ಎಲ್ಲೆಲ್ಲಿ ದುಡ್ಡು ಬರುತ್ತೋ, ಅಲ್ಲೆಲ್ಲಾ ಈ ಸರಕಾರ ನಿರ್ಬಂಧವನ್ನು ತೆಗೆದು ಹಾಕುತ್ತದೆ: ಹರಿಪ್ರಸಾದ್

ಬೆಂಗಳೂರ: ಲಾಕ್ ಡೌನ್ ಆರಂಭವಾದಾಗಿನಿಂದ ಇದುವರೆಗೆ, ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಯಾವುದೇ ಗೊತ್ತುಗುರಿ ಅನ್ನುವುದೇ ಇಲ್ಲ ದೇಗುಲ, ಚರ್ಚ್, ಮಸೀದಿ ಓಪನ್ ಮಾಡುವುದರಲ್ಲಿ ತಪ್ಪಿಲ್ಲ. ಆದರೆ, ದುಡ್ಡಿಗಾಗಿ ಈ ಕೆಲಸವನ್ನು ಯಡಿಯೂರಪ್ಪ ಸರಕಾರ ಮಾಡುತ್ತಿರುವಂತಿದೆ. ಎಲ್ಲೆಲ್ಲಿ ದುಡ್ಡು ಬರುತ್ತೋ, ಅಲ್ಲೆಲ್ಲಾ ಈ ಸರಕಾರ ನಿರ್ಬಂಧವನ್ನು ತೆಗೆದು ಹಾಕುತ್ತದೆ”ಎಂದು ಬಿ.ಕೆ.ಹರಿಪ್ರಸಾದ್ ಲೇವಡಿ ಮಾಡಿದರು.

ಕೆಪಿಸಿಸಿ ಕಚೇರಿಯಲ್ಲಿ ಜವಾಹರಲಾಲ್ ನೆಹರೂ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಹರಿಪ್ರಸಾದ್, “ದುಡ್ಡು ಎಲ್ಲಿ ಬರುತ್ತದೋ, ಅದು ಮೊದಲು ಬಿಜೆಪಿಯವರಿಗೆ ಕಾಣಿಸುತ್ತದೆ. ಮೊದಲು, ಹೋಟೆಲ್ ಉದ್ಯಮ ಆರಂಭಿಸಲು ಅನುಮತಿ ನೀಡಲಿ. ಇದನ್ನೇ ನಂಬಿಕೊಂಡಿರುವ ಲಕ್ಷಾಂತರ ಜನರಿದ್ದಾರೆ”ಎಂದು ಹರಿಪ್ರಸಾದ್, ಸರಕಾರವನ್ಮು ಒತ್ತಾಯಿಸಿದರು.


“ಕೊರೊನಾ ನಿರ್ವಹಣೆಯಲ್ಲಿ ಕರ್ನಾಟಕವೇ ಮಾದರಿ ಎಂದು ಯಡಿಯೂರಪ್ಪನವರು ಹೇಳುತ್ತಾರೆ. ಪುಣ್ಯಕ್ಕೆ ಇಲ್ಲೂ ಗುಜರಾತ್ ಮಾದರಿ ಎಂದು ಹೇಳದಿರುವುದು ಸಮಾಧಾನದ ವಿಷಯ”ಎಂದು ಹರಿಪ್ರಸಾದ್ ವ್ಯಂಗ್ಯ ವಾಡಿದರು . ‘ದೇವಸ್ಥಾನಗಳ ಜೊತೆ ಮಸೀದಿ, ಚರ್ಚ್‌ಗಳನ್ನೂ ತೆರೆಯುತ್ತೇವೆ’ ಕೊರೊನಾ ಹಾವಳಿಯ ನಂತರ, ಅಂದರೆ ಸುಮಾರು ಎರಡು ತಿಂಗಳು ಎಲ್ಲಾ ದೇವಾಲಯಗಳಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಈಗ, ರಾಜ್ಯದ ಎಲ್ಲಾ ದೇವಾಲಯಗಳನ್ನು ಭಕ್ತರಿಗೆ ತೆರೆಯಲು ಸರಕಾರ ನಿರ್ಧರಿಸಿತ್ತು ಎಂದು. ಹರಿಪ್ರಸಾದ್ ಮಾತನಾಡಿದರು.

Leave a Reply

Your email address will not be published. Required fields are marked *

error: Content is protected !!