ದೀಪಾವಳಿಗೆ ತೆರೆ ಮೇಲೆ “ಏರೆಗಾವುಯೇ ಕಿರಿಕಿರಿ” ; ಚಿತ್ರ ಎಡಿಟಿಂಗ್ನಲ್ಲಿ ಬ್ಯೂಸಿ
ಸದ್ಯ ರಾಮ್ ಶೆಟ್ಟರು “ಏರೆಗಾವುಯೇ ಕಿರಿಕಿರಿ” ಎಂದು ಮತ್ತೆ ಹೊಸ ಹಾಸ್ಯ ರಸದೌತಣವನ್ನು ಹೊತ್ತು ತುಳುವರ ಮುಂದೆ ಬರುತ್ತಿದ್ದಾರೆ. ಅದ್ಧೂರಿಯಾಗಿ ಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಿಸಿರುವ ಶೆಟ್ಟರು ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ದೀಪಾವಳಿ ಹೊತ್ತಲ್ಲಿ ತುಳುವರ ಮುಂದೆ ಬರುವ ಇರಾದೆಯಲ್ಲಿದ್ದಾರೆ.
ವೇಗಸ್ ಫಿಲಮ್ಸ್ ಲಾಂಛನದಲ್ಲಿ ರೋಶನ್ ವೇಗಸ್ ನಿರ್ಮಿಸುತ್ತಿರುವ ರಾಮ್ ಶೆಟ್ಟಿ ನಿರ್ದೇಶನದ ಏರೆಗಾವುಯೇ ಕಿರಿಕಿರಿ ತುಳು ಸಿನಿಮಾದ ಎಡಿಟಿಂಗ್ ಕೆಲಸ ಆರಂಭಗೊಂಡಿದೆ. ಸಿನಿಮಾದ ನಿರ್ಮಾಪಕ ರಾಮ್ ಶೆಟ್ಟಿ, ಎಡಿಟರ್ ನಾಸಿರ್ ಹಕೀಂ, ಕ್ಯಾಮರಾ ಮ್ಯಾನ್ ರವಿಚಂದನ್ ಮತ್ತು ನಿರ್ಮಾಪಕ ರೋಶನ್ ವೇಗಸ್ ಎಡಿಟಿಂಗ್ ಕೆಲಸದಲ್ಲಿ ನಿರತರಾಗಿದ್ದಾರೆ.
“ಏರೆಗಾವುಯೆ ಕಿರಿಕಿರಿ” ತುಳು ಸಿನಿಮಾಕ್ಕೆ ಬ್ರಹ್ಮಾವರದಲ್ಲಿ ಎರಡು ಹಂತಗಳಲ್ಲಿ ಚಿತ್ರೀಕರಣಗೊಂಡಿತು. ಮುಖ್ಯವಾಗಿ ಸಿನಿಮಾದಲ್ಲಿ ಹಾಸ್ಯ ಮನರಂಜನೆಯ ಜತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಈ ಸಿನಿಮಾದ ಮೂಲಕ ರವಾನಿಸಲಾಗುತ್ತಿದೆ ಎಂದು ಚಿತ್ರದ ನಿರ್ದೇಶಕ ರಾಮ್ ಶೆಟ್ಟಿ ತಿಳಿಸಿದ್ದಾರೆ.
ಏರೆಗಾವುಯೆ ಕಿರಿಕಿರಿಯ ನಿರ್ಮಾಪಕರು ಕ್ರಿಶ್ಚಿಯನ್ ಸಮುದಾಯದವರು. ಚಿತ್ರದ ನಾಯಕ ಮುಸ್ಲಿಂ ಸಮುದಾಯದವರು, ನಿರ್ದೇಶಕರು ಹಿಂದೂ ಸಮುದಾಯದವರು. ಹೀಗಾಗಿ ಇದೊಂದು ಸೌಹಾರ್ದತೆಯ ಸಿನಿಮಾ ಎಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಕುಸೇಲ್ದರಸೆ ನವೀನ್ ಡಿ ಪಡೀಲ್ ತಿಳಿಸಿದ್ದಾರೆ.
ದೀಪಾವಳಿಯ ಸಮಯದಲ್ಲಿ ಸಿನಿಮಾವನ್ನು ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ ತರಲು ಸಿನಿಮಾದ ನಿರ್ಮಾಪಕ ರೋಶನ್ ವೇಗಸ್ ಪ್ರಯತ್ನಿಸುತ್ತಿದ್ದಾರೆ. ತಾರಾಗಣದಲ್ಲಿ ಕುಸೇಲ್ದರಸೆ ನವೀನ್ ಡಿ ಪಡೀಲ್, ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಮಹಮ್ಮದ್ ನಹೀಮ್ ಉದ್ಯಾವರ, ಐಶ್ವರ್ಯ ಹೆಗ್ಡೆ, ರೋಶನ್ ವೇಗಸ್, ಶ್ರದ್ಧಾ ಸಾಲಿಯಾನ್, ಹರೀಶ್ ವಾಸು ಶೆಟ್ಟಿ-ಸಾಯಿಕೃಷ್ಣ ಕುಡ್ಲ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಸುಂದರ ರೈ ಮಂದಾರ, ದಿನೇಶ್ ಕೋಡಪದವು, ಪ್ರದೀಪ್ ಚಂದ್ರ, ಸುನೀಲ್ ನೆಲ್ಲಿಗುಡ್ಡೆ, ರಘು ಪಾಂಡೇಶ್ವರ, ಸರೋಜಿನಿ ಶೆಟ್ಟಿ, ಶೇಖರ್ ಭಂಡಾರಿ, ಶ್ರೀಜಿತ್ ವಸಂತ ಮುನಿಯಾಲ್, ಪ್ರಿಯಾಮಣಿ, ಪವಿತ್ರ ಶೆಟ್ಟಿ- ಡಿಬಿಸಿ ಶೇಖರ್, ಕುಮಾರಿ ಕುಶಿ ಚಂದ್ರಶೇಖರ್ ಮೊದಲಾದವರಿದ್ದಾರೆ.