ಕಿಚ್ಚ ಸುದೀಪ್ , ಪ್ರಭುದೇವ , ಸಲ್ಮಾನ್ ಖಾನ್ ಡ್ಯಾನ್ಸ್ ವಿಡಿಯೋ ವೈರಲ್

ಮುಂಬೈ: ಇದೀಗ ಈ ವಿಡಿಯೋವನ್ನು ಸಲ್ಮಾನ್ ಖಾನ್ ಹಾಗೂ ಕಿಚ್ಚ ಸುದೀಪ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸಲ್ಮಾನ್ ಖಾನ್ ಹಾಗೂ ಕಿಚ್ಚ ಸುದೀಪ್ ಪ್ರಭುದೇವ ನಿರ್ದೇಶನದ ‘ದಬಾಂಗ್-3’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಸಲ್ಮಾನ್ ಖಾನ್, ಸುದೀಪ್ ಹಾಗೂ ನಿರ್ಮಾಪಕ ಸಾಜಿದ್ ನದಿಯಾವಾಲಾ ನಿರ್ದೇಶಕ ಪ್ರಭುದೇವ ಜೊತೆ ಸೂಪರ್ ಹಿಟ್ ‘ಊರ್ವಶಿ’ ಹಾಡಿಗೆ ಡ್ಯಾನ್ಸ್ ಕಲಿತಿದ್ದಾರೆ.
ಸಲ್ಮಾನ್ ಖಾನ್ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿ ಅದಕ್ಕೆ, “ಮಾಸ್ಟರ್ ಪ್ರಭುದೇವ ಜೊತೆ ಡ್ಯಾನ್ಸ್ ಕ್ಲಾಸ್” ಎಂದು ಬರೆದು ಕಿಚ್ಚ ಸುದೀಪ್ ಹಾಗೂ ಸಾಜಿದ್ ನದಿಯಾವಾಲಾ ಅವರಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ. ಕಿಚ್ಚ ಸುದೀಪ್ ಅವರು ಕೂಡ ಈ ವಿಡಿಯೋವನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.
ಸುದೀಪ್ ದಬಾಂಗ್ 3 ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಲಿದ್ದು, ಈ ಪಾತ್ರ ಹೀರೋ ಪಾತ್ರಕ್ಕೆ ಇರುವಷ್ಟೇ ಸಮಾನ ಪ್ರಾಮುಖ್ಯತೆಯನ್ನು ಹೊಂದಿದೆ. ಚಿತ್ರದಲ್ಲಿ ಗೂಂಡಾ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಲ್ಮಾನ್ ಖಾನ್ ಮತ್ತು ಅರ್ಬಾಜ್ ಖಾನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಸುದೀಪ್ ಈ ಹಿಂದೆ, ಬಿಸಿಲ ಶೆಕೆ ಜೋರಾಗಿದ್ದರೂ ಅದು ಸೆಟ್‍ನಲ್ಲಿ ಇರುವ ಉತ್ಸಾಹವನ್ನು ಕುಗ್ಗಿಸಲು ಆಗಲ್ಲ. ಇದು ರೋಮಾಂಚಕ ದಿನ, ಅದ್ಭುತ ತಂಡ, ಅದ್ಭುತ ಜನ. ಹಾಗೆಯೇ ಇಲ್ಲಿರುವ ಮನಮೋಹಕ ಜಿಮ್ ಒಂದು ರೀತಿ ಬೋನಸ್ ಸಿಕ್ಕ ಹಾಗೆ. ದಬಾಂಗ್ 3 ಚಿತ್ರದ ಮೊದಲ ದಿನ ಖುಷಿ ಖುಷಿಯಾಗಿ ಆರಂಭವಾಗಿದೆ.
ನನಗೆ ನನ್ನ ಮನೆಯಲ್ಲಿದ್ದೇನೆ ಎನ್ನುವ ರೀತಿ ನೋಡಿಕೊಳ್ಳುತ್ತಿರುವುದಕ್ಕೆ ಸಲ್ಮಾನ್ ಖಾನ್ ಸರ್ ಗೆ ಧನ್ಯವಾದಗಳು ಎಂದು ಬರೆದು ಸಲ್ಮಾನ್ ಖಾನ್ ಹಾಗೂ ದಬಾಂಗ್- 3ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು

Leave a Reply

Your email address will not be published.

error: Content is protected !!