ಡಿಸ್ಚಾರ್ಜ್’ಗೂ ಮುನ್ನ ಕೊರೋನಾ ಪರೀಕ್ಷೆ ಕಡ್ಡಾಯ: ಹೊಸ ಮಾರ್ಗ ಸೂಚಿಯಲ್ಲಿ ಏನಿದೆ ಗೊತ್ತಾ?

ನವದೆಹಲಿ: ಕೊರೋನಾ ಸೋಂಕಿತರಿಗೆ ಪರಿಷ್ಕೃತ ಡಿಸ್ಚಾರ್ಜ್ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಮಂಗಳವಾರ ಬಿಡುಗೆಡ ಮಾಡಿದೆ. 

ಮಾರ್ಗಸೂಚಿಗಳಲ್ಲಿರುವ ಕೆಲವು ಅಂಶಗಳು ಇಂತಿವೆ…

  • ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವುದಕ್ಕೂ ಮುನ್ನ 3 ದಿನಗಳ ಯಾವುದೇ ರೀತಿಯ ಜ್ವರ ಹಾಗೂ ಸೋಂಕಿನ ಲಕ್ಷಣಗಳು ಕಾಣಬಾರದು. 
  • ಪ್ರತೀ ದಿನ ರೋಗಿಯ ದೇಹದ ತಾಪಮಾನ, ನಾಡಿ ಮಿಡಿತವನ್ನು ಪರೀಕ್ಷೆ ಮಾಡಬೇಕು. 
  • ಯಾವುದೇ ಲಕ್ಷಣಗಳು ಗೋಚರಿಸದೆ ಇದ್ದಲ್ಲಿ 10 ದಿನಗಳ ಬಳಿಕ ಡಿಸ್ಚಾರ್ಜ್ ಮಾಡಬಹುದಾಗಿದೆ. 
  • ಎಲ್ಲಾ ಕೊರೋನಾ ಸೋಂಕಿತರು, ಚಿಕಿತ್ಸೆಗಾಗಿಯೇ ಮೀಸಲಟ್ಟಿರುವ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆಯಬೇಕು. 
  • ಯಾವುದೇ ಸರ್ಕಾರಿ ಅಥವಾ ಖಾಸಗಿ ಕೊರೋನಾ ಹೆಲ್ತ್ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಬಹುದಾಗಿದೆ. 
  • ಬಿಡುಗಡೆ ಮಾಡುವ ನಾಲ್ಕು ದಿನಗಳ ಹಿಂದಿನಿಂದ ಕೃತಕ ಆಮ್ಲಜನಕದ ಸಪೋರ್ಟ್ ಇರಬಾರದು. 
  • ಕೊರೋನಾ ಲಕ್ಷಣಗಳು ಕಂಡು ಬರದಿದ್ದರೆ, ಮೂರು ದಿನಗಳ ಬಳಿಕ ಆರ್’ಟಿ ಹಾಗೂ ಪಿಸಿಆರ್ ಪರೀಕ್ಷೆ ನಡೆಸಬೇಕು. ರಿಪೋರ್ಟ್ ನಲ್ಲಿ ನೆಗೆಟಿವ್ ಎಂದು ಬಂದರೆ ಮಾತ್ರ ಅವನ್ನು ಬಿಡುಗಡೆ ಮಾಡಲಾಗುತ್ತದೆ. 
  • ಆಸ್ಪತ್ರೆಯಲ್ಲಿರುವಾಗ ಯಾವುದೇ ಲಕ್ಷಣಗಳಿಲ್ಲದಿದ್ದರೂ ಕೊರೋನಾ ಪಾಸಿಟಿವ್ ಇದ್ದರೆ ಅವರಿಗೆ ಆರ್’ಟಿ ಪಿಸಿಆರ್ ಟೆಸ್ಟ್ ಮಾಡಿಸಬೇಕು. ಒಮ್ಮೆ ವರದಿಯಲ್ಲಿ ನೆಗೆಟಿವ್ ಬಂದರೂ ಕೂಡ ವಾರದ ಬಳಿಕ ಮತ್ತೊಮ್ಮೆ ಪರೀಕ್ಷೆ ನಡೆಸಬೇಕು. 
  • ಆಸ್ಪತ್ರೆಯಿಂದ ಬಿಡುಗಡೆಯಾದ ಸೋಂಕಿತರಿಗೆ 14 ದಿನಗಳ ಕಾಲ ಹೋಂ ಕ್ವಾರಂಟೈನ್ ವಿಧಿಸಲಾಗುತ್ತದೆ. 

Leave a Reply

Your email address will not be published. Required fields are marked *

error: Content is protected !!