ಒಣ ಕೆಮ್ಮಿನ ಸಮಸ್ಯೆಗೆ ಪರಿಹಾರ ಕಾಳುಮೆಣಸು

ಲಿಂಬು, ಸಕ್ಕರೆ(ಕಲ್ಲುಸಕ್ಕರೆ) ಮತ್ತು ಕಾಳುಮೆಣಸನ್ನು ಸೇರಿಸಿ ಗಟ್ಟಿಯಾದ ಪಾಕವನ್ನು ಮಾಡಿಟ್ಟುಕೊಂಡು ದಿನವೂ 2 ಚಮಚ ಸೇವಿಸುತ್ತಾ ಬಂದರೆ ಕಫವನ್ನು ಕಡಿಮೆಯಾಗಿಸುತ್ತದೆ ಮತ್ತು ಕೆಮ್ಮಿನ ಸಮಸ್ಯೆಯನ್ನೂ ನಿವಾರಿಸುತ್ತದೆ.

  • ಒಂದು ಲೋಟ ನೀರಿಗೆ ಶುಂಠಿ, ನಿಂಬೆ ರಸ, ಕಾಳು ಮೆಣಸು ಮತ್ತು ಬೆಲ್ಲವನ್ನು ಹಾಕಿ ಕುದಿಸಿಕೊಂಡು ಬಿಸಿ ಬಿಸಿಯಾಗಿ ಕುಡಿಯುವುದರಿಂದ ನೆಗಡಿ ಮತ್ತು ಕಫ ಕಡಿಮೆಯಾಗುತ್ತದೆ.
  • ಶುಂಠಿಯ ಚಹಾವನ್ನು ಮಾಡಿ ಕುಡಿದರೆ ನೆಗಡಿ ಮತ್ತು ಕಫವನ್ನು ನಿವಾರಿಸುತ್ತದೆ.
  • ದಾಲ್ಚಿನಿ, ಜೇನು ಮತ್ತು ನಿಂಬೆರಸವನ್ನು ಸೇರಿಸಿ ಸೇವಿಸಿದರೆ ನೆಗಡಿ ಮತ್ತು ಕಫದ ನಿವಾರಣೆಯಾಗುತ್ತದೆ.
  • ನಿಯಮಿತವಾಗಿ ನೆಲ್ಲಿಕಾಯಿಯನ್ನು ಸೇವಿಸುತ್ತಿದ್ದರೆ ನೆಗಡಿ, ಕೆಮ್ಮು, ಕಫಗಳಿಂದ ದೂರವಿರಬಹುದು.
  • ಶುಂಠಿ, ಲವಂಗ ಮತ್ತು ಉಪ್ಪನ್ನು ಸೇರಿಸಿಕೊಂಡು ಅಗಿದರೆ ಕಫ ಮತ್ತು ಗಂಟಲ ಕೆರೆತದ ನಿವಾರಣೆಯಾಗುತ್ತದೆ.
  • ಏಲಕ್ಕಿ ಮತ್ತು ಶುಂಠಿ ಪುಡಿಯನ್ನು ಸೇರಿಸಿಕೊಂಡು ಸೇವಿಸಿದರೆ ಒಣ ಕೆಮ್ಮು ವಾಸಿಯಾಗುತ್ತದೆ.
  • ಕಲ್ಲು ಸಕ್ಕರೆ ಮತ್ತು ಲವಂಗವನ್ನು ಕೆಮ್ಮು ಬರುತ್ತಿರುವ ಸಂರ್ಭದಲ್ಲಿ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.
  • ಒಂದು ಲೋಟ ಬೆಚ್ಚಗಿನ ಹಾಲಿಗೆ ಅರಿಶಿಣ ಮತ್ತು ಕಲ್ಲುಸಕ್ಕರೆಯನ್ನು ಬೆರೆಸಿ ರಾತ್ರಿ ಮಲಗುವ ಮೊದಲು ಕುಡಿದರೆ ಕಫ ಮತ್ತು ನೆಗಡಿ ಕಡಿಮೆಯಾಗುತ್ತದೆ. ಅರಿಶಿಣ ಆ್ಯಂಟಿಬ್ಯಾಕ್ಟೀರಿಯಲ್ ಗುಣವನ್ನು ಹೊಂದಿದೆ.
  • 4-5 ದೊಡ್ಡಪತ್ರೆ ಎಲೆಗಳನ್ನು ಬಿಸಿ ಮಾಡಿ ಅದರ ರಸಕ್ಕೆ 2 ಚಮಚ ಜೇನನ್ನು ಸೇರಿಸಿ ಸೇವಿಸುತ್ತಾ ಬಂದರೆ ಕಫ ಕಡಿಮೆಯಾಗುತ್ತದೆ.
  • 1 ಚಮಚ ಜೇನಿಗೆ 1/4 ಚಮಚ ಕಾಳು ಮೆಣಸಿನ ಪುಡಿಯನ್ನು ಸೇರಿಸಿಕೊಂಡು ತಿಂದರೆ ಕಫ ಕಡಿಮೆಯಾಗುತ್ತದೆ.

Leave a Reply

Your email address will not be published. Required fields are marked *

error: Content is protected !!