ಕಾಲುಂಗುರದ ಉಪಯೋಗಗಳು

ಕಾಲುಂಗುರವನ್ನು ಬರಿ ಸಂಪ್ರಾಧ್ಯಾಕವಾಗಿ ಹಾಕಿಕೊಳ್ಳೋದು ಅಲ್ಲ, ಇದರಲ್ಲಿದೆ ಹತ್ತಾರು ಆರೋಗ್ಯಕಾರಿ ಉಪಯೋಗಗಳು. ಪ್ರತಿ ಮದುವೆಯಾದ ಹೆಣ್ಣು ಮಕ್ಕಳು ಕಾಲುಂಗುರವನ್ನು ಧರಿಸಿರುತ್ತಾರೆ ಹಾಗು ಇತ್ತೀಚಿನ ಜೀವನ ಶೈಲಿಗೆ ಕಳವರು ಕಾಲುಂಗುರ ಧರಿಸದೇ ಇರಬಹುದು ಆದ್ರೆ ಈ ವಿಚಾರ ತಿಳಿದ ಮೇಲೆ ತಪ್ಪದೆ ಬಳಸುತ್ತಾರೆ ಅನ್ಸತ್ತೆ.

ಬೆಳ್ಳಿ ಕಾಲುಂಗುರದ ಆರೋಗ್ಯಕಾರಿ ಪ್ರಯೋಜನಗಳು: ಭೂಮಿಯಿಂದ ಧ್ರುವೀಯ ಶಕ್ತಿಯನ್ನು ಹೀರಿಕೊಂಡು ದೇಹದಲ್ಲಿ ಹಾದು ಹೋಗಲು ಬೆಳ್ಳಿ ನೆರವಾಗುತ್ತದೆ. ದೇಹದಲ್ಲಿ ಇದು ಅನೇಕ ಬದಲಾವಣೆಗಳನ್ನು ತರುತ್ತದೆ. ಕಾಲುಂಗುರ ಹಾಕುವ ಎರಡನೇ ಬೆರಳಿನಲ್ಲಿ ಪ್ರೆಷರ್ ಪಾಯಿಂಟ್ ಇದೆ.

ಈ ಬೆರಳಿಗೆ ಬೆಳ್ಳಿ ಕಾಲುಂಗುರವನ್ನು ಧರಿಸುವುದರಿಂದ ಮಹಿಳೆಯರ ಋತುಚಕ್ರ ಸಮಸ್ಯೆತಡೆಯಬಹುದು. ಇದರಿಂದ ಪಿರಿಯಡ್ಸ್ ಸರಿಯಾಗಿ ಆಗುತ್ತದೆ. ಕಾಲುಂಗುರ ಹಾಕುವುದರಿಂದ ರಕ್ತ ಸಂಚಾರ ಸಮಪರ್ಕಗೊಂಡು, ಗರ್ಭಕೋಶವನ್ನು ಆರೋಗ್ಯವಾಗಿಡಬಹುದು.ಕಾಲಿನ ಕೆಲವು ನರಗಳು ಉತ್ತೇಜನಗೊಳ್ಳುತ್ತದೆ. ಇದರಿಂದ ಸಂತಾನೋತ್ಪತ್ತಿಯೂ ಚೆನ್ನಾಗಿರುತ್ತದೆ.

ಕಾಲುಂಗುರದಿಂದ ಬೆರಳಿನ ಮೇಲೆ ಒತ್ತಡ ಉಂಟಾಗುತ್ತದೆ. ಇದರಿಂದ ಅಲ್ಲಿರುವ ನರದ ಮೇಲೆ ಪ್ರೆಷರ್ ಬಿದ್ದು, ದೇಹಕ್ಕೆ ಮಸಾಜ್ ಸಿಕ್ಕಿಂತಾಗುತ್ತದೆ. ಇದು ಹಲವು ಸ್ತ್ರೀ ಸಂಬಂಧಿ ರೋಗಗಳಿಗೂ ರಾಮಬಾಣ. ದೇಹದ ಎಲ್ಲಾ ಅಂಗಾಗಳನ್ನೂ ರಿಫ್ರೆಶ್ ಆಗಲು ಕಾಲುಂಗುರ ಧರಿಸುವುದು ಉತ್ತಮ. ಕಾಲುಂಗುರ ಧರಿಸುವುದರಿಂದ ಮಹಿಳೆಯ ಹೊಟ್ಟೆಯಲ್ಲಿರುವ ಮಗುವೂ ಆರೋಗ್ಯವಾಗಿ ಬೆಳವಣಿಗೆಯಾಗುತ್ತದೆ.ಕಾಲುಂಗುರ ನಕರಾತ್ಮಕತೆ ನಿವಾರಿಸುತ್ತದೆ. ಇದು ಗರ್ಭಿಣಿಯರು ಮಾನಸಿಕವಾಗಿ ಆರೋಗ್ಯದಿಂದಿರಲು ಸಹಕರಿಸುತ್ತೆ.

ಬೆಳ್ಳಿ ವಸ್ತು ದೇಹವನ್ನು ತಂಪಾಗಿರಿಸುತ್ತವೆ. ಇದನ್ನು ಧರಿಸುವುದರಿಂದ ಪೊಸಿಟಿವ್‌ ಎನರ್ಜಿ ದೇಹದಲ್ಲಿ ಸಂಚಾರವಾಗುತ್ತದೆ. ಬ್ಲಡ್‌ ಪ್ರೆಶರ್‌ ಸಮಸ್ಯೆ ನಿರಾಳವಾಗಲು ಬೆಳ್ಳಿ ಕಾಲುಂಗುರ ನೆರವಾಗುತ್ತದೆ. ಬೆಳ್ಳಿ ಕಾಲುಂಗುರ ಇಷ್ಟೆಲ್ಲ ಪ್ರಯೋಜನಕಾರಿ ಅಂಶಗಳನ್ನು ಹೊಂದಿದೆ ಅನ್ನೋದನ್ನ ಕೆಲವು ಸಂಶೋಧನಾ ಅಧ್ಯಯನ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!