ಕೊವಿಡ್ ಮಹಾಮಾರಿ; ಮುಂಬಯಿ ತುಳು ಕನ್ನಡಿಗರಿಗೆ ಸಾಮೂಹಿಕ ನೇತೃತ್ವ ಇಂದಿನ ತುರ್ತು ಅಗತ್ಯ.
ಕೊವಿಡ್ ಸಂಕಷ್ಟದಿಂದಾಗಿ ಇಡಿ ವಿಶ್ವವೆ ಪರಿತಪಿಸುವಂತಾಗಿರುವುದು ವಾಸ್ತವವೆ ಆಗಿದ್ದರೂ, ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ ಈ ಮಹಾ ಮಾರಿಗೆ ಅತ್ಯಂತ ಹೆಚ್ಚು ಆಘಾತಗೊಂಡಿರುವುದು ದೇಶದ ವಾಣಿಜ್ಯ ಕೇಂದ್ರವಾದ ಮುಂಬಯಿ. ದೇಶದ ಒಟ್ಟು ಸೋಂಕಿತರ ಮತ್ತು ಅದಕ್ಕೆ ಬಲಿಯಾದವರಲ್ಲಿ ಶೇ. 30 ರಷ್ಟು ಮುಂಬಯಿ ನಗರದವರು. ಈ ನಗರ ಎಷ್ಟು ಆಘಾತಕ್ಕೊಳಗಾಗಿರಬಹುದು ಎಂಬುದನ್ನು ಈ ಆಂಕಿ ಅಂಶಗಳಲ್ಲಿ ಅರ್ಥ ಮಾಡಿಕೊಳ್ಳಬಹುದು.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಬೇರೆ ಬೇರೆ ರಾಜ್ಯಗಳಲ್ಲಿ ವಲಸೆ ಬಂದು ನೆಲೆಸಿರುವ ಜನರು ಅವರವರ ತವರು ರಾಜ್ಯವನ್ನು ಸೇರಿರುವವರು . ಹಲವಾರು ಜನರು ಈಗಲೂ ಹೋಗುತ್ತಿದ್ದಾರೆ. ಎಲ್ಲ ರಾಜ್ಯದ ಮುಖ್ಯ ಮಂತ್ರಿಗಳು,ಹಾಗು ಆಡಳಿತ ಯಂತ್ರ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡುತ್ತಿರುವಾಗ ನಮ್ಮ ಕರ್ನಾಟಕ ಸರ್ಕಾರ ರಾಜ್ಯದ ಗಡಿಯನ್ನು ಮುಚ್ಚಿಕೊಂಡು ಕೈತೊಳೆದು ಕೊತುಕೊಂಡಿರುವುದು ಆಕ್ಷಮ್ಯ ಅಪರಾಧ. ಒಕ್ಕೂಟಗಳ (federal system) ವ್ಯವಸ್ಥೆಯಲ್ಲಿ ಒಬ್ಬರು ಮುಖ್ಯಮಂತ್ರಿಗಳು ತಮಗೆ ಮನಬಂದಂತೆ ಆರ್ಡರ್ ಹೇಗೆ ಬೇಕಾದರೂ ಜಾರಿಗೊಳಿಸಬಹುದು ಎಂಬುದಕ್ಕೆ ಇದು ಒಂದು ನಿದರ್ಶನ.
ಮುಂಬಯಿ ನಗರವು 32000 ಸಾವಿರಕ್ಕೂ ಹೆಚ್ಚು ಸೋಂಕಿತರಿಂದ ಬಳಲುತ್ತಿದ್ದು, ಕೇವಲ 2೦೦೦ ಸೊಂಕಿತರಿರುವ ಕರ್ನಾಟಕ ಸರ್ಕಾರ ಮುಂಬಯಿ ತುಳು ಕನ್ನಡಿಗರಿಗೆ ಪ್ರವೇಶ ನಿರಾಕರಿಸುವ ಮೊದಲು ಹಲವು ಬಾರಿ ಯೊಚಿಸಬೆಕಾಗಿತ್ತು.
ವಲಸೆ ಕಾರ್ಮಿಕರಿಂದ ಹಿಡಿದು ಉನ್ನತಮಟ್ಟದ ಉದ್ಯೋಗ, ಉನ್ನತ ಮಟ್ಟದ ವಿದ್ಯಾಭ್ಯಾಸ… ಹೀಗೆ ಹತ್ತು ಹಲವು ಕನಸುಗಳನ್ನು ಹೊತ್ತು ಈ ಮಾಯಾನಗರಿಯನ್ನು ಸೇರಿದವರಲ್ಲಿ ದೇಶದ ಹೆಚ್ಚಿನ ರಾಜ್ಯಗಳ ಜನರು ಇಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡಿರುವರು.
ಕೊರೊನಾ ಮಹಾಮಾರಿಯಿಂದ ಹೆಚ್ಚು ಪೀಡಿತರಾಗಿರುವವರು ಕೊಳಚೆ ನಿವಾಸಿಗರು ಮತ್ತು ಚೋಲ್ ಗಳಲ್ಲಿ ವಾಸಿಸುವ ಜನರು. ಚಿಕ್ಕ ಪುಟ್ಟ ಮನೆಗಳಲ್ಲಿ ವಾಸಿಸುವ ಇವರು ಸಾರ್ವಜನಿಕ ಶೌಚಾಲಯಗಳನ್ನು ಬಳಸುವುದು ಅನಿವಾರ್ಯ. ಇಲ್ಲಿ ಸಾಮಾಜಿಕ ಅಂತರ ಕಾಯಿದುಕೊಳ್ಳುವುದು ಎಂದರೆ ಅದೊಂದು ಕನಸೇ ಸರಿ …..ಇನ್ನು… ದಾರವಿಯಂತ ಪ್ರದೆಶಗಳಲ್ಲಿ ಪುಟ್ಟ ಪುಟ್ಟ ಕೊಠಡಿಗಳಲ್ಲಿ ಎಂಟು ಹತ್ತು ಜನರು ಜೊತೆಯಲ್ಲಿ ವಾಸಿಸುತ್ತಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜೀವ ಭಯ ಯಾರನ್ನಾದರೂ ಕಾಡುವುದು ಸಹಜ ತಾನೆ….
ಸಂಕಷ್ಟದ ಸಮಯದಲ್ಲಿ ಎಲ್ಲಾ ರಾಜ್ಯದವರು ತಮ್ಮವರನ್ನು ಕರೆಸಿಕೊಂಡರು….ಕರ್ನಾಟಕ ಸರ್ಕಾರದ ವತಿಯಿಂದ ಸೇವಾ ಸಿಂಧು ಎಂಬ ಆಸರೆ ದೊರೆತು.ಬಡವರು ಶ್ರಿಮಂತರೆನ್ನದೆ ಎಲ್ಲರೂ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ತಮ್ಮ ಸರದಿಗಾಗಿ ಕಾಯುತ್ತಾ ಕುಳಿತರು…..
ಈ ಮದ್ಯೆ ಸರಕಾರದಿಂದ ಮತ್ತೊಂದು ಆರ್ಡರ್ ಬಂತು… ಸ್ವಂತ ಕಾರು ಹೊಂದಿದರು ಕಾರಲ್ಲಿ ಹೋಗಬಹುದು ಎಂದು. ಆರ್ಡರ್ ಬಂದಿದೆ ತಡ ಶ್ರಿಮಂತರು ತಮ್ಮ ತಮ್ಮ ಕಾರನ್ನು ಹಿಡ್ಕೊಂಡು ಜಾರಿ ಬಿಟ್ರು.
ಬಡವ ಮಾತ್ರ ಶ್ರಮಿಕ ರೈಲ್ ಗಾಡಿ ಹಾದಿನೂಡುತ್ತಾ ಕೂತ. ಈ ಮದ್ಯೆ ಚುನಾಯಿತ ಪ್ರತಿನಿಧಿಗಳು ಶ್ರಮಿಕ ರೈಲು, ಶ್ರಮಿಕ ಬಸ್ಸು ಇವತ್ತಿನಿಂದ ಪ್ರಾರಂಭ ನಾಳೆಯಿಂದ ಪ್ರಾರಂಭ ಮಾಡುತ್ತೆವೆ. ಕೊರೈನ್ಟೈನ್ ವ್ಯವಸ್ಥೆ ಮಾಡುತ್ತಾ ಇದ್ದಾರೆ ಎಂತೆಲ್ಲಾ ರೈಲ್ ಬಿಟ್ಟದ್ದೆ ಬಂತು.ನಿಪ್ಪಾಣಿ ಗಡಿ ಪ್ರವೆಶಕ್ಕೊ ತಡೆವೊಡ್ಡಿತು.
ತಳಮಟ್ಟದವರನ್ನೂ, ಬಡವರನ್ನೂ ಕೇಳುವವರು ಯಾರು ಇಲ್ಲದಂತಾಯಿತು . ವಿದೇಶದಲ್ಲಿರು ನಮ್ಮವರನ್ನು “ಒಂದೆ ಭಾರತ್ ಮಿಶನ್” ಅಡಿಯಲ್ಲಿ ದೇಶಕ್ಕೆ ಕರೆತರಲಾಯಿತು. ದೇಶದ ವಿಮಾನ ನಿಲ್ದಾಣವು ಅದಕ್ಕಾಗಿ ತೆರೆಯಿತು. ಅದರೆ ನಮ್ಮ ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳು ಸೇವಾ ಸಿಂದು ಜೊತೆಯಲ್ಲಿ ಗಡಿಯನ್ನೆ ನಮ್ಮವರಿಗಾಗಿ ಮುಚ್ಚಿ ಬಿಟ್ಟಿತು. ಇದುವೆ ಸಬ್ಕಾ ಸಾತ್ ಸಬ್ಕಾ ವಿಕಾಸ್ ಆಗಿರಬಹುದೆನೊ?
ಮುಂಬಯಿಯಿಂದ ಬಂದವರಿಂದಾಗಿ ಕೊರೊನಾ ಸೋಂಕು ಹೆಚ್ಚಾಗಿದೆ ಎಂಬ ನೆಪವೊಡ್ಡಿ ಪ್ರವೇಶ ನಿರಾಕರಣೆ ಸರಿಯಾದ ಕ್ರಮವೆ ಅಲ್ಲ. ಇದನ್ನು ಪ್ರತಿಭಟಿಸುವ ಸಾದ್ಯತೆಯನ್ನು ನಾವು ಕಂಡುಕೊಳ್ಳಬೆಕು.
ಜಾತಿಯ ಸಂಘಟನೆಗಳೊಂಡತೆ ಮುಂಬಯಿ ಎಲ್ಲಾ ತುಳು ಕನ್ನಡ ಸಂಘ ಸಂಸ್ಥೆಗಳು ಒಂದೆ ವೇದಿಕೆಯಲ್ಲಿ ಸಂಘಟಿತರಾಗಬೆಕು. ಆ ಮೂಲಕ ನಮ್ಮೆಲ್ಲರ ತೊಂದರೆಗಳನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಂಬಧಪಟ್ಟವರಿಗೆ ತಲಪಿಸುವಂತಹ ಕೆಲಸ ತುರ್ತಾಗಿ ನಡೆಯಬೇಕು . ಸಾಮೂಹಿಕ ಸಮರ್ಥ ನೇತೃತ್ವದಲ್ಲಿ ಇದು ಆಗಬೆಕು.
ನಾವೆಲ್ಲರೂ ಒಂದಾಗಿ ಈಗಾಗಲೇ ಜಾಗ್ರತರಾಗದಿದ್ದಲ್ಲಿ ಕರ್ನಾಟಕ ಸರ್ಕಾರದ ಈ ತಾತ್ಕಾಲಿಕ ತಡೆ ಮುಂದಿನ ದಿನಗಳಲ್ಲಿ ಮುಂಬಯಿಗರಿಗೆ ಶಾಶ್ವತ ತಡೆಯ ಆದೇಶ ಬಂದಲ್ಲಿ ಆಶ್ಚರ್ಯಪಡಬೇಕಿಲ್ಲ.
✍️ ಸುರೇಶ್ ಶೆಟ್ಟಿ ಯೆಯ್ಯಾಡಿ
Ok
It is Truth
Neeuv helirudu noorakke nooru sathya.nanage kooda Urige hogalu bahala Avashykathe ede nanu 7 months pregnent .vehicle madi hoguvastu samarthya ella navella oggattadare olledu.