ಇಂಡೊ-ಪಾಕ್ ವಿಶ್ವಕಪ್ ಪಂದ್ಯ, ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ಸಚಿನ್
ಲಂಡನ್, ಜೂನ್ ೧೪: ಇಡೀ ಕ್ರಿಕೆಟ್ ಜಗತ್ತೇ ಕಾದು ಕುಳಿತಿರುವ ಬಹು ನಿರೀಕ್ಷಿತ ಇಂಡೊ-ಪಾಕ್ ವಿಶ್ವಕಪ್ ಪಂದ್ಯ ಆರಂಭಕ್ಕೆ ಒಂದೇ ದಿನ ಬಾಕಿ. ಈ ಹಿನ್ನೆಲೆ ಭಾರತ ತಂಡದ ಮಾಜಿ ನಾಯಕ, ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್, ವಿರಾಟ್ ಸಾರಥ್ಯದ ಭಾರತ ತಂಡಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.
ಪಾಕಿಸ್ತಾನ ತಂಡದ ಬೌಲಿಂಗ್ ಉತ್ತಮವಾಗಿದ್ದು, ವಹಾಬ್ ರಿಯಾಝ್ ಮತ್ತು ಮೊಹಮ್ಮದ್ ಆಮಿರ್ ಟೀಮ್ ಇಂಡಿಯಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಗುರಿಯಾಗಿಸಬಹುದು , ವಿಶ್ವಕಪ್ನಲ್ಲಿ ರನ್ನ ಸುರಿಮಳೆ ಹರಿಸಿದ ಅನುಭವ ಹೊಂದಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಟೀಮ್ ಇಂಡಿಯಾದ ಬ್ಯಾಟ್ಸ್ಮನ್ಗಳಿಗೆ ಪಾಕಿಸ್ತಾನ ವೇಗದ ಬೌಲರ್ಗಳ ಎದುರು ಎಚ್ಚರಿಕೆ ವಹಿಸುವಂತೆ ಹೇಳಿದ್ದಾರೆ.
ಟೀಮ್ ಇಂಡಿಯಾದಲ್ಲಿ ರೋಹಿತ್ ಮತ್ತು ವಿರಾಟ್ ಹೆಚ್ಚು ಅನುಭವ ಹೊಂದಿರುವ ಬ್ಯಾಟ್ಸ್ಮನ್ಗಳು. ಹೀಗಾಗಿ ಅವರಿಬ್ಬರನ್ನು ಔಟ್ ಮಾಡಲು ಪಾಕಿಸ್ತಾನ ತಂಡದ ಬೌಲರ್ಗಳು ಮೊದಲು ಮುನ್ನುಗ್ಗಬಹುದು ಎಂದು ಡ್ರೆಂಟ್ ಬ್ರಿಡ್ಜ್ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನ ಪಂದ್ಯ ಮಳೆಯಿಂದಾಗಿ ರದ್ದಾದ ಬಳಿಕ ಸಚಿನ್ ಈ ಕುರಿತು ಹೇಳಿದ್ದಾರೆ.