ಆಗಸ್ಟ್ 25 ಪಡುಬಿದ್ರೆ ಯುವ ಬಂಟರ ಸಂಘ ಉದ್ಘಾಟನೆ

ಪಡುಬಿದ್ರಿ: ಬಂಟರ ಯಾನೆ ನಾಡವರ ಸಂಘದ ಪಡುಬಿದ್ರಿಯಲ್ಲಿ ನೂತನವಾಗಿ ಆರಂಭಿಸಿರುವ ಯುವ ಬಂಟರ ವಿಭಾಗದ ಉದ್ಘಾಟನೆ ಅ. -25 ರಂದು ಬೆಳಗ್ಗೆ 10.30ಕ್ಕೆ ಪಡುಬಿದ್ರಿಯ ಬಂಟರ ಭವನದಲ್ಲಿ ಜರುಗಲಿದೆ. ಮಂಗಳೂರು ಉತ್ತರ ಶಾಸಕ ಡಾ| ವೈ. ಭರತ್‌ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಯುವ ಬಂಟರ ವಿಭಾಗದ ಅಧ್ಯಕ್ಷ ನವೀನ್ ಎನ್. ಶೆಟ್ಟಿ ಅವರಿಗೆ ಹೊಸ ಕಾರ್ಯಭಾರವನ್ನು ವಹಿಸುವರು.

ಯುವ ವಿಭಾಗದ ಅಧ್ಯಕ್ಷ ನವೀನ್ ಎನ್. ಶೆಟ್ಟಿ ಅಧ್ಯಕ್ಷತೆ ವಹಿಸುವರು. ಪಡುಬಿದ್ರಿ ಬಂಟರ ಸಂಘ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಅವರು ಯುವ ವಿಭಾಗದ ಲಾಂಛನವನ್ನ ಅನಾವರಣಗೊಳಿಸಲಿದ್ದಾರೆ .

ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ ಉದ್ಯಮಿ, ಸಮಾಜ ಸೇವಕ ಸುರೇಶ್ ಶೆಟ್ಟಿ ಗುರ್ಮೆ, ಮುನಿಯಾಲು ಉದಯ ಕುಮಾರ್ ಶೆಟ್ಟಿ ,ಬಂಟ್ಸ್ ವೆಕ್ಟೇರ್‌ಟ್ರಸ್ಟ್ ಅಧ್ಯಕ್ಷ ವೈ. ಶಶಿಧರ ಶೆಟ್ಟಿ ಸಿರಿಮುಡಿ, ದತ್ತಿ ನಿಧಿಯ ಗೌರವಾಧ್ಯಕ್ಷ ಸಾಂತೂರು ಭಾಸ್ಕರ ಶೆಟ್ಟಿ ಭಾಗವಹಿಸುವರು, ಭೂಸೇನೆ ಲೆಫ್ಟಿನೆಂಟ್ ಕರ್ನಲ್ ಪಡುಬಿದ್ರಿ ಕೆರಮ ಮೇಲೆ ಪವನ್ ಕುಮಾರ್ ಶೆಟ್ಟಿ ಅವರನ್ನು ಸಮ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ .

Leave a Reply

Your email address will not be published. Required fields are marked *

error: Content is protected !!