ಇವನ್ನು ದಿನಾಲೂ.50 ಗ್ರಾಂ ತಿನ್ನಿರಿ.ಕ್ಯಾನ್ಸರ್‌, ಹಾರ್ಟ್ ಅಟ್ಯಾಕ್ ಗಳಿಂದ ದೂರವಿರಿ!

ನಟ್ಸ್.ಬೀಜಗಳು.ಹೆಸರು ಯಾವುದಾದರೂ.ಯಾವ ಭಾಷೆಯಲ್ಲಿ ಹೇಗೆ ಕರೆದರೂ ಇವನ್ನು ಪ್ರತಿ ನಿತ್ಯ ತಿನ್ನುವುದರಿಂದ ನಮ್ಮ ದೇಹಕ್ಕೆಬಹಳಷ್ಟು ಲಾಭವಾಗುತ್ತದೆ.ಹಲವು ರೋಗಗಳು ದೂರವಾಗುತ್ತವೆ.ಶರೀರಕ್ಕೆ ಅತ್ಯಗತ್ಯವಾಗಿ ಬೇಕಾದ ವಿಟಮಿನ್ ಗಳು, ಮಿನಿರಲ್ ಗಳು ದೊರೆಯುತ್ತವೆ.ಆದರೆ,ಬೀಜಗಳ ವಿಷಯದಲ್ಲಿ ಪ್ರತಿಯೊಬ್ಬರನ್ನೂ ಕಾಡುವ ಪ್ರಶ್ನೆ ಒಂದೇ.ಅದು.ದಿನಾಲೂ ಎಷ್ಟು ನಟ್ಸ್( ಬೀಜಗಳನ್ನು) ತಿನ್ನಬೇಕೆನ್ನುವುದು.

ಶರೀರಕ್ಕೆ ಉಪಯೋಗವಾಗಲು ಯಾವ ಪ್ರಮಾಣದಲ್ಲಿ ಬೀಜಗಳನ್ನು ತಿನ್ನಬೇಕು ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ.ಆ ವಿಶಯವನ್ನೇ ತಿಳಿಹೇಳುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಯಾವುದೇ ವಿಧದ ಬೀಜಗಳಾದರೂ ಸರಿ ಪ್ರತಿದಿನ 10ಗ್ರಾಂ ತಂದರೆ ಸಾಕು. ಇದರಿಂದ ದೇಹಕ್ಕೆ ಆ ದಿನಕ್ಕೆ ಬೇಕಾಗುವಷ್ಟು ಪೋಷಕಾಂಶಗಳು ದೊರೆತಂತಾಗುತ್ತದೆ.

ಆದರೆ,ಒಂದೇ ವಿಧದ ನಟ್ಸ್ ಗಳಲ್ಲದೆ 3-4 ನಟ್ಸ್ ಗಳನ್ನು ,ಪ್ರತಿಯೊಂದು 10 ಗ್ರಾಂ ಪರಿಮಾಣದಲ್ಲಿ ಒಟ್ಟು 50 ಗ್ರಾಂ ಸೇವಿಸಿದಲ್ಲಿ ಅದ್ಭುತವಾದ ಫಲಿತಾಂಶ ಸಿಗುತ್ತದೆಂದು ಹಲವು ವೈದ್ಯರು ಹೇಳುತ್ತಿದ್ದಾರೆ. ಈ ರೀತಿ ನಟ್ಸ್ ಗಳನ್ನು ವಿವಿಧ ಪ್ರಮಾಣದಲ್ಲಿ ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.

ವಾಲ್ ನಟ್ಸ್ :
ಪ್ರತಿದಿನ ಸುಮಾರು 5-6 ತಿನ್ನುವುದರಿಂದ ಶರೀರದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಹೋಗಿ ಒಳ್ಳೆ ಕೊಲೆಸ್ಟ್ರಾಲ್ ತಯಾರಾಗುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳು ಬರುವುದನ್ನು ತಡೆಗಟ್ಟುತ್ತದೆ.ಮೂಳೆಗಳು ದೃಢವಾಗುತ್ತವೆ.ಶರೀರದ ಮೆಟಬಾಲಿಸಂ ಪ್ರಕ್ರಿಯೆ ಹೆಚ್ಚುತ್ತದೆ.ಸಕ್ಕರೆ ಖಾಯಿಲೆ ನಿಯಂತ್ರಣಕ್ಕೆ ಬರುತ್ತದೆ.ಕ್ಯಾನ್ಸರ್ ಬರುವುದಿಲ್ಲ.ಗಂಡಸರಲ್ಲಿ ವೀರ್ಯ ವೃದ್ಧಿಯಾಗುತ್ತದೆ.ಹೆಂಗಸರ ಋತುಚಕ್ರ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಬಾದಾಮಿ:
ಸುಮಾರು 8-9 ಬಾದಾಮಿಗಳು ಸುಮಾರು 10 ಗ್ರಾಂ ಇರುತ್ತವೆ.ಬಾದಾಮಿ ಉಪಯೋಗಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.ಹಲವು ರೀತಿಯ ಇನ್ಫೆಕ್ಷನ್ ಗಳು ಗುಣವಾಗುತ್ತವೆ. ಪುರುಷರಲ್ಲಿ ತಲೆದೋರುವ ನಪುಂಸಕತೆ ನಿವಾರಣೆಯಾಗುತ್ತದೆ.ಸಂತಾನವನ್ನು ಹೊಂದಲು ಸಹಕಾರಿ.ರಕ್ತದಲ್ಲಿರುವ ಸಕ್ಕರೆ ಮಟ್ಟ ನಿಯಂತ್ರಿಸಲ್ಪಡುತ್ತದೆ. ಡಯಾಬಿಟಿಸ್ ರೋಗಿಗಳಿಗೆ ಬಾದಾಮಿ ಒಳ್ಳೆಯದು .ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.ಹೃದಯ ರೋಗ ಹತ್ತಿರ ಸುಳಿಯುವುದಿಲ್ಲ.ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಒಳ್ಳೆ ಕೊಲೆಸ್ಟ್ರಾಲ್ ಉತ್ಪತ್ತಿಯಾಗುತ್ತದೆ. ದೇಹದ ತೂಕವನ್ನು ಕಡಿಮೆ ಮಾಡಬೇಕೆನ್ನುವವರಿಗೆ ಉತ್ತಮ ಆಹಾರ.ಸ್ವಲ್ಪ ತಿಂದರೂ ಹೊಟ್ಟೆ ತುಂಬುತ್ತದೆ.

ನೆಲಗಡಲೆ :
ನಾವು ದಿನ ನಿತ್ಯ ಮಾಡುವ ಅಡುಗೆಯಲ್ಲಿ,ಚಟ್ನಿಗಳಲ್ಲಿ ನೆಲಗಡಲೆಯನ್ನು ಉಪಯೋಗಿಸುತ್ತಿರುತ್ತೇವೆ.ಆದರೆ, ನೆಲಗಡಲೆಯನ್ನು ಬೀಜಗಳ ರೂಪದಲ್ಲೇ ದಿನಾಲೂ ತಿನ್ನಬಹುದು.10 ಗ್ರಾಂ ತಿನ್ನ ಬೇಕೆಂದರೆ,10-15 ಬೀಜಗಳನ್ನು ತಿಂದರೆ ಸಾಕು.ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ನೆಲಗಡಲೆ ಬೀಜಗಳಿಗಿದೆ. ಕೆಟ್ಟ ಕೊಲೆಸ್ಟ್ರಾಲ್ ಒಳ್ಳೆ ಕೊಲೆಸ್ಟ್ರಾಲ್ ಆಗಿ ಪರಿವರ್ತನೆಯಾಗುತ್ತದೆ.ಶರೀರಕ್ಕೆ ಅವಶ್ಯವಿರುವ ಸಸ್ಯ ಜನ್ಯ ಪ್ರೋಟೀನ್ ಗಳು ಲಭಿಸುತ್ತವೆ. ಕ್ಯಾನ್ಸರ್,ಹೃದಯ ರೋಗಗಳು ಬರುವುದಿಲ್ಲ. ವಿಟಮಿನ್ ಇ ಇರುವುದರಿಂದ ಪುರುಷರ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ.

ಪಿಸ್ತಾ:
ದಿನಾಲೂ 8-9 ತಿಂದರೆ ಸಾಕು.10ಗ್ರಾಂ ಕೋಟ ಪೂರೈಸಿದಂತಾಗುತ್ತದೆ.ಪಿಸ್ತಾ ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುವುದಿಲ್ಲ. ದೇಹದ ತೂಕವನ್ನು ಕಡಿಮೆಮಾಡಿಕೊಳ್ಳ ಬಯಸುವವರಿಗೆ ಉಪಕಾರಿ. ಸ್ನಾಯುಗಳ ನೋವು ಕಡಿಮೆಯಾಗುತ್ತದೆ.ಒಣ ಚರ್ಮ ಸಮಸ್ಯೆ ಉಳ್ಳವರು ಪಿಸ್ತಾ ಉಪಯೋಗಿಸಿದರೆ ಚರ್ಮ ಮೃದುವಾಗುತ್ತದೆ.ನಾರಿನಂಶ ಇರುವುದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.ಪುರುಷರ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ.ದೇಹದ ರೋಗನಿರೋಧಕ ಶಕ್ತಿ ಬಲಿಷ್ಠವಾಗುತ್ತದೆ. ರಕ್ತ ಹೀನತೆಯನ್ನು ನಿವಾರಿಸುತ್ತದೆ.ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿರುತ್ತದೆ.

ಗೋಡಂಬಿ:
ಪ್ರತಿದಿನ 6-7 ಗೋಡಂಬಿ (ಗೇರು ಬೀಜ) ತಿಂದರೆ ಸಾಕು.ಹೃದ್ರೋಗ ಸಮಸ್ಯೆಗಳು ಹತ್ತಿರ ಸುಳಿಯುವುದಿಲ್ಲ.ಕೆಟ್ಟ ಕೊಲೆಸ್ಟ್ರಾಲ್ ಹೋಗಿ ಒಳ್ಳೆ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ.ರಕ್ತ ಶುದ್ಧಿಯಾಗುತ್ತದೆ.ರಕ್ತ ಹೀನತೆ ದೂರವಾಗುತ್ತದೆ. ಶರೀರದ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ.ಕಣ್ಣಿನ ಸಮಸ್ಯೆಗಳಿರುವುದಿಲ್ಲ.ಸಕ್ಕರೆ ಕಾಯಿಲೆ ಹತೋಟಿಯಲ್ಲಿರುತ್ತದೆ.

ಪೈನ್ ಬೀಜಗಳು:
ಈ ಬೀಜಗಳನ್ನು 12-14 ತಿಂದರೆ,10 ಗ್ರಾಂ ಕೋಟ ಪೂರೈಸಿದಂತಾಗುತ್ತದೆ.ಪೈನ್ ನಟ್ಸ್ ತಿನ್ನುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ.ಶರೀರಕ್ಕೆ ಅಗತ್ಯವಿರುವ ಶಕ್ತಿ ದಿನವಿಡೀ ದೊರೆಯುತ್ತದೆ. ವೃದ್ಧಾಪ್ಯದಿಂದ ಬರುವ ಸುಕ್ಕುಗಳು ಕಡಿಮೆಯಾಗಿ ಯುವಕರಂತೆ ಕಾಣುತ್ತಾರೆ.ನೇತ್ರ ಸಮಸ್ಯೆಗಳು ನಿವಾರಣೆಯಾಗುತ್ತವೆ.

ನೋಡಿದಿರಲ್ಲಾ.
ನಟ್ಸ್ ಗಳನ್ನು ಉಪಯೋಗಿಸುವುದರಿಂದ ಎಂತಹ ಅದ್ಭುತ ಫಲಿತಾಂಶಗಳು ಲಭಿಸುತ್ತವೆಂದು.ಮೇಲೆ ತಿಳಿಸಿರುವ ಎಲ್ಲವನ್ನೂ ಪ್ರತೀದಿನ 10 ಗ್ರಾಂ ನಂತೆ ತಿನ್ನುತ್ತಿದ್ದರೆ ಅನಾರೋಗ್ಯ ನಿಮ್ಮ ಬಳಿ ಸುಳಿಯುವುದಿಲ್ಲ.ಇನ್ನು ನೀವು ಡಾಕ್ಟರ್ ಬಳಿ ಹೋಗುವ ಅವಶ್ಯಕತೆಯೇ ಇಲ್ಲ ಎಂದು ಹೇಳಿದರೆ ಅತಿಶಯೋಶಕ್ತಿಯಾಗಲಾರದು

Leave a Reply

Your email address will not be published. Required fields are marked *

error: Content is protected !!