ಕೀಲು ನೋವಿಗೆ ನುಗ್ಗೆ ಸೊಪ್ಪಿನ ಪರಿಹಾರ !

ಕೀಲು ಜೋಡಣೆಯಲ್ಲಿನ ಮೂಳೆಗಳ ಮೇಲೆ ಅತ್ಯಂತ ಮೃದುವಾದ ಕಾರ್ಟಿಲೇಜ್ ಮೃದ್ವಸ್ಥಿ ಇದ್ದು ಇದರಿಂದ ಚಲನೆ ಘರ್ಷಣೆ ರಹಿತವಾಗುತ್ತದೆ. ಈ ಕೀಲಿನ ಕಾರ್ಟಿಲೇಜ್‌ನಲ್ಲಿ ಹಾನಿ ಉಂಟಾದರೆ ಅದು ಸಂಧಿವಾತಕ್ಕೆ ದಾರಿಯಾಗುತ್ತದೆ.
ಕೀಲು ನೋವು, ಮೂಳೆ ಸವೆತ ಮಂಡಿ ನೋವು ಇತ್ತೀಚೆಗೆ 30, 40 ವರ್ಷದವರಿಗೆ ಸಾಮಾನ್ಯವಾಗಿದೆ. ಅದಕ್ಕಾಗಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿದರೂ ಯಾವುದೇ ಪರಿಹಾರವಾಗಿರುವುದಿಲ್ಲ. ಅದಕ್ಕೆ ಇಲ್ಲಿದೆ ಪರಿಹಾರ. ಇಲ್ಲಿ ನೀಡಿರುವ ಮನೆಮದ್ದುನ್ನು ಬಳಸಿದ ಒಂದು ದಿನದಲ್ಲೇ ಅದ್ಬುತ ಪರಿಣಾಮಕಾರಿ ಪ್ರಯೋಜನವನ್ನು ನೀಡುತ್ತದೆ .

ವಯಸ್ಸಾಗುವಿಕೆ, ಬೊಜ್ಜು , ಹಿಂದಿನ ಗಾಯ, ಮೂಳೆಗಳ ತಪ್ಪು ಜೋಡಣೆ ಮತ್ತು ಮೂಳೆ ಸವೆತ ಈ ಸಮಸ್ಯೆಗೆ ಪ್ರಮುಖ ಕಾರಣವಾಗುತ್ತದೆ .ಅತಿ ಸುಲಭವಾಗಿ ದೊರಕುವ ನುಗ್ಗೆ ಸೊಪ್ಪು ಈ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ ಎಂದರೆ ನೀವು ನಂಬಲೇ ಬೇಕು .

ಮೊದಲಿಗೆ ಒಂದು ಬಟ್ಟಲು ನುಗ್ಗೆ ಸೊಪ್ಪನ್ನು ತೆಗೆದುಕೊಂಡು ತಣ್ಣೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಬೇಕು.
ನೀರೆಲ್ಲ ಬಸಿದು , ಬರಿ ಎಲೆಗಳನ್ನು ಹೊರತೆಗೆದುಕೊಳ್ಳಬೇಕುನಂತ್ರ ಬರಿ ಎಲೆಗಳಷ್ಟನ್ನೇ ಬಿಡಿಸಿಟ್ಟುಕೊಂಡು ಅದಕ್ಕೆ ಒಂದು ಚಮಚ ಕುಟ್ಟಿ ಪುಡಿ ಮಾಡಿದ ಸೈನ್ಧವ ಲವಣ ಸೇರಿಸಿಕೊಳ್ಳಿ .

ಈ ಮಿಶ್ರಣವನ್ನು ನುಣ್ಣಗೆ ಅರೆದುಕೊಂಡು ಅಗತ್ಯ ಬಿದ್ದರೆ ಕೆಲವೇ ಹನಿ ನೀರು ಸೇರಿ ಪೇಸ್ಟ್ ರೀತಿಯಲ್ಲಿ ರುಬಿಕೊಳ್ಳಬೇಕುನಂತ್ರ ರುಬ್ಬಿಕೊಂಡ ಪೇಸ್ಟ್ ಅನ್ನು ಕೀಲು ನೋವು ಅಥವಾ ಸಂಧಿವಾತವಿರುವ ಸ್ಥಳಗಳಿಗೆ ಹಚ್ಚಿಕೊಂಡು ಅರ್ಧ ಗಂಟೆ ಹಾಗೆಯೇ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಬೇಕುಹೀಗೆ ಒಂದೆರಡು ಬಾರಿ ಮಾಡಿದರು ಸಹ ಕೀಲು ನೋವು ಅಥವಾ ಸಂಧಿವಾತದಿಂದ ಸಾಕಷ್ಟು ಮುಕ್ತಿ ಸಿಗುವುದು .ಇನ್ನು ಉತ್ತಮ ಫಲಕ್ಕೆ ಸ್ನಾನ ಮಾಡುವಾಗ ಒಂದು ಚಮಚ ಸೈನ್ಧವ ಲವಣ ಸೇರಿಸಿಕೊಂಡು ಸ್ನಾನ ಮಾಡಿದರೆ ಉತ್ತಮ .

Leave a Reply

Your email address will not be published. Required fields are marked *

error: Content is protected !!