ಆಗಸ್ಟ್ .9 ರಂದು ತೆರೆ ಮೇಲೆ ಬರಲಿದೆ “ಬೆಲ್ಚಪ್ಪ”

ಮಂಗಳೂರು: ಸದ್ಯ ಕೋಸ್ಟಲ್‌ವುಡ್‌ನಲ್ಲಿ  ಟೈಟಲ್ ಮೂಲಕ ಸದ್ದು ಮಾಡುತ್ತಿರುವ “ಬೆಲ್ಚಪ್ಪ”  ಇದೀಗ ಬಿಡುಗಡೆಗೆ ರೆಡಿ. ರಜನೀಶ್ ದೇವಾಡಿಗ ನಿರ್ದೇಶನದ ಬೆಲ್ಚಪ್ಪ ಸಿನೆಮಾ  ಆಗಸ್ಟ್ ೯ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ. ಜಯದುರ್ಗಾ ಪ್ರೋಡಕ್ಷನ್ ಬ್ಯಾನರ್‌ನಡಿಯಲ್ಲಿ ಸಿದ್ಧವಾಗುತ್ತಿರುವ ಸಿನೆಮಾ. ಇದು ಸಂಪೂರ್ಣ ಕಾಮಿಡಿ ಚಿತ್ರವಾಗಿದ್ದು, ಪ್ರೇಕ್ಷಕರು ನಗದೇ ಇರಲು ಸಾಧ್ಯವಿಲ್ಲ.

ಅರವಿಂದ ಬೋಳಾರ್ ಪ್ರಮುಖ ಪಾತ್ರದಲ್ಲಿರುವ ಸಿನೆಮಾದಲ್ಲಿ ಕಾಮಿಡಿಗಳೇನು ಬರವಿಲ್ಲ. ಎಲ್ಲ ವರ್ಗದ ಪ್ರೇಕ್ಷಕರನ್ನು ಗುರಿಯಾಗಿರಿಸಿಕೊಂಡು  ಮಾಡಿದ ಸಿನೆಮಾವಿದು.  ಹೀಗಾಗಿ ಮಕ್ಕಳಿಂದ ಹಿರಿಯರವರೆಗೂ ಒಪ್ಪುವಂತಹ ಸಿನೆಮಾ ಇದಾಗಲಿದೆ ಎನ್ನುತ್ತಾರೆ ರಜನೀಶ್.

ಹಾಲಿವುಡ್‌ನಲ್ಲಿ  ಕೆಲಸ ಮಾಡಿದ  ಲಕ್ಷ್ಮೀಶ  ಶೆಟ್ಟಿ  ಅವರು ಕ್ಯಾಮರಾದಲ್ಲಿ ಕೈಜೋಡಿಸಿದ್ದಾರೆ. ಸ್ಟಡಿ  ಸೈಕಲ್   ಮತ್ತು ಸ್ಟಡಿ ಕ್ಯಾಮರಾ  ಬಳಸಿ  ಚಿತ್ರೀಕರಣ ಮಾಡಲಾಗಿದೆ. ಒಂದು ಫೈಟ್  ಸೀನ್  ಮತ್ತು ನಾಲ್ಕು  ಹಾಡುಗಳಿರುವ ಕಾಮಿಡಿ ಚಿತ್ರದಲ್ಲಿ ನಾಯಕಿಯಾಗಿ  ಯಶಸ್ವಿ  ದೇವಾಡಿಗ ನಟಿಸಿದ್ದಾರೆ. ಉಮೇಶ್ ಮಿಜಾರು, ದೀಪಕ್ ರೈ ಪಾಣಾಜೆ, ಯಜ್ಞೇಶ್, ಸುಕನ್ಯಾ ಪ್ರಮುಖ ಪಾತ್ರದಲ್ಲಿದ್ದಾರೆ

Leave a Reply

Your email address will not be published. Required fields are marked *

error: Content is protected !!