ವರ್ಲ್ಡ್ ಸ್ನೇಕ್ ಡೇ : ವಿಶೇಷ

ಜುಲೈ 16, ವಿಶ್ವ ಹಾವುಗಳ ದಿನ. ಈ ದಿನವನ್ನು ವರ್ಲ್ಡ್ ಸ್ನೇಕ್ ಡೇ ಎಂದು ಎಲ್ಲೆಡೆ ಆಚರಿಸಲಾಗುತ್ತದೆ. ಹಾವಿನ ಕುರಿತು ಇರುವ ಭ್ರಮೆ, ಭಯವನ್ನು ಹೊಡೆದುಹಾಕಿ, ಹಾವುಗಳ ಮಹತ್ವ,  ಅವುಗಳ ಸಂತತಿಯನ್ನು ರಕ್ಷಿಸುವುದಕ್ಕೆ ಸಂಕಲ್ಪ ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅಮೆರಿಕದಲ್ಲಿ1967 ರಲ್ಲಿ ಸ್ನೇಕ್ ಫಾರ್ಮ್ ಎಂಬ ಸಂಸ್ಥೆ ಹಾವುಗಳ ದಿನಾಚರಣೆಯನ್ನು ಮೊಟ್ಟ ಮೊದಲ ಬಾರಿಗೆ ಆಚರಿಸಿತು. ಇದೀಗ ಪ್ರತಿವರ್ಷ ಜುಲೈ 16ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ ವಿಶ್ವ ಹಾವುಗಳ ದಿನ ಆಚರಿಸಲಾಗುತ್ತದೆ.

 

ಸರಿಸೃಪ ಜಾತಿಗೆ ಸೇರಿದ ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಹಾವುಗಳು, ಯಾವತ್ತೂ ಮನುಷ್ಯನ ಸಾಮಿಪ್ಯ ಬಯಸದ ಪರಿಸರ ಸ್ನೇಹಿ ಜೀವಿಗಳು. ಅಂದಹಾಗೇ ಹಾವಿನ ಗುಣ ನಿಮಗೆ ತಿಳಿದಿರಬಹುದು ತನಗೆ ನೋವಾಗದೆ, ಮನುಷ್ಯನನ್ನಾಗಲಿ, ಇತರ ಜೀವಿಗಳನ್ನು ಕಚ್ಚುವುದಿಲ್ಲ. ತನ್ನಷ್ಟಕ್ಕೆ ತನ್ನ ಆಹಾರ ಹುಡುಕಿಕೊಂಡು ಬದುಕುವ ಜೀವಿ ಇವು. ಹಾವುಗಳು ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿವೆ. ಮಾನವರ ಉಗಮಕ್ಕಿಂತ ಮುನ್ನ ಹಾವುಗಳೇ ಭೂಮಂಡಲವನ್ನು ಆಳುತ್ತಿದ್ದವು ಎನ್ನಲಾಗುತ್ತದೆ. ಹಾವಿಗೆ ಸುಮಾರು 12,000 ವರ್ಷಗಳ ಇತಿಹಾಸವಿದೆಯಂತೆ.

ಪ್ರಪಂಚದಾದ್ಯಂತ ಅನೇಕ ಪ್ರಭೇದದ ವಿಷಯುಕ್ತ, ವಿಷ ರಹಿತ ಹಾವುಗಳು, ಸಮುದ್ರ, ಅರಣ್ಯ, ಮರುಭೂಮಿ, ಹುಲ್ಲುಗಾವಲು ಇನ್ನಿತರ ಪ್ರದೇಶಗಳಲ್ಲಿ ವಾಸಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಹಾವುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಅರಣ್ಯನಾಶ, ಹವಾಮಾನ ಬದಲಾವಣೆ, ನಗರೀಕರಣದಿಂದ ಅವುಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿವೆ. ಇದರಿಂದಾಗಿ ಹಾವುಗಳಿಗೆ ಆವಾಸಸ್ಥಾನಗಳು ಕ್ಷೀಣಿಸುತ್ತಿವೆ. ಆದ್ದರಿಂದ ನಗರೀಕರಣದ ಭರಾಟೆಯಲ್ಲಿ ಹಾವುಗಳ ವಾಸಸ್ಥಾನವಿಲ್ಲದೇ ಅವುಗಳ ಸಂತತಿ ನಾಶವಾಗದಂತೆ ರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ.

 

ಈ ಜಗತ್ತಿನಲ್ಲಿ ಹಾವನ್ನು ದ್ವೇಷಿಸುವವರಂತೆ ಪ್ರೀತಿಸುವವರೂ ಇದ್ದಾರೆ. ಹಾವನ್ನು ಪ್ರೀತಿಸುವವರಿಗೆ ಹಾವಿನ ಆಹಾರ, ಜೀವನ ಕ್ರಮ, ಜೀವನದ ವೈವಿಧ್ಯಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿವಿರುತ್ತದೆ. ಎಲ್ಲೆಡೆ ಸುತ್ತಾಡಿ ಹಾವಿನ ಕುರಿತಾದ ಹೊಸ ಹೊಸ ಮಾಹಿತಿಗಳನ್ನು ಕಲೆ ಹಾಕುತ್ತಾರೆ, ಅಂತವರಲ್ಲಿ ಉಡುಪಿಯ ಗುರುರಾಜ್ ಸನಿಲ್ ಕೂಡ ಒಬ್ಬರು. ಉರಗಗಳ ಬಗೆಗಿನ ವಿಶೇಷ ಪ್ರೀತಿ ಇವರನ್ನು ಉರಗ ತಜ್ಞನನ್ನಾಗಿಸಿದೆ.

 

ಉಡುಪಿಯ ತೆಂಕಪೇಟೆಯಲ್ಲಿ ಹುಟ್ಟಿ ಬೆಳೆದ ಗುರುರಾಜ್ ಅವರು ಬಡತನದಿಂದಾಗಿ ವಿದ್ಯಾಭ್ಯಾಸ ಮುಂದುವರಿಸಲಾಗದೆ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದವರು. ಉರಗಗಳ ಬಗೆಗಿನ ಅವರ ವಿಶೇಷ ಪ್ರೀತಿ ಅವರನ್ನು ಉರಗ ತಜ್ಞನನ್ನಾಗಿ ಮಾಡಿತು. ಅವರು ಉರಗಗಳಿಂದ ಅನುಭವಿಸಿದ ಅನುಭವಗಳನ್ನೆಲ್ಲ ದಾಖಲಿಸಿಕೊಂಡು ಒಟ್ಟು ಆರು ಪುಸ್ತಕಗಳನ್ನು ಬರೆದಿದ್ದಾರೆ. ಅವರು ಬರೆದಿರುವ ನಾಗಬೀದಿಯೊಳಗಿಂದ ಕೃತಿಯಿಂದ ಆಯ್ದ “ನಮ್ಮ ನಂಬಿಕೆ ನಾಗನಿಗೆ ವರವೇ ಶಾಪವೇ?” ಎಂಬ ಲೇಖನ ಬಿಕಾಂ ವಿದ್ಯಾರ್ಥಿಗಳಿಗೆ ಪಾಠವಾಗಿರುವುದು ಹೆಮ್ಮೆಯ ಸಂಗತಿ.

ಹಾವುಗಳ ಬಗ್ಗೆ ವಿಶೇಷ ಪ್ರೀತಿ. ಅದೆಷ್ಟೋ ಬಾರಿ ಹಾವುಗಳ ಜೊತೆ ಸೆಣಸಾಟ ನಡೆಸಿ ಕಚ್ಚಿಸಿಕೊಂಡು ಜೀವನದಲ್ಲಿ ಒದ್ದಾಡಿದ್ದುಂಟು. ಆದ್ರು ಹಾವು ಹಿಡಿದು ಸುರಕ್ಷಿತ ಸ್ಥಳಕ್ಕೆ ಸಾಗಿಸುವ ಹವ್ಯಾಸಕ್ಕೆ ಮಾತ್ರ ಹಿಂದೇಟು ಹಾಕಲಿಲ್ಲ. ಇವರಿಗೆ ಯಾವುದೇ ಸಂಧರ್ಭದಲ್ಲಿ ಕರೆ ಬರಲಿ, ಹಾವುಗಳ ರಕ್ಷಣೆಗೆ ಧಾವಿಸಿ ಹಗಲು-ರಾತ್ರಿಯೆನ್ನದೆ ಸಂಚಾರಿಸುವ ಧೈರ್ಯವಂತ ವ್ಯಕ್ತಿ. ಸಾಮಾನ್ಯ ಜನರಿಗೆ ಅವರ ಮನೆ, ಪಾಳುಬಿದ್ದ ಬಾವಿ, ದನದ ಕೊಟ್ಟಿಗೆಗೆ ಬಂದು ಭಯಪಡಿಸುವ ಯಾವುದೇ ಹಾವುಗಳನ್ನು ಹಿಡಿದು ದೂರ ಅರಣ್ಯಗಳಿಗೆ ಸುರಕ್ಷಿತವಾಗಿ ಬಿಡುವ ಆಪದ್ಭಾಂಧವ ಗುರುರಾಜ್ ಸನಿಲ್.

ಸುಮಾರು 25 ವರ್ಷಗಳಿಂದ 20,000 ಅಧಿಕ ಹಾವುಗಳನ್ನು ಹಿಡಿದು ಸಂರಕ್ಷಿಸಿದ ಹೆಗ್ಗಳಿಗೆ ಇವರಿಗೆ ಸಲ್ಲಿಸುತ್ತದೆ. ಹಾವಿನ ಮೇಲಿರುರುವ ಕಾಳಜಿಯಿಂದಾಗಿ ಕಳೆದ 25 ವರ್ಷಗಳಿಂದ ಹಾವಿನ ರಕ್ಷಣೆ ಮಾಡಿರುವ ಇವರ ಸೇವೆಯನ್ನು ಗುರುತಿಸಿ ಅನೇಕ ಪ್ರಶಸ್ತಿಗಳು ಲಭಿಸಿವೆ. ಅಪಾಯಕಾರಿ ಹಾವುಗಳನ್ನು ಹಿಡಿದು ಕಚ್ಚಿಸಿಕೊಂಡು ಕೋಮ ಸ್ಥಿತಿಗೆ ತಲುಪಿದರು ಕೂಡ ಭಯಪಡದೇ ಮತ್ತೆ ಪುನ ಉರಗದ ರಕ್ಷಣೆಯತ್ತ ದಾಪುಗಾಲಿಟ್ಟವರು.  ಹಾವಿನ ರಕ್ಷಣೆ ಒಂದೇ ದಿನಕ್ಕೆ ಸೀಮಿತವಾಗಿರದೇ ವರ್ಷದ ಎಲ್ಲ ದಿನವು ಹಾವಿನ ರಕ್ಷಣೆ ಅಗತ್ಯ ಎನ್ನುವುದು ಇವರ ಅಭಿಪ್ರಾಯ.

https://youtu.be/LQg0EPadAUk

1 thought on “ವರ್ಲ್ಡ್ ಸ್ನೇಕ್ ಡೇ : ವಿಶೇಷ

  1. All living beings are part this nature. Hence, they also have right to live. Congratulations to Mr. Gururaj Sanil.

Leave a Reply

Your email address will not be published. Required fields are marked *

error: Content is protected !!