ಪ್ರಾವೇಟ್ ಮೆಡಿಕಲ್ ಕಾಲೇಜಿನವ್ರು ಕೊಟ್ರಂತೆ ಕೋಟಿ ಕೋಟಿ ಲಂಚ!

( ಎಕ್ಸ್‌ಕ್ಲೂಸಿವ್ ರಿಪೋರ್ಟ್ ಎಸ್ಸೆನ್ ಕುಂಜಾಲ್‌ರಿಂದ)


‘ಶಿರಾಡಿ ಘಾಟಿ ಮಿತ್ತರಂಡ ಹಾಸನಡ್ ಉಂಡುಯೇ. ಸಂಪಾಜೆಡ್ದ್ ಮಿತ್ ಪೊಂಡ ಮಡಿಕೇರಿಡ್ಲಾ ಉಂಡುಗೇ. ಶಿರೂರ್ ಕರೀದ್ ಕಾರವಾರ್‌ಗ್ ಪೊಂಡಾ ಅಲ್ಪಲಾ ಮಲ್ದೆರ್‌ಗೆ. ಚಾರ್ಮಾಡಿ -ಆಗುಂಬೆ ಹುಲಿಕಲ್ ಮಿತರ್‍ದ್ ಪೊಂಡಲಾ ಅಲ್ಪಲಾ ಶಿಮೊಗ್ಗೆಡ್ಲಾ ಉಂಡತ್ತಯೇ. ಎಂಕ್ಲೆಗ್ ಮಾತ್ರಾ ಇಜ್ಜಿ. ಅವು ದಾಯೇಗ್ಯೇ ಇಂಚಾಂಡ್. ನಳಿನಣ್ಣೆರ್ ದಯೇಗ್ ಮಣೀಪಂದೇ ಕುಲ್ದೆರ್. ಎಂಕ್ಲ್ ಮಾತೆರ್‍ಲಾ ಕಮಲೊಗೇ ಒತ್ತಂಡ್ಲಾ ಕಟೀಲೆರ್ ದಾನಿ ಇಂಚ. ಅರೆಗ್ ದಾನೆ ಕಣ್ ತೋಜುಜ್ಜಿಯಾ? ಇಜ್ಜಂಡಾ ಏಳ್ ಪ್ರಾವೇಟ್ ಕಾಲೇಜ್‌ದಗ್ಲು ಉಲ್ಲಾ ಅತ್ತ್‌ಯೇ.. ಅಕ್ಲೇನ ದುಡ್‌ಗ್ ಬಾಯಿ ಮುಚ್‌ದ್ ಕುಲ್ದಿಪ್ಪೆರೆಗ್‌ಲಾ ಯಾವ್. ತೂಕಾ ನನ ಆಂಡಲಾ ಮಲ್ಪೆರೆಗ್ ಯಾವ್’ ಮಂಗಳೂರು-ಉಡುಪಿಯ ಜನರ ಮಾತುಗಳಿವು. ಅವರದ್ದೇ ಆದ ಧಾಟಿಯಲ್ಲಿ, ತುಳು ಆಡುಭಾಷೆಯಲ್ಲಿ ಜನ ಗುಣಗುಣಿಸುತ್ತಿರುವುದು ಹೀಗೆ.


ಯಸ್. ಸಂದೇಹಗಳೇ ಇಲ್ಲ. ಜನ ಹೀಗೆ ಹರಟುವುದರಲ್ಲಿ ಅರ್ಥವಿದೆ. ಅದರಲ್ಲಿ ಅವರ ವೇದನೆಯಿದೆ. ನಂಬಿಕೆಗೆ ಮೋಸವಾಗಿದೆ ಎಂಬ ಆತಂಕವಿದೆ. ನಂಬಿಸಿ ಓಟು ಕಿತ್ತವರು ಸ್ವಂತ ಲಾಭಕ್ಕಾಗಿ ಹಪಹಪಿಸುತ್ತಿದ್ದಾರಾ ಎಂಬ ಭೀತಿಯಿದೆ. ಹಣದ ಮರ್ಜಿಗೆ ಒಳಪಟ್ಟು ಜನಸೇವೆಯನ್ನು ಮರೆತಿರುವ ಕೋಪವಿದೆ. ಸರ್ಕಾರಿ ಮೆಡಿಕಲ್ ಕಾಲೇಜು ಘಟ್ಟದ ಮೇಲಿನ ಹಾಸನದಲ್ಲಿದೆ. ಮಡಿಕೇರಿಯಲ್ಲಿದೆ. ಶಿಮೊಗ್ಗೆಯಲ್ಲಿದೆ. ಕಾರವಾರದಲ್ಲಿದೆ. ಸುತ್ತಲೂ ಅವರವರು ಇನ್‌ಫ್ಲೂಯೆನ್ಸ್ ಮಾಡಿ ಮಾಡಿಸಿಕೊಂಡಿದ್ದಾರೆ. ನಮ್ಮೂರಿಗೆ ಇದೆಂಥಾ ಗ್ರಹಚಾರ? ಸೌತ್ ಕೆನರಾಕ್ಕೆ ಯಾಕಿದು ಬರ್‍ತಿಲ್ಲ? ಇದು ಬರದಂತಾಗಿಸಲು ನೋಟಿನ ಕಟ್ಟು ಎಸೆಯುತ್ತಿರುವವರ್‍ಯಾರು?


ನಿಮಗೆಲ್ಲಾ ಗೊತ್ತಿಲ್ಲದೇನಲ್ಲ. ಯು.ಟಿ. ಖಾದರ್ ಹೆಲ್ತ್ ಮಿನಿಸ್ಟರಾಗಿದ್ದಾಗ ಅವರಿಗೆ ಕೋಟಿ ಕೋಟಿ ಆಮಿಷ ತೋರಿಸಿ, ಬಾಯಿ ಮುಚ್ಚಿಸಿ ಕೈಕಾಲುಗಳನ್ನ ಕಟ್ಟಿ ಹಾಕಿದವರು ಯಾರಂತ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ; ಅವರ ಸ್ವೀಟ್ ನೇಮ್ಸ್! ಯೆನಪೋಯ, ಫಾದರ್ ಮುಲ್ಲರ್‍ಸ್, ಎಜೆ, ಕೆಎಂಸಿ, ನಿಟ್ಟೆಯವರ ಕ್ಷೇಮ, ಕಣಚ್ಚೂರು, ಶ್ರೀನಿವಾಸ. ಇದು ಮೆಡಿಕಲ್ ಕಾಲೇಜಿನ ಹೆಸರುಗಳು. ಈ ಸಪ್ತ ವರ್ಣೀಯರ ಹಣದ ಥೈಲಿ ಮುಂದೆ ಖಾದರ್ ‘ಇಂಗು ತಿಂದ ಮಂಗ’ನಂತೆ ಮಂಕಾಗಿದ್ದಂತೂ ಸುಳ್ಳೇನಲ್ಲ. ಹಾಗಂತ ನಮ್ಮ ಗಡಿಯಾಚೆಗಿನ ಊರುಗಳ ಸ್ಥಿತಿ ಹ್ಯಾಗಿದೆ ನೋಡಿ!


ಹಾಸನ, ಮಡಿಕೇರಿ, ಕಾರವಾರ, ಶಿವಮೊಗ್ಗ, ಗದಗ, ಬೀದರ, ಕಲಬುರಗಿ, ಮಂಡ್ಯ, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ, ರಾಯಚೂರು, ಕೊಪ್ಪಳ ಇಷ್ಟೇ ಅಲ್ಲ; ತೀರಾ ಹಿಂದುಳಿದ ಜಿಲ್ಲೆಯಾದ ಚಾಮರಾಜ ನಗರದಲ್ಲೂ ಸರಕಾರಿ ಮೆಡಿಕಲ್ ಕಾಲೇಜಿದೆ. ಅಂದರೆ ನಮ್ಮೂರಿನ ಶಾಸಕ, ಸಂಸದರಿಗೆ ನಾಚಿಕೆ ಆಗಬೇಕಲ್ಲವೇ? ಆ ಸುಧಾಕರ.. ಮೊನ್ನೆ ಮೊನ್ನೆ ಬಿಜೆಪಿಗೆ ಬಂದವ ತನ್ನೂರಾದ ಚಿಕ್ಕಬಳ್ಳಾಪುರಕ್ಕೆ ಸರಕಾರಿ ಮೆಡಿಕಲ್ ಕಾಲೇಜು ಮಾಡಿಸಿಕೊಂಡೇ ಬಿಟ್ಟ ಅಂದರೆ ‘ಬುದ್ಧಿವಂತರ ಜಿಲ್ಲೆ’ಯ ಜನ ಅಂತ ‘ಕಾಲರ್ ಅಪ್’ ಮಾಡಿ ಹೇಳಿಕೊಳ್ಳುವ ನಮ್ಮ ಬಗ್ಗೆ ನಮಗೇ ಅಸಹ್ಯ ಅನ್ನಿಸುವುದಿಲ್ಲವೇ?


ನಿಮಗೆ ಗೊತ್ತಿರಲೇಬೇಕಲ್ಲವೇ? ನಮ್ಮೂರಿಗೆ ಏನೂ ಮಾಡದ್ದಕ್ಕೆ ಕಾಂಗ್ರೆಸ್ಸನ್ನು ಬುದ್ಧಿವಂತ ಜನ ಗಟಾರಕ್ಕೆ ತಳ್ಳಿದ್ದಾರೆ. ಆ ಪಾರ್ಟಿಯಂತೂ ಮಕಾಡೆ ಮಲಗಿದೆ. ಮತ್ತೆ ಎದ್ದೇಳುವ ಸ್ಥಿತಿಯಲ್ಲಿಲ್ಲ, ಖಾದರ್‌ರ ಪಾರ್ಟಿ. ‘ಮಾಡಿದ್ದುಣ್ಣೋ ಮಹರಾಯ’ ಎಂಬಂತೆ ‘ಶವಾಸನ’ ಮಾಡುವುದೇ ಅವರಿಗಿರುವ ದಾರಿ. ಈಗ ನೋಡಿ; ದ.ಕ-ಉಡುಪಿಯವರು ಒಂದರ್ಥದಲ್ಲಿ ಲಕ್ಕೀ ಪರ್ಸನ್ಸ್. ಸೆಂಟ್ರಲಲ್ಲೂ ಬಿಜೆಪಿ. ಸ್ಟೇಟಲ್ಲೂ ಕಮಲ. ಕಾರ್ಪೋರೇಶನ್ನು, ಮುನ್ಸಿಪಾಲ್ಟಿಲೂ ಭಾಜಪ. ಜಿಲ್ಲಾ ಪಂಚಾಯ್ತಿಯಲ್ಲೂ ಮೋದಿದ್ದೇ ಪಾರ್ಟಿ. ಮತ್ತೇನು ಪ್ರಾಬ್ಲಮ್! ಮಂಗಳೂರಿಗೊಂದು ಸರಕಾರಿ ಮೆಡಿಕಲ್ ಕಾಲೇಜ್ ಮಾಡಲು? ಸಿಎಂ ಯುಡಿಯೂರಪ್ಪಾಜೀನ ಒಪ್ಪಿಸಲು ಶೋಭಕ್ಕ ಇದ್ದಾರೆ. ಸರಕಾರದಿಂದ ಬೇಕಾದ್ದನ್ನೆಲ್ಲಾ ಮಾಡಿಸಲು ಕೋಟ ಶ್ರೀನಿವಾಸ ಪೂಜಾರಿ ಇದ್ದಾರೆ. ಪಿಎಂ ಮೋದೀನ ಒಪ್ಪಿಸಲು ಕಟೀಲಣ್ಣ ಇದ್ದಾರೆ. ಮತ್ಯಾಕೆ ಲೇಟು?


ನಿಮಗೆ ಗೊತ್ತಿರಬಹುದು; ಎಂಬಿಬಿಎಸ್ ಓದುವವರಿಗಾಗಿ ಇಲ್ಲೇ ಸರ್ಕಾರಿ ಮೆಡಿಕಲ್ ಕಾಲೇಜು ಮಾಡಲು ಸ್ಥಳದ ಅಭಾವದಂತೂ ಇಲ್ಲ. ರೈಲ್ವೇ ಸ್ಟೇಶನ್ನಿನ ಈ ಕಡೆ ‘ಹೋಟೇಲ್ ಆಮಂತ್ರಣ’ ನೀವು ನೋಡಿದ್ದೀರಾ. ಅದರ ಹಿಂಭಾಗದ ಜಾಗ ಪೂರ್ತಿ ವೆನ್‌ಲಾಕಿದ್ದು. ಇಲ್ಲಿಗೆ ಹಗಲಲ್ಲಿ ಹೋದರೆ ಗಿಡ-ಮರಗಳ ಪೊದರು ಕಾಣಿಸುತ್ತದೆ. ಕತ್ತಲಾದ ಮೇಲೆ ಹೋದರೆ ಕಾಲ್ಗೆಜ್ಜೆ – ಕೈಬಳೆ ಸದ್ದು ಕೇಳಿಬರುತ್ತದೆ. ಈ ಬಲ್ಲೆಯಲ್ಲಿ ಹುಡ್ಗೀರು ಅದ್ಯಾರೊಟ್ಟಿಗೆ ಅದೇನ್ ಮಾಡ್ತಾರೋ? ದೇವರಿಗೇ ಗೊತ್ತು.
ಇಷ್ಟು ಮಾತ್ರವಲ್ಲ; ವೆನ್ಲಾಕ್ ಈಗ ‘ಕೋವಿಡ್ ನೈಂಟೀನ್’ ಹಾಸ್ಪಿಟಲ್ ಆಗಿದೆ. ನಾಡಿದ್ದು ಐದಾರು ತಿಂಗಳಲ್ಲಿ ಕೊರೋನಾ ರೋಗಿಗಳು ಹೊರಟ್ಹೊದ್ರೇ ಆಸ್ಪತ್ರೆ ಖಾಲಿ ಖಾಲಿ ! ಆಗ್ಲಾದರೂ ಸರಕಾರಿ ಮೆಡಿಕಲ್ ಕಾಲೇಜ್ ಮಾಡಬಹುದು. ಇದೂ ಬೇಡ ಅಂತ ಬಿಟ್ಟುಬಿಡೋಣ. ಮೂಡುಶೆಡ್ಡೆಯಲ್ಲಿ ಟೀಬಿ ಹಾಸ್ಪಟಲ್ಲಿನಾಚೆ ಇಪ್ಪತ್ತು ಎಕರೆ ಸ್ಥಳ ಹಾಗೇ ಬಿದ್ದುಕೊಂಡಿದೆಯಲ್ಲಾ.. ಅದ್ರಲ್ಲಾದ್ರೂ ಮಾಡಬಹುದು.


ಹೌದಲ್ಲಾ… ಮನಸ್ಸಿದ್ರೆ ಮಾರ್ಗ ಉಂಟು ಅಂತಾರಲ್ವಾ. ನಮ್ ಡಿಸ್ಟ್ರಿಕ್ಟ್ ಮಿನಿಸ್ಟರ್ ಕೋಟ ಶ್ರೀನಿವಾಸ ಪೂಜಾರಿಯವರು ‘ಮಿಸ್ಟರ್ ಕ್ಲೀನ್’ ಅಂತ ಹಿರಿಮೆ ಇದ್ದವರು. ಕೊರೋನಾಕ್ಕೆ ‘ಟಾಸ್ಕ್ ಫೋರ್ಸ್’ ಮಾಡಿ ಸಕ್ಸಸಾದವರು. ‘ನೀವ್ ಸರಕಾರಿ ಮೆಡಿಕಲ್ ಕಾಲೇಜ್ ಮಾಡ್ಸಿ ಕೊಡ್ತೀರಿ’ ಅಂತ ಜನ ನಂಬ್ಕೊಂಡಿದ್ದಾರೆ.
ಮೋದಿಯಂತೂ ರಿಪೀಟಾಗಿ ‘ಫ್ರೀ ಎಜ್ಯುಕೇಶನ್’ ಬಗ್ಗೆ ಮಾತಾಡ್ತಿದ್ದಾರೆ. ಪ್ರಾವೇಟ್ ಕಾಲೇಜಿಗೆ ಎಂಬಿಬಿಎಸ್ ಓದಿಸ್ಲಿಕ್ಕೆ ಏನಿಲ್ಲ ಅಂದ್ರೂ ಒಂದರಿಂದ ಒಂದೂವರೆ ಕೋಟಿ ರೂಪಾಯಿ ಬೇಕಾಗುತ್ತದೆ. ಇಷ್ಟೊಂದು ದುಡ್ಡು ದ.ಕ-ಉಡುಪಿ ಜನರಲ್ಲಿ ಎಲ್ಲಿಂದ ಬರಬೇಕು? ನೀವೇ ಹೇಳಿ. ಯಾರದ್ದಾದ್ರೂ ತಲೆ ಒಡೆದು ಮಾಡಿದ ದುಡ್ಡಿದ್ರೆ ಓಕೆ. ಆ ಬುದ್ಧಿ ಇಲ್ಲಿನವರಿಗಿಲ್ಲ.


ಲಾಸ್ಟ್ ಸಿಪ್!….ಲಾಸ್ಟ್‌ಗೆ ಒಂದೇ ಒಂದು ಮಾತು. ಕರಾವಳಿ ಜನರ ಪರವಾಗಿ. ‘ನಳೀನಣ್ಣಾ.. ನಿಮ್ಮನೇ ನೀವು ಕೇಳಿಕೊಳ್ಳಿ. ಮಂಗಳೂರು-ಉಡುಪಿ ಜನರಿಗಾಗಿ ಆಟ್‌ಲೀಸ್ಟ್ ಒಂದು ಗವರ್ನ್‌ಮೆಂಟ್ ಮೆಡಿಕಲ್ ಕಾಲೇಜು ಬೇಕಾ? ಬೇಡವಾ? ಯು.ಟಿ. ಖಾದರ್‌ಗೆ ಮಲ-ಮೂತ್ರ ಎಲ್ಲಾ ತಿನ್ನಿಸಿದ್ದರಂತೆ. ಕೋಟ್ಯಾಂತರ ಲೂಟಿ ಹೊಡೆದಿದ್ದಾನಂತೆ. ಕಣಚ್ಚೂರು ಕಾಲೇಜಲ್ಲಿ ಅವರ ಪಾರ್ಟನರ್ ಶಿಪ್ ಇದೆಯಂತೆ. ಖಾದರ್ ರಿಮೋಟ್ ಕಂಟ್ರೋಲ್‌ನಂತಿದ್ದ ಇಫ್ತಿಕರ್ ನೂರಾರು ಬಸ್ಸುಗಳ ಮೇಲೆ ಒಡೆತನ ಸಾಧಿಸಿದ್ದು ಇದೇ ಲಂಚದಿಂದಂತೆ. ಟೋಟಲ್ಲೀ ಪ್ರಾವೇಟು ಮೆಡಿಕಲ್ ಕಾಲೇಜಿನವರು ಕೊಡುವುದನ್ನು ಇನ್ನೂ ಸ್ಟಾಪ್ ಮಾಡಿಲ್ಲ. ಆವತ್ತು ಖಾದರ್‌ಗೆ.  ಇವತ್ತು ಕಟೀಲ್‌ಗೆ.  ಮತೇಗೆ ಗವರ್ನ್‌ಮೆಂಟ್ ಮೆಡಿಕಲ್ ಕಾಲೇಜು ಎದ್ದೇಳುವುದು? ನಮ್ಮವರೇ ಅಡ್ಡ ಕಾಲಿಡ್ತಿದ್ದಾರೆ.  ಇಂಥಾ ಏಳೂ ಕಾಲೇಜಿನವರ ಬಗ್ಗೆ ಬರೆದರೆ ಅದೊಂದು ಮೆಗಾ ಸೀರಿಯಲ್. ಅದನ್ನ ಒಂದೊಂದಾಗಿ ನಿಮ್ಮ ಮುಂದಿಡಲಿದ್ದೇನೆ. ನಳೀನಣ್ಣಾ.. ಈಗ ನಿಮ್ ಕತೆ ಏನು? ನೀವ್ಯಾವಾಗ ಮನಸ್ಸು ಮಾಡ್ತೀರಿ? ಈ ಸರಕಾರಿ ವೈದ್ಯಕೀಯ ಕಾಲೇಜು ಯಾವಾಗ ಮಾಡಿಸ್ತೀರಿ? ಇದಕ್ಕೂ ಮನಸ್ಸಿಲ್ವಾ.. ಇನ್ನು ನಾಲ್ಕು ವರ್ಷ ವೈಟ್ ಮಾಡ್ತೀರಾ? ಜನರೇ ಬುದ್ಧಿ ಕಲಿಸ್ತಾರೆ. ಚಾಯ್ಸ್ ನಿಮ್ಮದು!


‘ಸೋನಿಯಾ ಅಜ್ಜಿಯ ಬೆನ್ ಮೂಳೆ ಮುರ್‍ದಿದೆಯಂತೆ..
ಅಯ್ಯೋ ಪಾಪ.. ಭಾರತವನ್ನು ಸುದೀರ್ಘ ಆಳಿದ ಕಾಂಗ್ರೆಸ್ ಅಧಿನಾಯಕಿಯ ಬೆನ್ ಮೂಳೆ ಮೂರ್‍ದೇ ಹೋಗಿದ್ಯಂತೆ. ಈಗ ಕಾಂಗ್ರೆಸ್ ಪಾರ್ಟಿಯ ಅಧ್ಯಕ್ಷ ಕಿರೀಟ ತಲೆ ಮೇಲಿಟ್ಟುಕೊಂಡ ಈ ಮುದುಕಿ, ಅದನ್ನ ಯಾರ ತಲೆಗಿಡಬೇಕು? ಬೆಪ್ಪು ತಕ್ಕಡಿಯಂತಿರುವ ರಾಹುಲ್ ತಲೆಗಿಡುದಾ? ಬ್ಯೂಟಿ ಕ್ವೀನ್ ಥರಾ ಫೋಸ್ ಕೊಡ್ಲಿಕ್ಕಷ್ಟೇ ಫಿಟ್ ಆಗಿರುವ ಪ್ರಿಯಾಂಕಾಳ ತಲೆ ಮೇಲಿಡುದಾ? ಕಾಂಗ್ರೆಸಲ್ಲಿ ಯಾವಾನಾದರೂ ಪೆದ್ದು ಗುಂಡ ಇದ್ರೆ ಅವನಿಗೆ ಟೋಪಿ ಥರ ಇಟ್ ಬಿಡುದಾ? ಹೌದಪ್ಪಾ.. ಟೋಟಲ್ಲೀ ಕನ್‌ಪ್ಯೂಸ್! ಸಾಯುವ ಕಾಲಕ್ಕೆ ಈ ಟೆನ್ಶನ್ ಬೇಕಿತ್ತಾ? ಅದಕ್ಕೊಂದು ಸೊಲ್ಯೂಶನ್ ಮುಂದಿನ ಸಂಚಿಕೆಯಲ್ಲಿ ಇದೇ ಅಂಕಣದಲ್ಲಿರುತ್ತೇ. ವೈಟ್ ಆಂಡ್ ಸೀ….

-ಎಸ್ಸೆನ್ ಕುಂಜಾಲ್
ನಿಮ್ಮ ಅನಿಸಿಕೆ, ಅಭಿಪ್ರಾಯಗಳಿದ್ದಲ್ಲಿ ಇ-ಮೇಲ್ [email protected]ಗೆ ಕಳುಹಿಸಬಹುದು ಅಥವಾ ದೂರವಾಣಿ 9845070166 ಗೆ ಕರೆ ಮಾಡಬಹುದು.

Leave a Reply

Your email address will not be published. Required fields are marked *

error: Content is protected !!