ವಿದೇಶದಲ್ಲಿ ಸಿಲುಕಿದ ಭಾರತೀಯರಿಗೆ ಆಸರೆಯಾದ ಡಾ .ಆರತಿ ಕೃಷ್ಣ

ಸ್ಟೀವನ್ ಕುಲಾಸೊ

ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಪ್ರಭಾವಿಯಾಗಿ ತನ್ನ ಜವಾಬ್ದಾರಿಯನ್ನ ನಿಭಾಯಿಸಿ ಮಾದರಿಯಾಗುತ್ತಾರೆ ಎನ್ನುವುದಕ್ಕೆ ಡಾ. ಆರತಿ ಕೃಷ್ಣರವರೆ ಸಾಕ್ಷಿ, ತನಗೆ ವಹಿಸಿದ ಹುದ್ದೆಯನ್ನ ಯಶಸ್ವಿಯಾಗಿ ನಿರ್ವಹಿಸಿದಲ್ಲದೆ, ಕೊರೋನ ಲಾಕ್ ಡೌನ್ ಸಂದರ್ಭದಲ್ಲಿ ವಿದೇಶದಲ್ಲಿ ಸಿಲುಕಿದ ಭಾರತೀಯರನ್ನ ತಮ್ಮ ಮಾತ್ರ ಭೂಮಿಗೆ ಕರೆಸುವಂತೆ ಮಾಡಿದ ಆರತಿ ಕೃಷ್ಣ ರವರು ಅನೇಕ ಜನರ ಪ್ರೀತಿಗೆ ಪಾತ್ರರಾದರು.

ಆರತಿ ಕೃಷ್ಣರವರು ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆಯಾಗಿದ್ದರು, ಅಷ್ಟೇ ಅಲ್ಲದೆ ಸಾಗರೋತ್ತರ ಸಚಿವಾಲಯದ ಸಲಹೆಗಾರರಿಗಿದ್ದರು. ಸಮುದಾಯ ಅಭಿವೃದ್ಧಿ ಅಧಿಕಾರಿಯಾಗಿ ಭಾರತೀಯ ರಾಯಭಾರಿ, ವಾಷಿಂಗ್ಟನ್, ಅಮೇರಿಕಾದಲ್ಲಿ ಕೆಲಸ ಮಾಡಿದವರು. ತಮ್ಮ ಶಿಸ್ತು ಸಮಯ ಪ್ರಜ್ಞೆಯಿಂದ ತಮಗೆ ನೀಡಿದ ಜವಾಬ್ದಾರಿಯನ್ನ ನಿರ್ವಹಿಸಿದರು.

ಕರೋನ ಮಹಾಮಾರಿ ನಮ್ಮ ದೇಶಕ್ಕೆ ಕಾಲಿಟ್ಟ ನಂತರ ಹೊರ ರಾಜ್ಯ , ಹೊರ ದೇಶಗಳಿಂದ ಪ್ರಯಾಣಿಕರ ಆಗಮನ ತಡೆ ಹಿಡಿಯಲಾಯಿತು ಈ ಸಂದರ್ಭದಲ್ಲಿ ತಾವು ಮಾಜಿಯಾಗಿದ್ದರೂ ಕರ್ನಾಟಕಕ್ಕೆ 34 , ಕೇರಳಕ್ಕೆ 15 ವಿಶೇಷ ವಿಮಾನ ಸಹಿತ ದೇಶದಾದ್ಯಂತ ಸಾವಿರಾರು ಭಾರತೀಯರನ್ನು ಸ್ವಂತ ಊರಿಗೆ ಕರೆತರುವಲ್ಲಿ ಅವಿರತ ಶ್ರಮವಿದೆ ಆರತಿ ಕೃಷ್ಣ ಅವರದ್ದು.

ಅನೇಕ ಕನಸುಗಳನ್ನು ಹೊತ್ತು ವಿಮಾನ ಹತ್ತಿ ಹೋದ ಕೆಲವರಿಗೆ ಅಲ್ಲಿ ಕನಸುಗಳು ಕಮರಿ ಹೋಗಿ ನರಕ ದರ್ಶನವಾಗಿದೆ. ಅಲ್ಲಿ ಇರಲು ಆಗದೆ ಇಲ್ಲಿ ಬರಲು ಆಗದೆ ಒದ್ದಾಡುವ ಅಂತಹ ಪರಿಸ್ಥಿತಿ ಎದುರಿಸುತ್ತಿದ್ದ ಅನೇಕ ಜನ ಅನಿವಾಸಿ ಭಾರತೀಯರ ಫೋನ್ ಕರೆಯ ಮೂಲಕ ಬರುವ ಅಹವಾಲು ವನ್ನು ಸ್ವೀಕರಿಸಿ ಅವರನ್ನು ಅಲ್ಲಿರುವ ವಿದೇಶಾಂಗ ಸಚಿವಾಲಯದ ಮೂಲಕ ಸಹಾಯ ಒದಗುವಂತೆ ಮಾಡಿದ್ದಾರೆ.
ಇದೀಗ ಕೇಂದ್ರ ಸರ್ಕಾರದ ನಿಯಮದ ಪ್ರಕಾರ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಜವಾಬ್ದಾರಿ ಬಿದ್ದಿದು ಆದರೆ ಈ ಜವಾಬ್ದಾರಿ ನಿರ್ವಹಿಸಲು ಸರಿಯಾದ ಸಿಬ್ಬಂದಿಗಳ ಕೊರತೆ ಇದೆ ಎಂಬುದು ಡಾ ಆರತಿಯವರ ಅಳಲು .

ಲಾಕ್ ಡೌನ್ ಸಂದರ್ಭದಲ್ಲಿ ವಿದೇಶದಲ್ಲಿ ಸಿಲುಕಿದ ತಮ್ಮವರನ್ನು ಕರೆಸುವ ಸಲುವಾಗಿ ದೇಶದ ಮಾಜಿ ಪ್ರಧಾನಿ ದೇವೆ ಗೌಡರಿಂದ ಹಿಡಿದು ಅಖಿಲ ಭಾರತ ಕಾಂಗ್ರೆಸ್ ನ ಉನ್ನತ ಮುಖಂಡರು ಹಾಗು ಪಂಚಾಯತ್ ಸದಸ್ಯರವರೆಗೆ ಆರತಿ ಕೃಷ್ಣರವರನ್ನು ಸಂಪರ್ಕಿಸಿದ್ದಾರೆ ಹಾಗು ಅವರೆಲ್ಲರಿಗೆ ಆರತಿಯವರು ಸಹಕಾರವನ್ನ ನೀಡಿದ್ದಾರೆ.

ವಿದೇಶದಿಂದ ಬಂದವರಲ್ಲಿ ಹೆಚ್ಚಿನವರು ಕೆಲಸ ಕಳೆದುಕೊಂಡವರು , ಗರ್ಭಿಣಿಯರು, ಹಿರಿಯ ನಾಗರಿಕರು ಹಾಗು ಕೆಲಸ ಅರಸಿಕೊಂಡ ಹೋಗಿ ವಿದೇಶದಲ್ಲಿ ಸಿಲುಕಿದವರು. ಅವರನ್ನೆಲ್ಲಾ ಮರಳಿ ಭಾರತಕ್ಕೆ ಬರುವಂತೆ ಮಾಡಿ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!