ಗ್ರಾಹಕರಿಗೆ ನೀಡುವ ಸೇವೆಯೇ ಸಹಕಾರಿ ರಂಗಕ್ಕೆ ಶ್ರೀರಕ್ಷೆ : ಸೊರಕೆ

ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಮತ್ತು ಗ್ರಾಹಕರನ್ನು ಸರಿಯಾಗಿ ಅರ್ಥೈಸಿಕೊಂಡು ಪರಸ್ಪರ ಸ್ಪರ್ಧಾತ್ಮಕವಾಗಿ ಕೆಲಸ ಮಾಡಿದರೆ ಸೊಸೈಟಿಗಳು ಬೆಳೆಯುತ್ತವೆ. ಬೆಳೆಯುತ್ತಿರುವ ನಗರಗಳಲ್ಲಿ ಸಹಕಾರಿ ರಂಗಕ್ಕೆ ಗ್ರಾಹಕರೇ ಶ್ರೀರಕ್ಷೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.

ಉದ್ಯಾವರ ಬಸ್ಸು ನಿಲ್ದಾಣ ಬಳಿಯ ಶ್ರೀದುರ್ಗಾ ಸಂಕೀರ್ಣ 1 ನೆ ಮಹಡಿಯಲ್ಲಿ ಉಡುಪಿ ಕೆಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ.  ಇದರ ದ್ವಿತೀಯ ಶಾಖೆ ಉದ್ಯಾವರದಲ್ಲಿ ಉದ್ಘಾಟಿಸಿ ಅವರು ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉದ್ಯಾವರ ಸೌಹಾರ್ದತೆಯ ಗ್ರಾಮ. ಸೌಹಾರ್ದತೆಯ ಸಂಕೇತವಾಗಿ ಸರ್ವ ಧರ್ಮೀಯರು ಜೊತೆಯಾಗಿ ಈ ಸೊಸೈಟಿಯನ್ನು ಉದ್ಘಾಟನೆ ಮಾಡಿದ್ದೇವೆ. ದೇವಸ್ಥಾನ ಮತ್ತು ನಮಾಜ್ ಮಾಡುವ ಪವಿತ್ರ ಸ್ಥಳದ ಬಳಿ ನೂತನ ಶಾಖೆ ಉದ್ಘಾಟನೆಗೊಂಡಿದೆ. ಬಹಳಷ್ಟು ವರ್ಷಗಳ ಹಿಂದೆಯೇ ಶಿರ್ವದಿಂದ ಮಲ್ಪೆ ವರೆಗೆ ಟೂರಿಸಂ ಕಾರಿಡಾರ್ ಆಗುವ ಬಗ್ಗೆ ಸರ್ಕಾರದೊಂದಿಗೆ ಮಾತುಕತೆ ಕೂಡ ಆರಂಭವಾಗಿದೆ. ದೇವರ ಆಶೀರ್ವಾದದೊಂದಿಗೆ ಇನ್ನಷ್ಟು ಶಾಖೆಗಳು ಆರಂಭವಾಗಲಿ ಎಂದರು.

ನೂತನ ಶಾಖೆ ಆಶೀರ್ವಚನ ಮಾಡಿದ ಮದರ್ ಸಾರೋಸ್ ದೇವಾಲಯ ಉಡುಪಿ ಯ ಪ್ರಧಾನ ಧರ್ಮಗುರುಗಳಾದ ಫಾ. ವಲೇರಿಯನ್ ಮೆಂಡೋನ್ಸಾ ಮಾತನಾಡಿ, ಕೆಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಉತ್ತಮ ನಾಯಕತ್ವ ಕಾಣುತ್ತಿದೆ. ಇದರಿಂದ ಗ್ರಾಹಕರ ವಿಶ್ವಾಸ ಗಳಿಸಲು ಸಾಧ್ಯವಾಗಿದೆ. ಗ್ರಾಹಕರ ಪ್ರಗತಿಯಲ್ಲಿ ಈ ಸೊಸೈಟಿ ಕಾರಣವಾಗಲಿ ಎಂದು ಶುಭ ಹಾರೈಸಿದರು.

ಹಾಲಿಮಾ ಸಾಬ್ಜು ಆಡಿಟೋರಿಯಂ ಮಾಲಕರಾದ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ಬ್ಯಾಂಕಿಂಗ್ ವಿಭಾಗವನ್ನು ಉದ್ಘಾಟಿಸಿ, ಅಭಿವೃದ್ಧಿ ಹೊಂದುತ್ತಿರುವ ಉದ್ಯಾವರದಲ್ಲಿ ಹೊಸ ಶಾಖೆಯ ಸ್ಥಾಪನೆಯ  ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 
ಗಣಕೀಕರಣದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಸದಸ್ಯ ಲಾರೆನ್ಸ್ ಡೆಸಾ ನಡೆಸಿದರು.

ಸಭಾ ಕಾರ್ಯಕ್ರಮದಲ್ಲಿ ನೂತನ ಉಳಿತಾಯ ಖಾತೆ ಮತ್ತು ನಿರಖು ಠೇವಣಿ ಖಾತೆದಾರರಿಗೆ ಸರ್ಟಿಫಿಕೇಟ್ ವಿತರಿಸಲಾಯಿತು.
ಸಹಕಾರ ಸಂಘಗಳ ಉಪನಿಬಂಧಕರಾದ ಪ್ರವೀಣ ಬಿ ನಾಯಕ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಗಂಧಿ ಶೇಖರ್, ಗ್ರಾಮ ಪಂಚಾಯತ್ ಸದಸ್ಯ ಲಾರೆನ್ಸ್ ಡೇಸಾ ನೂತನ ಶಾಖೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಿಯಾಜ್ ಪಳ್ಳಿ ಮತ್ತು ಕಟ್ಟಡದ ಮಾಲಕರಾದ ಸುರೇಂದ್ರ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಕೆಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಫೆಲಿಕ್ಸ್ ಪಿಂಟೊ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫ್ರಾಂಕ್ ಪೀಟರ್ ಪಿ ಕಾರ್ಡೋಜ ಉಡುಪಿ ಕೆಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೆಳೆದ ಹಾದಿಯ ಬಗ್ಗೆ ವರದಿ ಮಂಡಿಸಿದರು. ಉಪಾಧ್ಯಕ್ಷ ಜೇಮ್ಸ್ ಡಿಸೋಜ ಧನ್ಯವಾದ ಸಮರ್ಪಿಸಿದರೆ, ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.

ಆಡಳಿತ ಮಂಡಳಿಯ ನಿರ್ದೇಶಕರಾದ  ಇಗ್ನೇಶಿಯಸ್ ಮೋನಿಸ್ ಮೂಡುಬೆಳ್ಳೆ, ಫ್ರಾಂಕ್ಲಿನ್ ಮಿನೇಜಸ್ ಕಲ್ಮಾಡಿ, ಪರ್ಸಿ ಜೆ ಡಿಸೋಜ  ಕಲ್ಯಾಣಪುರ, ಆರ್ಚಿಬಾಲ್ಡ್ ಎಸ್ ಡಿಸೋಜ ತೊಟ್ಟಂ, ಅಲೋಶಿಯಸ್ ಡಿ ಅಲ್ಮೇಡ ಮಣಿಪಾಲ, ಲೂಯಿಸ್ ಲೋಬೊ ಆದಿ ಉಡುಪಿ, ಕೆವಿನ್ ಪೆರೇರಾ ಉದ್ಯಾವರ, ಹಿಲ್ಡ ಸಲ್ದಾನ ಉದ್ಯಾವರ, ಜೆಸಿಂತಾ ಡಿಸೋಜ ಮೂಡುಬೆಳ್ಳೆ ಮತ್ತು ಸುನೀಲ್ ಡಿಸೋಜ, ಸಂದೀಪ್ ಫೆರ್ನಾಂಡಿಸ್, ಜಾನೆಟ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ನಿರಖು ಠೇವಣಿ ಇಡುವವರಿಗೆ ವಿಶೇಷ ವಿನಾಯಿತಿ ಇದೆ. 15 ದಿನ ಮೇಲ್ಪಟ್ಟು 45 ದಿನಗಳವರೆಗೆ 5.50%, 46 ದಿನ ಮೇಲ್ಪಟ್ಟು 90 ದಿನಗಳವರೆಗೆ 7%, 91 ದಿನಗಳಿಂದ 364 ದಿನಗಳವರೆಗೆ 7.5% , 1 ವರ್ಷದ ಅವಧಿ 9%, 1 ವರ್ಷಕ್ಕೆ ಮೇಲ್ಪಟ್ಟು 3 ವರ್ಷದವರೆಗೆ 8.50%, ಸಮೃದ್ಧಿ ನಗದು ಪತ್ರ (1 ವರ್ಷದ ಅವಧಿ) 9.30% ಮತ್ತು ಹಿರಿಯ ನಾಗರಿಕ ಸದಸ್ಯರಿಗೆ 0.50% ಹೆಚ್ಚುವರಿ ಬಡ್ಡಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!