ಲಂಡನ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಇಂದು ಹುಟ್ಟುಹಬ್ಬದ ಸಂಭ್ರಮ. 57ನೇ ವಸಂತಕ್ಕೆ ಕಾಲಿಟ್ಟ ಶಿವರಾಜ್ ಕುಮಾರ್ ಲಂಡನ್ ನಲ್ಲಿಯೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಲಂಡನ್ ನಲ್ಲಿ ಬಲ ಭುಜದ ಸರ್ಜರಿಗೆ ಒಳಗಾಗಿರುವ ಶಿವಣ್ಣ ಅಲ್ಲೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಕಳೆದ ಆರು ತಿಂಗಳಿನಿಂದ ಭುಜದ ನೋವಿನಿಂದ ಬಳಲುತ್ತಿದ್ದ ಶಿವಣ್ಣ ಕೆಲ ದಿನಗಳ ಹಿಂದೆಯಷ್ಟೇ, ಶಸ್ತ್ರ ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ್ದರು. ಬುಧವಾರ ಶಿವಣ್ಣನವರಿಗೆ ಶಸ್ತ್ರ ಚಿಕಿತ್ಸೆ ನಡೆದು ಆಫರೇಶನ್ ಯಶಸ್ವಿಯಾಗಿದ್ದು, ಆರೋಗ್ಯವಂತರಾಗಿದ್ದಾರೆ. ಶಿವರಾಜ್ ಕುಮಾರ್ ಜೊತೆಗೆ ಪತ್ನಿ ಗೀತಾ ಶಿವರಾಜಕುಮಾರ್ ಹಾಗೂ ಪುತ್ರಿ ನಿವೇದಿತಾ ಕೂಡ ಲಂಡನ್‌ಗೆ ತೆರಳಿದ್ದಾರೆ ಪುನೀತ್ ರಾಜಕುಮಾರ್ ಕೂಡ ಅಣ್ಣನ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ.

ಇದೇ ಸಂಧರ್ಭ 57ನೇ ವಸಂತಕ್ಕೆ ಕಾಲಿಟ್ಟ ಶಿವಣ್ಣನ ಬರ್ತ್‌ಡೇಯನ್ನು ಸಿಂಪಲ್ ಆಗಿ ಆಚರಿಸಲಾಯಿತು. ಪ್ರತಿ ವರ್ಷ ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದ ಹುಟ್ಟುಹಬ್ಬ ಈ ಬಾರಿ ಅಭಿಮಾನಿಗಳಿಗೆ ಲಭ್ಯವಿಲ್ಲದೇ ಇರುವುದು ಕೊಂಚ ನೋವುಂಟು ಮಾಡಿದೆ ಎಂದರು .

ಶಿವಣ್ಣ ಹುಟ್ಟುಹಬ್ಬದ ಆಚರಣೆಯಲ್ಲಿ ಪತ್ನಿ ಗೀತಾ, ಮಗಳು ಮತ್ತು ಪುನೀತ್ ರಾಜ್ ಕುಮಾರ್ ಭಾಗಿಯಾಗಿದ್ದಾರೆ. ಸರ್ಜರಿ ಆಗಿರುವ ಶಿವಣ್ಣ ಕೈಗೆ ಬ್ಯಾಂಡೇಜ್ ಹಾಕಲಾಗಿದೆ. ಆದ್ರೂ ಸಹ ಶಿವಣ್ಣ ಬಲಗೈಯಲ್ಲೆ ಕೇಕ್ ಕತ್ತರಿಸಬೇಕೆಂದು ಬ್ಯಾಂಡೇಜ್ ಬಿಚ್ಚಿಟ್ಟು ಕೇಕ್ ಕತ್ತರಿಸಿದ್ದಾರೆ.

ಇನ್ನು ದೂರದ ಲಂಡನ್‌ನಿಂದ ಶಿವಣ್ಣ ಅಭಿಮಾನಿಗಳ ಜೊತೆ ಫೇಸ್ ಬುಕ್ ಲೈವ್ ಮೂಲಕವೇ ಸಂದೇಶ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!