ಬಹುಪಯೋಗಿ ಔಷಧಗಳ ಸಂಜೀವಿನಿ ‘ತುಳಸಿ’

ಬಹುಪಯೋಗಿ ಔಷಧಗಳ ಸಂಜೀವಿನಿ ‘ತುಳಸಿ’ಮೂರು ಬಗೆಯ ತುಳಸಿ ಗಿಡಗಳಿವೆ.

ಕೃಷ್ಣ ತುಳಸಿ ಅಥವಾ ಕಪ್ಪು ತುಳಸಿ, ರಾಮ ತುಳಸಿ ಅಥವಾ ಶ್ರೀ ತುಳಸಿ, ವನ ತುಳಸಿ ಅಥವಾ ಕಾಡು ತುಳಸಿ

1. ಹಸಿವು – ನಿದ್ದೆ ಹೆಚ್ಚಾಗಲೀ ಕಡಿಮೆಯಾಗಲೀ ಆದರೆ ತುಳಸಿಯ ಕಷಾಯವನ್ನು ಸೇವಿಸಿದರೆ ಸಾಕು – ಸಮವಾಗುತ್ತೆ.

2. ಹೊಟ್ಟೆ ತೊಳೆಸು, ವಾಂತಿ, ಬೇಧಿ, ಕ್ಷಯ – ಇವುಗಳನ್ನು ಗುಣಪಡಿಸುವ ಸಾಮರ್ಥ್ಯವುಳ್ಳದ್ದು ತುಳಸಿ. ಬ್ಯಾಕ್ಟೀರಿಯಾ, ಫಂಗಸ್, ಮತ್ತು ವೈರಸ್ – ಮೂರನ್ನೂ ಸರ್ವನಾಶಮಾಡಬಲ್ಲುದು!

3. ಮನೆಯಲ್ಲಿ ಸೊಳ್ಳೆ ಹೆಚ್ಚಾಗಿದ್ದರೆ, ನೀರಿನಲ್ಲಿ ತುಳಸಿ ಎಲೆಗಳನ್ನು ಕುದಿಸಿ ಸಿಂಪಡಿಸಬೇಕು. ಡಿ.ಡಿ.ಟಿ. ಸಿಂಪಡಿಸಿ ಬಯೋ-ಮ್ಯಾಗ್ನಿಫಿಕೇಷನ್ಗೆ ಗುರಿಯಾಗುವುದು ಅನುಚಿತ.

4. ಚರ್ಮರೋಗಗಳಿಗೆ, ಅದರಲ್ಲೂ ಅಲರ್ಜಿಗಳ ವಿರುದ್ಧ ಹೋರಾಡಬೇಕೆಂದರೆ ತುಳಸಿಗಿಂತ ಒಳ್ಳೆಯ ಔಷಧ ಸಿಗದು.

5. ತುಳಸಿ ಕಷಾಯವನ್ನು ನಿತ್ಯವೂ ಕುಡಿಯುವುದರಿಂದ ಮಾನಸಿಕ ಒತ್ತಡಗಳನ್ನು ತಡೆಗಟ್ಟಬಹುದು.

6. ಸಕ್ಕರೆ ಕಾಯಿಲೆಯನ್ನು ಗುಣ ಪಡಿಸಲು ತುಳಸಿಯನ್ನು ಬಳಸುತ್ತಾರೆ. ರಕ್ತ – ಸಕ್ಕರೆ ಪ್ರಮಾಣವು ಹತೋಟೆಗೆ ಬರಲು ತುಳಸಿಯು ಬಹಳ ಉಪಯುಕ್ತ.

7. ರಕ್ತದೊತ್ತಡವನ್ನು (BP) ಸಮವಾಗಿಸಲೂ ಹೃದ್ರೋಗಗಳನ್ನು ತಡೆಗಟ್ಟಲೂ ಸಹ ತುಳಸಿಯನ್ನು ಬಳಸಬಹುದು.

8. ಕೆಮ್ಮು ನೆಗಡಿ ಮುಂತಾದ ಶೀತಪ್ರವೃತ್ತ ಕಾಯಿಲೆಗಳಿಗೆ ತುಳಸಿಯೇ ಮೊದಲ ಮದ್ದು. ತುಳಸಿ ಕಷಾಯವು ಉತ್ತೇಜಕಕಾರಿ ಪೇಯ ಕೂಡ!

9. ಹಲ್ಲು ನೋವಿದ್ದು, ಹಲ್ಲು ಹುಳುಕಿದ್ದಾಗ ತುಳಸಿ ನೀರಿನಲ್ಲಿ ಬಾಯಿ ಮುಕ್ಕಳಿಸುವುದನ್ನು ವೈದ್ಯರು ಸೂಚಿಸುತ್ತಾರೆ.
ಇದರಲ್ಲಿ ರೋಗನಿರೋಧಕ ಶಕ್ತಿ ಇದ್ದು ದಿನಾ ಬೆಳಗ್ಗೆ ಎದ್ದು ಅದರ 4-5 ಎಲೆಗಳನ್ನು ತೊಳೆದು ಅಗಿದು ತಿನ್ನುವುದರಿ೦ದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಭಾರತೀಯ ಸಂಸ್ಕೃತಿಯಲ್ಲಿ ತುಳಸಿಯ ಪಾತ್ರ ಮಹತ್ವದ್ದು. ತುಳಸಿಕಟ್ಟೆಯನ್ನು ಹೊಂದಿರದ ಹಿಂದೂಗಳ ಮನೆಯೇ ಇಲ್ಲ. ಅಂತಹ ತುಳಸಿ ಪವಿತ್ರವಾದದ್ದು ಮಾತ್ರವಲ್ಲ, ರೋಗ ನಿರೋಧಕ ಶಕ್ತಿ ಸೇರಿದಂತೆ ಆರೋಗ್ಯಕ್ಕೆ ಅನುಗುಣವಾದದ್ದು ಎಂದು ಹಲವು ಸಂಶೋಧನೆಗಳು ಹೇಳಿವೆ.

ಹಿಂದೂ ಧಾರ್ಮಿಕ ಸಂಪ್ರದಾಯದ ಪ್ರಮುಖ ಅಂಗವಾಗಿರುವ ತುಳಸಿ (Ocimum tenuiflorum) ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಹಿಂದೂಗಳು ಇದನ್ನು ಅತ್ಯಂತ ಪವಿತ್ರವಾಗಿ ಕಾಣುತ್ತಾ ಪೂಜೆ ಮಾಡುವುದು ಸಾಮಾನ್ಯ. ತುಳಸಿಯನ್ನು ಸ್ಪರ್ಶಿಸುವುದರಿಂದ ಪಾಪಗಳು ಪರಿಹಾರವಾಗುತ್ತವೆಯೆಂಬ ನಂಬಿಕೆ ಮಾತ್ರವಲ್ಲ, ಹಲವು ರೋಗಗಳು ಶಮನವಾಗುತ್ತದೆ ನಾಶವಾಗುತ್ತಯೆಂಬ ನಂಬಿಕೆಯೂ ಬೆಳೆದು ಬಂದಿದೆ.

ಮುಖ್ಯವಾಗಿ ತುಳಸಿಯಲ್ಲಿ ಎರಡು ವಿಧಗಳಿವೆ. ಕರಿ ಅಥವಾ ಶ್ಯಾಮ ವರ್ಣದ ಕೃಷ್ಣ ತುಳಸಿ ಮತ್ತು ತಿಳಿಬಣ್ಣದ ರಾಮ ತುಳಸಿ. ಸಾಮಾನ್ಯವಾಗಿ ಪೂಜೆಗೆ ಬಳಸುವ ಕೃಷ್ಣ ತುಳಸಿಯು ಹಲವು ವೈದ್ಯಕೀಯ ಗುಣಗಳನ್ನು ಹೊಂದಿವೆ.

ಈ ಗಿಡಮೂಲಕೆಯು ಶೀತ, ತಲೆನೋವು, ಅಜೀರ್ಣ, ಮಲೇರಿಯಾ ಮತ್ತು ಹೃದಯ ಸಂಬಂಧದ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ಅಲ್ಲದೆ ಶರೀರದಲ್ಲಿರುವ ಹಲವು ವಿಷಕ್ರಿಮಿಗಳನ್ನು ಇವು ನಾಶ ಮಾಡುತ್ತದೆ.

ದೇವಸ್ಥಾನ, ಯಾತ್ರಾಸ್ಥಳ ಮತ್ತು ಸಂಪ್ರದಾಯಸ್ಥ ಹಿಂದೂ ಕುಟುಂಬದಲ್ಲಿ ಇವುಗಳು ಹೆಚ್ಚಾಗಿ ಕಾಣ ಸಿಗುತ್ತದೆ. ಇವುಗಳಿಗೆ ಒತ್ತಡ ನಿವಾರಿಸುವ ಶಕ್ತಿಯು ಇದೆ. ತುಳಸಿಯ ಎಲೆಗಳನ್ನು ಹಸಿಯಾಗಿ ಅಥವಾ ಒಣಗಿಸಿ ಪುಡಿಯ ರೂಪದಲ್ಲಿ ಅಥವಾ ಪಾನೀಯ ರೂಪದಲ್ಲಿ ಕುಡಿಯಲಾಗುತ್ತಿದೆ.

ಹಂದಿಜ್ವರಕ್ಕೂ ರಾಮಬಾಣ…
ಆಯುರ್ವೇದ ಪ್ರಕಾರ ಹಂದಿಜ್ವರ ನಿವಾರಣೆಗೆ ತುಳಸಿ ರಾಮಬಾಣವಂತೆ. ಇದರಲ್ಲಿರುವ ಔಷಧೀಯ ಗುಣಗಳು ಎಚ್‌1ಎನ್1 ರೋಗಾಣುಗಳು ಶರೀರಕ್ಕೆ ಪ್ರವೇಶಿಸದಂತೆ ರಕ್ಷಿಸುತ್ತದೆಯಂತೆ.

ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ತುಳಸಿ ವೃದ್ಧಿಪಡಿಸುತ್ತದೆ. ಅಲ್ಲದೆ ಹಂದಿಜ್ವರ ರೋಗಾಣುಗಳನ್ನು ಹತ್ತಿಕ್ಕುವ ಗುಣ ತುಳಸಿಯಲ್ಲಿದೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಡುತ್ತಾರೆ.

ತುಳಸಿ ಎಲೆಗಳು ಹಂದಿಜ್ವರ ಬರದಂತೆ ತಡೆಗಟ್ಟುತ್ತದೆ. ಹಾಗೆಯೇ ರೋಗ ಪೀಡಿತರಾದವರು ಶೀಘ್ರದಲ್ಲೇ ಗುಣಮುಖವಾಗಲು ನೆರವಾಗುತ್ತದೆ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.

ಆರೋಗ್ಯದ ದೃಷ್ಟಿಕೋನದಿಂದ ಪ್ರತಿದಿನ 7ರಿಂದ 8 ತುಲಸಿ ಎಲೆಗಳನ್ನು ತಿನ್ನುವುದು ಉತ್ತಮ. ಇದರಿಂದ ರೋಗ ನಿರೋಧಕ ಶಕ್ತಿ ವೃದ್ದಿಯಾಗುವುದಲ್ಲದೆ ಬಾಯಿಯ ದುರ್ಗಂಧವು ಕೂಡಾ ನಿವಾರಣೆಯಾಗುತ್ತದೆ.

ದಿನನಿತ್ಯ ತುಳಸಿ ಸೇವನೆಯಿಂದ ಅಡ್ಡ ಪರಿಣಾಮಗಳೇನು ಇಲ್ಲ. ಜ್ವರ, ವಿಷಮ ಶೀತ, ಶ್ವಾಸಕೋಶದ ಸೋಂಕು, ಕೆಮ್ಮು ಮತ್ತು ನೆಗಡಿ ಹೋಗಾಡಿಸಲು ಇದರಿಂದ ಸಾಧ್ಯ. ತುಳಸಿ ಕಷಾಯ ಕುಡಿದರೆ ದೇಹ ಸದೃಢವಾಗುವುದರೊಂದಿಗೆ ಹೊಟ್ಟೆ ಸಂಬಂಧಿ ರೋಗಳನ್ನು ದೂರವಿರಿಸಬಹುದು.

ತುಳಸಿ ಎಲೆಯ ರಸವನ್ನು ಎಣ್ಣೆಯಲ್ಲಿ ಕಾಯಿಸಿ ತಲೆಗೆ ಹಚ್ಚುವುದರಿಂದ ತಲೆಯಲ್ಲಿನ ಹೇನು, ಹೊಟ್ಟು ಬರುವಿಕೆ ಕೂಡಾ ನಿವಾರಣೆಯಾಗುತ್ತದೆ. ಹಾಗೆಯೇ ಹಲವು ವಿಧದ ಚರ್ಮ ಸಂಬಂಧಿ ರೋಗಗಳಿಂದಲೂ ನಿವಾರಣೆ ಮಾಡುತ್ತದೆ. ಇದರಿಂದ ಚರ್ಮ ಮೃದುವಾಗುವುದಲ್ಲದೆ ಅಂದವಾಗುತ್ತದೆ. ಮನೆ ಪರಿಸರದಲ್ಲಿ ತುಳಸಿ ಗಿಡಗಳನ್ನು ಬೆಳೆಸುವ ಮೂಲಕ ಸೊಳ್ಳೆಗಳನ್ನು ದೂರವಿರಿಸಬಹುದು. ಒಟ್ಟಿನಲ್ಲಿ ಉತ್ತಮ ಆರೋಗ್ಯಕ್ಕಾಗಿ ತುಳಸಿ ಸೇವನೆ ಉತ್ತಮ.
ಮನೆಯಂಗಳವನ್ನು ಅಲಂಕರಿಸುವ ಶ್ರೀತುಳಸಿ, ಪೂಜೆಯಲ್ಲಿ ಇರಲೇಬೇಕಾದ ತುಳಸಿ, ಧಾರ್ಮಿಕವಾಗಿ ಎಷ್ಟು ಮಹತ್ವದ್ದೋ ಅಷ್ಟೇ ಔಷಧಿಸತ್ವದಿಂದ ಕೂಡಿದ ವನಸ್ಪತಿ. ಸಂಸ್ಕೃತದಲ್ಲಿ ತುಳಸಿಗೆ ಸುರಸಾ, ಗ್ರಾಮ್ಯ, ಸುಲಭಾ, ಗೌರಿ, ಬಹುಮಂಜರಿ, ಶೂಲಘ್ನಿ, ದೇವದುಂದುಭಿ, ಪಾವನಿ, ವಿಷ್ಣುಪ್ರಿಯೆ, ದಿವ್ಯ, ಭಾರತಿ ಮುಂತಾದ ಅನೇಕ ಪರ್ಯಾಯ ನಾಮಗಳಿವೆ.

ತುಳಸಿ ಒಂದು ಉತ್ಕೃಷ್ಟ ರಸಾಯನವಾಗಿದೆ, ಇದು ಉಷ್ನ ಹಾಗು ತ್ರಿದೋಷ ಶಾಮಕವಾಗಿದೆ. ರಕ್ತವಿಕಾರ, ಜ್ವರ, ವಾಯು, ಕೆಮ್ಮು ಹಾಗು ಜಂತುನಾಶಕವಾಗಿದೆ ಅಲ್ಲದೆ ಹೃದಯಕ್ಕೆ ಹಿತಕಾರಿಯಾಗಿದೆ.

ಕೆಮ್ಮುನೆಗಡಿ ಇರುವಾಗ ತುಳಸಿಯ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಬೇಕು.ಗಂಟಲ ನೋವು ಇದ್ದಾಗ, ಸ್ವರಕಳೆದಾಗ ತುಳಸಿಯ ಎಲೆಹಾಕಿ ನೀರನ್ನು ಕುದಿಸಿ ಬಾಯಿಮುಕ್ಕಳಿಸಬೇಕು.ಎಲ್ಲ ಬಗೆಯ ಜ್ವರದ ಪೀಡೆಗೆ ತುಳಸಿಯ ಕಷಾಯ ಪರಿಣಾಮಕಾರಿಯಾಗಿದೆ.

ಚರ್ಮರೋಗಕ್ಕೆ (ಇಸಬು,ಗಜಕರ್ಣಕ್ಕೆ) ತುಳಸಿಯ ಎಲೆಯನ್ನು ಉಪ್ಪಿನೊಂದಿಗೆ ಬೆರೆಸಿ ಅರೆದು ಲೇಪಿಸಬೇಕು, ತುಳಸಿ ಕಷಾಯ ಕುಡಿಯಬೇಕು.ಮಕ್ಕಳಿಗೆ ಕಫಕೂಡಿದ ಕೆಮ್ಮು ಬಂದಾಗ ತುಳಸಿಯ ದಳ ಜೇನಿನಲ್ಲಿ ಅದ್ದಿ ತಿನ್ನಿಸಬೇಕು.

ಯಕೃತ್ತಿನ(ಲಿವರ್) ತೊಂದರೆಗೆ ತುಳಸಿ ಕಷಾಯ ಉಪಶಮನಕಾರಿ.ರೋಗನಿರೋಧಕ ಶಕ್ತಿ ಹೆಚ್ಚಿಸಲು ಖಾಲಿಹೊಟ್ಟೆಯಲ್ಲಿ 5ರಿಂದ 10 ತುಳಸಿಯ ದಳ ತಿನ್ನಬೇಕು.

ಬಿಳಿ ತುಳಸಿಯ ಸೇವನೆಯಿಂದ ತ್ವಚೆ, ಮಾಂಸ ಹಾಗು ಎಲುಬಿನ ರೋಗಗಳು ದೂರವಾಗುತ್ತವೆ.ಕಪ್ಪು ತುಳಸಿಯ ಸೇವನೆಯಿಂದ ಬಿಳಿ ಕಲೆಗಳು ದೂರವಾಗುತ್ತವೆ

ತುಳಸಿಯ ಬೇರು ಹಾಗು ಎಲೆಗಳು ಜ್ವರದಲ್ಲಿ ಉಪಯೋಗಕಾರಿಯಾಗಿವೆ, ತುಳಸಿಯ ಚಹಾ ಕುಡಿಯುವದರಿಂದ ಆಲಸ್ಯ, ಸುಸ್ತು ಹಾಗು ವಾತ-ಪಿತ್ತದ ವಿಕಾರಗಳು ದೂರವಾಗುತ್ತವೆ, ಹಸಿವು ಹೆಚ್ಚಾಗುತ್ತದೆ. ಮಜ್ಜಿಗೆಯಲ್ಲಿ ತುಳಸಿ ಎಲೆಗಳನ್ನು ಕೂಡಿಸಿಕೊಂಡು ತೆಗೆದುಕೊಳ್ಳುವದರಿಂದ ಬೊಜ್ಜಿನಲ್ಲಿ ಆರಾಮ ಸಿಗುವುದು. ತುಳಸಿ ಸೇವನೆಯಿಂದ ಶರೀರ ಸ್ವಸ್ಥ ಹಾಗು ಸುಂದರವಾದ ಮೈಕಟ್ಟನ್ನು ಹೊಂದುತ್ತದೆ, ಅಜೀರ್ಣ, ಮಲಬದ್ಧತೆ, ಗ್ಯಾಸ್, ಹುಳಿ ಇತ್ಯಾದಿಗಳಲ್ಲಿ ಇದು ರಾಮಬಾಣ ಔಷಧಿ

ಮನೆಹಿತ್ತಲಲ್ಲಿ ಬಿಟ್ಟ ಕೃಷ್ಣತುಳಸಿ ಎಲೆಗಳನ್ನು ಜಜ್ಜಿ ರಸಹಿಂಡಿ ಅದಕ್ಕೆ ತೊಟ್ಟು ಜೇನುತುಪ್ಪು ಬೆರೆಸಿ ಸೇವಿಸಿದರೂ ಕೆಮ್ಮು ದೂರವಾಗುತ್ತದೆ. ಈ ಕಾಫ್ ಸಿರಪ್ಪಿನಿಂದ ಕಡಿಮೆಯಾಗುತ್ತಿಲ್ಲ ಎಂದು ಅದು, ಅದರಿಂದ ಕಡಿಮೆಯಾಗುತ್ತಿಲ್ಲ ಎಂದು ಮತ್ತೊಂದು ಕಾಫ್ ಸಿರಪ್ ಸೇವಿಸುವ ಬದಲು ಮನೆಯೌಷಧಿಗೆ ಮೊರೆ ಹೋದರೆ ಹಣವೂ ಉಳಿತಾಯವಾಗುತ್ತದೆ ಮತ್ತು ಮನಸಿಗೂ ನೆಮ್ಮದಿ ಇರುತ್ತದೆ. ಪ್ರಯತ್ನಿಸಿ ನೋಡಿ

Leave a Reply

Your email address will not be published. Required fields are marked *

error: Content is protected !!