ಅಮಿತ್ ಶಾ ಕಣ್ಣು ನೋಡಿ ಹೆದರುವ ಯಡಿಯೂರಪ್ಪ: ಸುಧೀರ್ ಕುಮಾರ್
ಕೇಂದ್ರ ಸರ್ಕಾರ ಕಾಶ್ಮೀರದಲ್ಲಿದ್ದ 370 ಕಾಯ್ದೆ ರದ್ದು ಪಡಿಸಿದ್ದು ಸಂತೋಷದ ವಿಚಾರ, ಇದನ್ನು ನಾನು ಸ್ವಾಗತಿಸುತ್ತಾನೆ ಆದರೆ ಇದೇ ವಿಚಾರವನ್ನು ಮುಂದಿಟ್ಟು ಮಾಜಿ ಪ್ರಧಾನಿ ನೆಹರು ಅವರನ್ನು ಹಿಯಾಳಿಸುವುದು ಎಷ್ಟು ಸರಿ ಎಂದು ಪುತ್ತೂರಿನ ಮಾಜಿ ಶಾಸಕಿ ಶಕುಂತಳ ಶೆಟ್ಟಿ ಕಾಪು ಬ್ಲಾಕ್ ಕಾಂಗ್ರೆಸ್ ಉತ್ತರ ವಲಯ ಸಮಿತಿ ವತಿಯಿಂದ ಪ್ರತಿಭಟನಾ ಸಭೆಯಲ್ಲಿ ಕೇಂದ್ರ ಸರಕಾರವನ್ನು ಪ್ರಶ್ನಿಸಿದರು.
ನೆರೆ ಸಂತ್ರಸ್ತರಿ ಪರಿಹಾರ ಹಣ ಕೊಡದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಮತ್ತು ಜಿಲ್ಲೆಯ ಮರಳು ಸಮಸ್ಯೆಯನ್ನು ಪರಿಹರಿಸುವಲ್ಲಿ ನಿರಾಸಕ್ತಿ ತೋರಿಸುತ್ತಿರುವ ಸರ್ಕಾರದ ಧೋರಣೆಯನ್ನು ಖಂಡಿಸಿ ಹಿರಿಯಡ್ಕ ಪೇಟೆಯಲ್ಲಿ ಸೋಮವಾರ ನಡೆದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ಅಂದಿನ ಕಾಶ್ಮೀರದ ಪರಿಸ್ಥಿತಿಗೆ ಅಲ್ಲಿಗೆ ಬೇರೆಯೇ ಸಂವಿಧಾನ, ಪ್ರತ್ಯೇಕ ಧ್ವಜ ನೀಡದಿರುತ್ತಿದ್ದರೆ ಕಾಶ್ಮೀರ ಯಾವತ್ತೋ ಪಾಕಿಸ್ತಾನ ಪಾಲಾಗುತಿತ್ತೆಂದು ಶಕುಂತಳ ಶೆಟ್ಟಿ ಅಭಿಪ್ರಾಯಪಟ್ಟರು.
ನಮ್ಮ ದೇಶದಲ್ಲಿ ಕೋಮು ಎಂಬ ಭಾಷೆಯೇ ಇಲ್ಲ ದೇಶವೂ ಸರ್ವಜನ: ಸುಖೀನೋ ಭವಂತು ಹೇಳುವುದು. ಎಲ್ಲೂ ಹಿಂದೂಗಳೂ ಮಾತ್ರ ಸುಖೀಯಾಗಿರಿ ಎಂದಿಲ್ಲ ಎಂದರು. ಸಂಸದೆ ಶೋಭಾ ಕರಂದ್ಲಾಜೆ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದ ಅವರು ಯಾರನ್ನು ನೋಡಿ ಓಟು ಹಾಕಿ ಎಂದಿದ್ದರೂ ಅವರ ಬಳಿ ಹೋಗಿ ನಮ್ಮೂರಿನ ಸಮಸ್ಯೆ ಹೇಳಿದರೆ ಪರಿಹಾರವಾಗುತ್ತ ಎಂದು ಪ್ರಶ್ನಿಸಿದರು.
ಖ್ಯಾತ ನ್ಯಾಯವಾದಿ ಸುಧೀರ್ ಕುಮಾರ್ ಮುರೋಳಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಫಲ್ಯಕ್ಕೆ ವಿರೋಧ ವ್ಯಕ್ತಪಡಿಸಿ, ಯಡಿಯೂರಪ್ಪ ಕೇಂದ್ರಕ್ಕೆ ಹೋಗಿ ರಾಜ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳು ದೆಹಲಿಗೆ ಹೂಗಲು ಹೆದರುತ್ತಾರೆ, ಕೇಂದ್ರದ ಗೃಹ ಸಚಿವ ಅಮಿತ್ ಶಾ ಕಣ್ಣು ನೋಡಿದರೆ ಅಲ್ಲಿಂದ ನೇರವಾಗಿ ವಿಮಾನ ಹತ್ತಿ ಬೆಂಗಳೂರಿಗೆ ವಾಪಸ್ಸು ಓಡೋಡಿ ಬರುತ್ತಾರೆಂದು ಮುಖ್ಯ ಮಂತ್ರಿಯನ್ನು ಯಡಿಯೂರಪ್ಪ ಅವರನ್ನು ಅಣಕಿಸಿದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ಹಾಲಿ ಶಾಸಕರಾದ ಲಾಲಾಜಿ ಮೆಂಡನ್ ತನ್ನಿಂದ ಕಾಪು ಕ್ಷೇತ್ರದ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯ ಮಾಡಲಾಗುತ್ತಿಲ್ಲ, ಅವರ ಜಿಲ್ಲಾ ಪಂಚಾಯತ್ ಸದಸ್ಯರೆ ನನ್ನ ಬಳಿ ಅನುದಾನ ಬಿಡುಗಡೆ ಮಾಡಿಸಲು ಪತ್ರ ಹಿಡಿದುಕೊಂಡು ದಂಬಾಲು ಬಿಳುತ್ತಾರೆಂದರು. ನಾನು ಶಾಸಕನಾಗಿದ್ದಾಗ ಕ್ಷೇತ್ರದ ದೇವಸ್ಥಾನ, ದೈವಸ್ಥಾನಗಳಿಗೆ ಕೋಟ್ಯಾಂತರ ರೂ. ಅನುದಾನ ಬೀಡುಗಡೆ ಮಾಡಿಸಿದ್ದೇನೆ ಆದರೂ ಬಿಜೆಪಿಯವರೂ ಹಿಂದೂ ವಿರೋಧಿ ಎಂದು ಅಪಪ್ರಚಾರ ಮಾಡಿ ಚುನಾವಣೆಯಲ್ಲಿ ನನ್ನ ಸೋಲುವಂತೆ ಮಾಡಿದರು.ಆದರೆ ಈಗ ಒಂದೂವರೆ ವರ್ಷದಲ್ಲಿ ಕಾಪು ಕ್ಷೇತ್ರಕ್ಕೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಕಾಂಗ್ರೆಸ್ ಆಡಳಿತ ಅವಧಿಯ ಕಾಮಾಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರೆವೆರಿಸುತ್ತಿದ್ದಾರೆಂದು ಹೇಳಿದರು.
ಪ್ರತಿಭಟನಾ ಸಭೆಯಲ್ಲಿ ಮಾಜಿ ಶಾಸಕರಾದ ಯು. ಆರ್. ಸಭಾಪತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪ್ರವೀಣ್ ಶೆಟ್ಟಿ ಕೊರಂಗ್ರಪಾಡಿ, ನವೀನ್‌ಚಂದ್ರ ಸುವರ್ಣ,ಜಿಲ್ಲಾ ಪಂಚಾಯತ್ ಸದಸ್ಯ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.