‘ಆನ್ ಲೈನ್ ಆಫ್ ಲೈನ್’ ಮಧ್ಯೆ ಮಕ್ಕಳು ಲೈನ್ ತಪ್ಪದಿರಲಿ…
ಲೇಖಕರು- ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕರು, ಶಿಕ್ಷಣ ಪ್ರಿಯರು
ಇತ್ತೀಚೆಗೆ ನಮ್ಮೆಲ್ಲರನ್ನು ಕಾಡುತ್ತಿರುವ ಆತಂಕ ಈ ಕರೋನಾ ವೈರಸ್ ನದ್ದು. ಈ ಮಾರಕ ವ್ಯಾಧಿಯ ಭೀತಿ ಜನಜೀವನದ ಶೈಲಿಯನ್ನು ಬದಲಾಯಿಸಿದೆ ಎಲ್ಲರನ್ನು ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿಸಿದೆ.ಇದರ ಮಧ್ಯೆ ದೊಡ್ಡ ಸವಾಲು ಇದ್ದದ್ದು ಶಿಕ್ಷಣ ಕ್ಷೇತ್ರಕ್ಕೆ ಶಾಲಾ ಕಾಲೇಜುಗಳ ಪರೀಕ್ಷೆಗಳಾಗಿಲ್ಲ ಎನ್ನುವ ಚಿಂತೆ ಪಾಲಕ, ಶಿಕ್ಷಕರನ್ನು ಕಾಡುತ್ತಿದೆ.
ಶಿಕ್ಷಣವನ್ನು ಅತ್ಯಂತ ಸ್ಪಧಾ೯ತ್ಮಕವಾಗಿ ಸ್ವೀಕರಿಸಿದ ಮಕ್ಕಳು ಆತಂಕಕ್ಕೆ ಒಳಗಾದಾಗ ಈ ಕ್ಷೇತ್ರಕ್ಕೆ ತಂತ್ರಜ್ಞಾನದ ನೆರಳು ಬಿದ್ದಿದೆ.ಇದರ ಸಾಧಕ ಬಾಧಕದ ಬಗ್ಗೆ ಯೋಚನೆ ಮಾಡುದಾದರೆ, ಪಾಲಕರು ಮಕ್ಕಳ ಕೈಗೆ ಮೊಬೈಲ್ ನೀಡಿದರೆ ದಾರಿ ತಪ್ಪುವ ಭಯದಿಂದ ಮೊಬೈಲ್ ನೀಡಲು ಹಿಂದೆ ಮುಂದೆ ನೋಡುತ್ತಿದ್ದವರು ಇಂದು ಅವರೇ ಸ್ವತಃ ಮಕ್ಕಳ ಕೈಗೆ ಮೊಬೈಲ್ ನೀಡಿ ಸಣ್ಣ ಸ್ಕ್ರೀನ್ ಒಳಗೆ ತರಗತಿ ಪ್ರಾರಂಭವಾಗಿದೆ.
ಈಗ ಪಾಲಕರ ಸಮಸ್ಯೆ ಎನೆಂದರೆ ಮಗುವಿನ ಕೈಗೆ ಮೊಬೈಲ್ ನೀಡಿ ಎದ್ದು ಹೋಗುವ ಹಾಗಿಲ್ಲ ಅವರ ಹತ್ತಿರ ಮೂರು ನಾಲ್ಕು ಗಂಟೆ ಕುಳಿತಿರಬೇಕಾದ ಅನಿವಾಯ೯ತೆ ಸೃಷ್ಟಿಯಾಗಿದೆ. ಇದರಿಂದ ಸಮಯಕ್ಕೆ ಸರಿಯಾಗಿ ಊಟ ತಿಂಡಿ ತಯಾರು ಮಾಡುವ ಸಾಧ್ಯತೆ ಕಡಿಮೆಯಾಗಿದೆ.
ಶಾಲೆಯಲ್ಲಿ ಶಿಕ್ಷಕರು ಕರಿಹಲಗೆಯ ಮೇಲೆ ಬರೆದು ಮಗುವಿಗೆ ಶಿಕ್ಷಣ ನೀಡುವ ರೀತಿ ಶಿಕ್ಷಕರ ಮಾತೃ ವಾತ್ಸಲ್ಯದ ಪ್ರೀತಿ ತೋರುವ ಶಿಕ್ಷಣ ನಾವು ಆನ್ ಲೈನ್ ಶಿಕ್ಷಣದಲ್ಲಿ ಖಂಡಿತ ಕಾಣಲು ಸಾಧ್ಯವಿಲ್ಲ .ಈ ಯಾಂತ್ರಿಕ ಶಿಕ್ಷಣದಿಂದ ಗುರು ಶಿಷ್ಯರ ಸಂಬಂಧ ದೂರವಾಗುವ ಸಂಭವ ಹೆಚ್ಚಾಗುತ್ತಿದೆ.ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವ ಉದ್ದೇಶ ತನ್ನಮಗುವಿನ ಭವಿಷ್ಯ ಉತ್ತಮವಾಗಲಿ ತಾನು ಪಟ್ಟ ಕಷ್ಟದ ಶಿಕ್ಷಣ, ಜೀವನ ತನ್ನ ಮಗ/ಮಗಳಿಗೆ ಸಿಗಬಾರದು ಎಂಬ ಉದ್ದೇಶವಾಗಿದೆ.
ಖಾಸಗಿ ಶಾಲೆಗೆ ನೀಡುವ ಶುಲ್ಕ ಹೊಂದಾಣಿಕೆಗೆ ಪಾಲಕರು ಪಡುತ್ತಿರುವ ಕಷ್ಟ ದೇವರಿಗೆ ಪ್ರೀತಿ. ಇದೀಗ ಆನ್ ಲೈನ್ ಶಿಕ್ಷಣದಿಂದ ತನ್ನ ಮಕ್ಕಳಿಗೆ ಆಂಡ್ರಾಯ್ಡ್ ಫೋನ್ ಅದೇ ರೀತಿ ಇಂಟರ್ ನೆಟ್ ಪ್ಯಾಕ್ ಹಾಕಬೇಕಾದ ಅನಿವಾಯ೯ತೆ ಯಿದೆ.ಶುಲ್ಕ ಕಟ್ಟಲು ಕಷ್ಟಪಡುವ ತಂದೆ ತಾಯಂದಿರಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ಈ ಆನ್ ಲೈನ್ ವ್ಯವಸ್ಥೆಗೆ ಮತ್ತಷ್ಟು ಸಾಲ ಮಾಡುವ ಅನಿವಾಯ೯ತೆಯಿದೆ.
ಮೊದಲೇ ಈ ಕರೋನಾ ಪರಿಣಾಮದಿಂದ ಜೀವನ ನಡೆಸುದೇ ಕಷ್ಟವಾಗಿರುವ ಪೋಷಕರು ವ್ಯಥೆ ಪಡಬೇಕಾಗಿದೆ. ನಮ್ಮ ಮನೆಯ ಹತ್ತಿರದ ಪಾಲಕರು ಹೇಳಿದ ಮಾತು ನೆನಪಿಗೆ ಬರುತ್ತದೆ ಮೊದಲೇ ಜೀವನ ನಡೆಸಲು ಸಾಲ ಮಾಡಬೇಕಾದ ಅನಿವಾಯ೯ತೆ ಇರುವ ನಾವು ಈ ಆನ್ ಲೈನ್ ನಿಂದ ದಿಕ್ಕೆ ತೋರದಿರುವ ದೋಣಿಯಾಗಿದ್ದೆವೆ” ಅವರ ಮಾತು ಎಷ್ಟೋ ಮಂದಿ ಪಾಲಕರಿಗೆ ಅನ್ವಯವಾಗುತ್ತದೆ.ಕೆಲವು ಖಾಸಗಿ ಶಾಲೆಗಳು ಇದನ್ನು ಹಗಲು ದರೋಡೆಯಾಗಿ ಮಾಡಿರುವುದು ಒಪ್ಪತಕ್ಕ ವಿಷಯವಲ್ಲ.ಸಕಾ೯ರಕ್ಕೆ ಈ ಬಗ್ಗೆ ಇರುವ ಗೊಂದಲ ಇನ್ನು ಸರಿಯಾಗಿಲ್ಲ.ಕಾಲೇಜಿಗೆ ಹೋಗುವ ಮಕ್ಕಳದ್ದು ಇನ್ನೊಂದು ಕಥೆ .ಅಪ್ಪ ಅಮ್ಮನ ಒತ್ತಾಯಕ್ಕೆ ಮಣಿದು ಕಂಪ್ಯೂಟರ್, ಲ್ಯಾಪ್ ಟಾಪ್ ತೆರೆದು ಆನ್ ಲೈನ್ ತರಗತಿಗೆ ಲಾಗಿನ್ ಮಾಡಿ ಕೂತರೂ ಪಾಠದಲ್ಲಿ ಏಕಾಗ್ರತೆಯಿಲ್ಲ ಮನ ಬಂದಂತೆ ಸಾಮಾಜಿಕ ಜಾಲ ತಾಣದ ಆನ್ವೇಷಣೆ ಯಲ್ಲಿ ಮಗ್ನರಾಗಿರುತ್ತಾರೆ ಎಂಬುದು ಬಹಳಷ್ಟು ಪಾಲಕರ ದೂರು.
ತರಗತಿಯಲ್ಲಿಯೇ ಈ ಮನೋಭಾವದ ವಿದ್ಯಾಥಿ೯ ಯ ಕಡೆಗೆ ಗಮನ ಹರಿಸುದೇ ಕಷ್ಟವಾಗಿರುವಾಗ ಈ ಆನ್ ಲೈನ್ ನಲ್ಲಿ ಕೇವಲ ಕಾಟಚಾರಕ್ಕಾಗಿ ತರಗತಿ ಯಾಗುತ್ತಿದೆ ಎಂಬುವುದು ಉಪನ್ಯಾಸಕರ ವಾದ. ಈ ವಾದ ವಿವಾದದ ಮಧ್ಯೆ ಮಕ್ಕಳ ಮೇಲೆ ಈ ರೀತಿಯ ಶಿಕ್ಷಣ ಯಾವ ರೀತಿ ಪರಿಣಾಮ ಬೀಳುತ್ತದೆ ಎನ್ನುವುದು ಮುಖ್ಯವಾಗಿದೆ.ಶಾಲಾ ತರಗತಿಯೊಳಗೆ ಮೌನವಿರುತ್ತದೆ ಶಿಕ್ಷಕರು ಪಾಠ ಮಾಡುವ ಸಂದಭ೯ ವಿದ್ಯಾಥಿ೯ಗಳು ನೋಟ್ಸ್ ಮಾಡುವುದು ಮುಖ್ಯಾಂಶಗಳು ಗುರುತು ಹಾಕುವ ಸಂದಭ೯ ಅವರಿಗೆ ಮನನವಾಗುತ್ತದೆ. ಶಿಕ್ಷಕರ ಮೇಲಿನ ಗೌರವ, ಭಯದಿಂದ ಪಾಠವನ್ನು ಓದುತ್ತಾರೆ ಇದರಿಂದ ವಿದ್ಯಾಥಿ೯ಗಳಿಗೆ ಪರೀಕ್ಷಾ ದೃಷ್ಟಿಯಿಂದ ಅಲ್ಲದೆ ಸಾಂಪ್ರದಾಯಿಕ ಶಿಕ್ಷಣದ ದೃಷ್ಠಿಯಿಂದ ಒಳ್ಳೆಯದು.
ಆದರೆ ಆನ್ ಲೈನ್ ನಲ್ಲಿ ಯಾವುದೇ ಸಂವಾದ ಚಚೆ೯ಯಿಲ್ಲದ ಏಕಮುಖ ಸಂವಹನವಾಗಿದೆ.ಕೇವಲ ಖಾಸಗಿ ಶಾಲೆಗಳಿಗೆ ಮಾತ್ರ ಈ ಅನ್ ಲೈನ್ ವ್ಯವಸ್ಥೆ ಯಾಕೆ ಸಕಾ೯ರಿ ಶಾಲೆಯ ವಿದ್ಯಾಥಿ೯ಗಳ ಬಗ್ಗೆ ಯಾಕೆ ಚಿಂತನೆಯಿಲ್ಲ ಎಂಬ ವಾದವೂ ಇದೆ.ಮಕ್ಕಳ ಹಕ್ಕುಗಳ ಆಂದೋಲನದ ಒತ್ತಾಯದ ಪ್ರಕಾರ:ಮಕ್ಕಳಿಗೆ ಉಚಿತ ಇಂಟರ್ ನೆಟ್ ನೀಡಬೇಕು.ಆರ್.ಟಿ.ಇ ವಿದ್ಯಾಥಿ೯ಗಳಿಗೆ ಉಚಿತ ಕಂಪ್ಯೂಟರ್ ವ್ಯವಸ್ಥೆ ನೀಡಬೇಕು.ಮಕ್ಕಳ ರಕ್ಷಣಾ ನಿಯಮಗಳನ್ನು ಜಾರಿಗೆ ತರಬೇಕು.
ಶಿಕ್ಷಕರಿಗೆ ತರಬೇತಿಯ ವ್ಯವಸ್ಥೆಯಾಗಬೇಕು.ಮಕ್ಕಳ ಸ್ವಾತಂತ್ರಕ್ಕೆ ಧಕ್ಕೆಯಾಗಬಾರದು ಎಂಬ ಅಂಶಗಳನ್ನು ಸಕಾ೯ರಕ್ಕೆ ಸಲ್ಲಿಸಿದೆ. ಮತ್ತೊoದು ವಾದ ಪ್ರಕಾರ ಈಗೀರುವ ಪರಿಸ್ಥಿತಿಯಲ್ಲಿ ಶಾಲೆ ಕಾಲೇಜುಗಳನ್ನು ತೆರೆಯುವುದು ಸರಿಯಲ್ಲ. ಮಕ್ಕಳು ಸಮಾಜದ ಆಸ್ತಿ ಈ ಅಸ್ತಿಗೆ ಶಕ್ತಿ ತುಂಬಿಸುವ ಕಾಯ೯ ಶಿಕ್ಷಕರಿಂದ ನಡೆಯುತ್ತಿದೆ. ಎಲ್ಲರ ಹಿತದೃಷ್ಠಿಯಿಂದ ಈಗಿರುವ ಈ ಪರಿಸ್ಥಿತಿಯಲ್ಲಿ ಆನ್ ಲೈನ್ ಶಿಕ್ಷಣ ಒಳ್ಳೆಯದು ಆದರೆ ಈ ಬಗ್ಗೆ ಪೋಷಕರಿಗೆ ತಿಳಿ ಹೇಳುವುದು ಅಗತ್ಯವಿದೆ.ಹೊಸ ತನಕ್ಕೆ ಬದಲಾವಣೆ ಸಂದಭ೯ ಹಲವಾರು ತೊಂದರೆಯಿರುತ್ತದೆ ಆದರೆ ಅದೆಲ್ಲವನ್ನು ನಿವಾರಿಸಿ ಮುಂದೆ ಸಾಗಬೇಕು.
ಮಕ್ಕಳ ಭವಿಷ್ಯದ ದೃಷ್ಠಿ ಯಿoದ ಇದು ಅಗತ್ಯವಿದೆ. ನಿರಾಸೆ ಬೇಡ ಆಶಾವಾದಿಯಾಗಿರೋಣ. ಶಾಲೆ ಕಾಲೇಜುಗಳು ವ್ಯಾಪಾರಿ ಮನೋಭಾವನೆ ಕಡಿಮೆ ಮಾಡಲಿ ಸಕಾ೯ರ ಈ ಬಗ್ಗೆ ಸ್ಪಷ್ಟ ನಿಧಾ೯ರ ತಿಳಿಸಲಿ .ಈ ಕರೋನಾದೊಂದಿಗೆ ಬದುಕುವ ಸಂದಭ೯ ಆಗುವ ತೊಂದರೆಗಳನ್ನು ಸಮಥ೯ವಾಗಿ ಎದುರಿಸೋಣ.ಮಕ್ಕಳ ಭವಿಷ್ಯ ಅದೇ ರೀತಿ ನಮ್ಮ ಭವಿಷ್ಯದ ಹಿತ ದೃಷ್ಠಿಯಿಂದ ಜಾಗ್ರತೆಯಾಗಿರೋಣ.ಅದಷ್ಟು ಬೇಗ ಈ ವ್ಯಾಧಿ ದೂರವಾಗಿ ಶಾಲೆ ಕಾಲೇಜುಗಳಲ್ಲಿ ಮಕ್ಕಳ್ಳ ಕಲರವ ಮತ್ತೊಂಮ್ಮೆ ಮೊಳಗಲಿ’ ಭರವಸೆಯ ಹೊಸ ಬೆಳಕು ಮೂಡಲಿ.ಕಟ್ಟುವೆವು ನಾವು ಹೊಸ ನಾಡನ್ನು ಕಲೆಯ ಬೀಡನ್ನು ಎಂಬಂತೆ ಜೊತೆಯಾಗಿ ಬೆಳೆಯೋಣ.