ಕೊಂಕಣಿ ಸಿನಿಮಾ ನಿರ್ಮಿಲ್ಲೆಂ ನಿರ್ಮೋಣೆಂ ಆಡಿಯೋ, ಟ್ರೇಲರ್ ಬಿಡುಗಡೆ

ಮಂಗಳೂರು: ಅತಿ ನಿರೀಕ್ಷೆಯ ಕೊಂಕಣಿ ಸಿನಿಮಾ ನಿರ್ಮಿಲ್ಲೆಂ ನಿರ್ಮೋಣೆಂನ ಆಡಿಯೋ ಮತ್ತು ಟ್ರೇಲರ್ ಬಿಡುಗಡೆ ಕಾರ್ಯಕ್ರಮವು ಬೆಂದೂರ್‌ವೆಲ್‌ನ ಸೈಂಟ್ ಸೆಬಾಸ್ಟಿಯನ್ ಮಿನಿ ಸಭಾಗೃಹದಲ್ಲಿ ಜರಗಿತು. ಉಡುಪಿಯ  ಡಾ.| ಚೇತನ್ ಲೋಬೊ ಅವರು ಆಡಿಯೋ ಮತ್ತು ಟ್ರೇಲರ್ ಅನ್ನು ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ತುಳು ಸಿನಿಮಾದಂತೆಯೇ ನಾವು ಕೊಂಕಣಿ ಸಿನಿಮಾವನ್ನು ಕೂಡ ಪ್ರೋತ್ಸಾಹಿಸಬೇಕಾದ ಅಗತ್ಯವಿದೆ.  ತುಳು ಸಿಮಾಗಳು ಹೆಚ್ಚೆಚ್ಚು ಯಶಸ್ಸು ಸಾಧಿಸುತ್ತಿದೆ. ಕೊಂಕಣಿ ಸಿನಿಮಾ ಮಾಡುವುದು  ತುಂಬಾ ರಿಸ್ಕ್‌ನ ಕೆಲಸವಾಗಿದ್ದು, ನಿರ್ಮಾಪಕ ಹೆನ್ರಿ ಡಿಸಿಲ್ವ ಅವರು ಮತ್ತೊಂದು  ಕೊಂಕಣಿ ಸಿನಿಮಾ ಮಾಡುವ ಮೂಲಕ ದೊಡ್ಡ ಸಾಧನೆ ಮಾಡಿದ್ದಾರೆ.  ಈ ಹಿಂದೆ ಅವರು ನೊಶಿಬಾಚೊ ಖೇಲ್ ಸಿಮಾ ಮಾಡಿದ್ದರು. ಅದೊಂದು ಮೈಲುಗಲ್ಲಾಗಿತ್ತು. ಅದಕ್ಕೆ ನೀಡಿದಂತ ಪ್ರೋತ್ಸಾಹ, ಬೆಂಬಲವನ್ನು ಪ್ರೇಕ್ಷಕರು  ಈ ಸಿನಿಮಾಕ್ಕೂ ನೀಡಬೇಕು ಎಂದು ಹೇಳಿದರು.

ನಿರ್ಮಾಪಕ ಹೆನ್ರಿ  ಡಿಸಿಲ್ವ ಅವರು ಮಾತನಾಡಿ, ಕೇವಲ 30 ಲಕ್ಷ.ರೂ.  ವೆಚ್ಚದಲ್ಲಿ ಈ ಸಿನಿಮಾ ಮಾಡುವುದು ಒಂದು ಸವಾಲಿನ ಕೆಲಸವಾಗಿತ್ತು. ಆದರೆ ನಮ್ಮ ತಂಡದ ಪ್ರತಿಯೋರ್ವ ಸದಸ್ಯರ ಬೆಂಬಲ ಮತ್ತು ಪ್ರೋತ್ಸಾಹದಿಂದ ಈ ಕೆಲಸವನ್ನು  ಮಾಡಲಾಗುತ್ತಿದೆ. ಪ್ರತಿಯೊಬ್ಬ ಪ್ರೇಕ್ಷಕನೂ ಈ ಸಿನಿಮಾ ವೀಕ್ಷಿಸಿ ಸಹಕಾರ ನೀಡಬೇಕು ಎಂದು ಕೋರಿದರು.

ಪ್ರೆಸ್ಟೋನ್ ಎಂಟರ್‌ಪ್ರೈಸಸ್ ಬ್ಯಾನರ್‌ನಡಿಯಲ್ಲಿ,  ಮೆಲ್ವಿನ್  ಎಲ್ಪೆಲ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ. ಸುಮಾರು  42 ದಿನಗಳ ಕಾಲ ಒಟ್ಟು ನಾಲ್ಕು ಹಂತಗಳಲ್ಲಿ ಈ ಸಿಮಾವನ್ನು ಬೆಂಗಳೂರು, ಮಂಗಳೂರು, ಕುಂದಾಪುರ, ಕಾರ್ಕಳ ಮುಂತಾದೆಡೆಗಳಲ್ಲಿ ಚಿತ್ರೀಕರಿಸಲಾಗಿದೆ. ಆಗಸ್ಟ್ ತಿಂಗಳಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಸಿನಿಮಾದ ನಾಯಕರಾಗಿ ಪ್ರತಾಪ್ ಮಿನೇಜಸ್, ಗೋಡ್ವಿನ್, ನಾಯಕಿಯರಾಗಿ ಸೀಮಾ ಬೊತೇಲೊ, ಹೀರಾ ಪಿಂಟೋ  ಅವರು ನಟಿಸುತ್ತಿದ್ದಾರೆ. ಮೀನಾಕ್ಷಿ ಮಾರ್ಟಿನ್, ಹ್ಯಾಂಬರ್ಟ್ ಗೋವಾ, ರೋನಿ ಸುರತ್ಕಲ್,  ಚಾರ್ಲ್ಸ್ ಗೋಮ್ಸ್, ವಿನ್ನಿ ಫೆರ್ನಾಂಡಿಸ್, ನೋರ್ಬರ್ಟ್ ಮೊದಲಾದವರು  ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!