ಕೋಟ್ಯಾಂತರ ಹಿಂದೂ ಹೃದಯ ಸಾಮ್ರಾಟನ ಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ

(ಉಡುಪಿ ಟೈಮ್ಸ್ ವಿಶೇಷ ವರದಿ): ಅಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಅದೆಷ್ಟೋ ಹಿಂದೂಗಳ ಕನಸು. ರಾಮ ಮಂದಿರದ ನಿರ್ಮಾಣದ ಅನೇಕ ವರ್ಷಗಳ ತಪಸ್ಸಿಗೆ ಕೊನೆಗೂ ಪ್ರತಿಫಲದ ಉಡುಗೊರೆ ಆಗಸ್ಟ್ 5 ರಂದು ನಡೆಯುವ ಭೂಮಿ ಪೂಜೆ.
1528 ರಲ್ಲಿ ಮೊಗಲ್ ದೊರೆ ಬಾಬರ್ ತನ್ನ ಆಡಳಿತದ ಅವಧಿಯಲ್ಲಿ ಬಾಬರಿ ಮಸೀದಿಯನ್ನ ರಾಮ ಜನ್ಮ ಭೂಮಿಯಲ್ಲಿ ನಿರ್ಮಾಣ ಮಾಡಿದ ಎಂದು ಇತಿಹಾಸ ಉಲ್ಲೇಖಿಸಿದೆ.


ನಂತರದ ದಿನಗಳಲ್ಲಿ ನಡೆದ ಅನೇಕ ಬೆಳವಣಿಗೆಯ ಜೊತೆಗೆ 1859ರಲ್ಲಿ ಅಯೋದ್ಯೆ ವಿವಾದ ತಾರಕ ಏರುತಿದೆ ಎಂದು ಅರಿತುಗೊಂಡ ಬ್ರಿಟಿಷ್ ಸರಕಾರ ಭೂಮಿಯನ್ನ ಎರಡು ಭಾಗವಾಗಿ ಮುಸ್ಲಿಂ ಹಾಗು ಹಿಂದೂ ಸಮುದಾಯಕೆ ಹಂಚಿದರು. ಅದರ ಜೊತೆಗೆ 90 ವರ್ಷಗಳ ಕಾಲ ಇದು ಸ್ಥಿರವಾಗಿತ್ತು. ಆದರೆ 1949 ರಲ್ಲಿ ವಿವಾದಿತ ಕಟ್ಟದಲ್ಲಿ ಶ್ರೀ ರಾಮಚಂದ್ರನ ಮೂರ್ತಿಯನ್ನ ಪ್ರತಿಷ್ಠಾಪನೆಯೊಂದಿಗೆ ವಿವಾದ ಉಗ್ರ ರೂಪಕ್ಕೆ ತಿರುಗಿ ಕೋರ್ಟ್ ಮೆಟ್ಟಿಲೇರಿ ಇದೊಂದು ವಿವಾದಿತ ಭೂಮಿ ಎಂದು ಕೋರ್ಟ್ ಘೋಷಿಸಿತು.

ಆದರೆ 1992 ರಲ್ಲಿ ವಿವಾದಿತ ಬಾಬರಿ ಮಸೀದಿಯನ್ನ ಕರ ಸೇವಕರು ಭೂಮಿ ಗುರುಳಿಸಿದರು ಇದರ ಪರಿಣಾಮ ವಿವಾದ ಬೆಳೆಯುತ್ತ ಸಾಗಿತ್ತು ದಶಕಗಳ ಹಳೆಯ ಪ್ರಕರಣವನ್ನು ಇತ್ಯರ್ಥಗೊಳಿಸಲು ನಿವೃತ್ತ ನ್ಯಾಯಮೂರ್ತಿ ಕಲೀಫ‌ುಲ್ಲಾ, ಅಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್‌ ಮತ್ತು ಖ್ಯಾತ ಮಧ್ಯಸ್ಥಿಕೆದಾರ, ಹಿರಿಯ ವಕೀಲ ಶ್ರೀರಾಮ್‌ ಪಂಚು ಸಮಿತಿಯಮೂರು ಸದಸ್ಯರ ಮಧ್ಯಸ್ಥಿಕೆ ಸಮಿತಿ ರಚಿಸಿದ ಸುಪ್ರಿಂ ಕೋರ್ಟ್‌. ಸ್ಪಷ್ಟ ನಿರ್ಧಾರಕ್ಕೆ ಬಾರದೇ ಸಂಧಾನ ವಿಫ‌ಲ ಗೊಂಡಿತು ನಂತರದಲ್ಲಿ ಅನೇಕ ವರ್ಷಗಳ ಬೆಳವಣಿಗೆಯ ನಂತರ ನಿರಂತರ ಹೋರಾಟದ ಫಲ ಸತತ ವಿಚಾರಣೆ ಬಳಿಕ 2019 ನವೆಂಬರ್‌ 19ರಂದು ಸುಪ್ರೀಂಕೋರ್ಟ್‌ ತ್ರಿಸದಸ್ಯ ಪೀಠದಿಂದ ವಿವಾದಿತ ಜಾಗದ ಅಕ್ಕಪಕ್ಕ ಇರುವ 67 ಎಕ್ರೆ ಭೂಮಿ ರಾಮ ಜನ್ಮ ಭೂಮಿ ವ್ಯಾಸ್‌ ಸಮಿತಿಗೆ ಸೇರಿದ್ದು ಎಂಬುದಾಗಿ ತೀರ್ಪು ಪ್ರಕಟವಾಯಿತು.

ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವನ್ನ ಪ್ರಾಶಸ್ಥ್ಯತೆಯನ್ನ ತೋರಿಸಿದ ಮೋದಿ ಸರಕಾರಕ್ಕೆ ನಿರಂತರ ವಿಪಕ್ಷಗಳು ನೆನಪಿಸುತ್ತಲೇ ಇದ್ದವು. ಆಗಸ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿಯವರು ಮರ್ಯಾದ ಪುರಷೋತ್ತಮನ ಮಂದಿರಕ್ಕೆ ರಜತ ಇಟ್ಟಿಗೆಗಳಿಂದ ಭೂಮಿ ಪೂಜೆ ನೆರವೇರುವ ಕ್ಷಣಕ್ಕೆ ಕೋಟ್ಯಂತರ ಹಿಂದೂಗಳ ಹೃದಯ ಸಾಕ್ಷಿಯಾಗಲಿದೆ.

ಅಯೋದ್ಯೆ ಭೂಮಿಯಲ್ಲಿ ಸೀತಾ ವಲ್ಲಭನ ಮಂದಿರವನ್ನ ನಿರ್ಮಾಣ ಮಾಡಬೇಕು ಎನ್ನುವ ಮಹದಾಸೆಯಿಂದ ಅನೇಕ ಕರ ಸೇವಕರು ತಮ್ಮ ಪ್ರಾಣವನ್ನ ತೆತ್ತಿದ್ದಾರೆ. ಇದಕೆಲ್ಲ ಫಲ ಎಂಬಂತೆ ನಾಳೆ ಅಂದರೆ ಆಗಸ್ಟ್ 5 ರಂದು ದೇಶದ ಸಾರಥಿ ರಾಮ ಮಂದಿರದ ನಿರ್ಮಾಣ ಆಸೆಗೆ ಪನ್ನಿರನ್ನ ಸಿಂಪಡಿಸಲಿದ್ದಾರೆ.

ಶಿಲಾನ್ಯಾಸದ ಕಾರ್ಯಕ್ರಮಕ್ಕೆ ಅಯೋಧ್ಯೆ ಮದುಮಗಳಂತೆ ಸಿಂಗಾರಗೊಂಡು ಸಿದ್ಧವಾಗಿದೆ. ಎಲ್ಲ ಭಗವದ್ ಭಕ್ತರ ಹೃದಯ ಸಾಮ್ರಾಜ್ಯದಲ್ಲಿ ಶ್ರೀ ರಾಮ ಪ್ರತಿಷ್ಠಾಪನೆಯಾಗಲಿ. ರಾಮ ಮಂದಿರ ನಿರ್ವಿಘ್ನವಾಗಿ ನೆರವೇರಲಿ ಎಂಬ ಪ್ರಾರ್ಥನೆಯೊಂದಿಗೆ ನಾಳೆ ಮನೆ ಮಂದಿರಗಳಲ್ಲಿ ರಾಮ ನಾಮ ಜಪ , ಪೂಜೆ ನಡೆಯಲಿದೆ. ಅಸಂಖ್ಯಾತ ಭಕ್ತರು ನಾಳೆಯ ಕಾರ್ಯಕ್ರಮವನ್ನ ನೋಡಲು ಜಾತಕದ ಪಕ್ಷಿಯಂತಾಗಿರುವುದು ಒಪ್ಪಲೇಬೇಕಾದ ಸತ್ಯ.

Leave a Reply

Your email address will not be published. Required fields are marked *

error: Content is protected !!