ಹಾಲು ಕುಡಿಯೋದು ಆರೋಗ್ಯಕ್ಕೆ ಉತ್ತಮ

ಸಾಮಾನ್ಯವಾಗಿ ಮಕ್ಕಳು ಹಾಗೂ ಮಹಿಳೆಯರು ಆರೋಗ್ಯದ ದೃಷ್ಟಿಯಿಂದ ಹಾಲನ್ನು ಕುಡಿಯುತ್ತಾರೆ. ಆದ್ರೆ ವೈದ್ಯರ ಪ್ರಕಾರ ಮಕ್ಕಳು-ಮಹಿಳೆಯರೊಂದೇ ಅಲ್ಲ ಪುರುಷರೂ ಹಾಲನ್ನು ಕುಡಿಯುವುದು ಬಹಳ ಪ್ರಯೋಜನಕಾರಿ ಎಂದು ತಿಳಿಸಿದ್ದಾರೆ.

ರಾತ್ರಿ ಮಲಗುವ ಮೊದಲು ಪುರುಷರು ಒಂದು ಗ್ಲಾಸ್ ಹಾಲನ್ನು ಕುಡಿಯುವುದರಿಂದ ಸುಖವಾದ ನಿದ್ರೆ ಬರುತ್ತದೆ. ಇದ್ರಲ್ಲಿರುವ ಟ್ರಿಪ್ಟೊಫಾನ್ ಎಂಬ ಅಮೈನೊ ಆಸಿಡ್ ಮೆದುಳನ್ನು ಶಾಂತಗೊಳಿಸಿ ಸುಖ ನಿದ್ರೆ ಬರುವಂತೆ ಮಾಡುತ್ತದೆ.

ಹಾಲಿನಲ್ಲಿರುವ ನೀರಿನ ಅಂಶ ಜೀರ್ಣಾಂಗವನ್ನು ಆರೋಗ್ಯವಾಗಿರಿಸುತ್ತದೆ. ಜೀರ್ಣಕ್ರಿಯೆ ಸುಲಭವಾಗುತ್ತದೆ.ಹಾಲಿನಲ್ಲಿರುವ ಕ್ಯಾಲ್ಸಿಯಂ ಪಾರ್ಶ್ವವಾಯು ಬರದಂತೆ ತಡೆಯುತ್ತದೆಯಂತೆ. ಹಾಲಿನಲ್ಲಿರುವ ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಂ ರಕ್ತದೊತ್ತಡವನ್ನು ನಿಯಂತ್ರಿಸುತ್ತೆ. ಬಿಪಿ ಬರದಂತೆ ತಡೆಯುತ್ತದೆ.

ಪುರುಷರ ಸ್ನಾಯುಗಳನ್ನು ಹಾಗೂ ಮೂಳೆಗಳನ್ನು ಬಲಪಡಿಸುತ್ತದೆ., ಕ್ಯಾಲ್ಸಿಯಂ ಹಾಗೂ ಪ್ರೊಟೀನ್ ಗಳು ಕೊಬ್ಬು ಕರಗಿಸಲು ನೆರವಾಗುತ್ತವೆ. ಇದ್ರಿಂದ ಸ್ಥೂಲಕಾಯ ಸಮಸ್ಯೆ ಕಾಡುವುದಿಲ್ಲ., ಹಾಲಿನಲ್ಲಿರುವ ಕೊಬ್ಬು ಹಾಗೂ ಪ್ರೊಟೀನ್ ಪುರುಷರ ಹಾರ್ಮೋನ್ ಗಳನ್ನು ಸಕ್ರಿಯಗೊಳಿಸುತ್ತದೆ. ಇದ್ರಿಂದ ಫರ್ಟಿಲಿಟಿ ಹೆಚ್ಚಾಗುತ್ತದೆ.

Leave a Reply

Your email address will not be published. Required fields are marked *

error: Content is protected !!