯಕ್ಷರಾದ ವಲೇರಿಯನ್ ಫೆರ್ನಾಂಡಿಸ್,  ನಿಯೋಜಿತ ಅಧ್ಯಕ್ಷರಾದ ರಾಬರ್ಟ್  ಮಿನೇಜಸ್, ಮುಖಂಡರಾದ ಕಿರಣ್ ಎಲ್ ರಾಯ್ ಕ್ರಾಸ್ಟಾ, ಮೇರಿ ಡಿಸೋಜಾ ಉಪಸ್ಥಿತರಿದ್ದರು.

1 thought on “ಶಿಲುಬೆ ನಿಷೇಧ ಪೋಸ್ಟರ್ ಮನಸ್ಸಿಗೆ ನೋವಾಗಿದೆ- ಕಥೊಲಿಕ್ ಸಭಾ

Leave a Reply

Your email address will not be published. Required fields are marked *

error: Content is protected !!