ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಕಡಿಮೆ ಮಾಡಿಸುವುದಾಗಿ ಮಹಿಳೆಗೆ ವಂಚನೆ

ಮಣಿಪಾಲ: ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಕಡಿಮೆ ಮಾಡಿಸುವುದಾಗಿ ಹೇಳಿ ಮಹಿಳೆಯ 70 ಸಾವಿರ ಮೌಲ್ಯದ ಚಿನ್ನಭಾರಣ ಎಗರಿಸಿ ಪರಾರಿಯಾದ ಘಟನೆ ಮಣಿಪಾಲದಲ್ಲಿ ನಡೆದಿದೆ.

ನಿನ್ನೆ ಚಿತ್ರದುರ್ಗ ಚೆಳ್ಳೆಕೆರೆ ಬೋಡಿಂಗ್ ಕಾಲೋನಿಯ ಶಾರದಮ್ಮ ಮಗಳಾದ ವಿಜಯಲಕ್ಷ್ಮಿ ಯೊಂದಿಗೆ ತನ್ನ ಚಿಕಿತ್ಸೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಬಂದಿದ್ದರು. ಚಿಕಿತ್ಸೆ ಮುಗಿಸಿ ನಿನ್ನೆ ವಾಪಸ್ಸು ಹೋಗುವ ಸಮಯ ಆಸ್ಪತ್ರೆಯ ಒ.ಪಿ.ಡಿ ವಿಭಾಗದ ಬಳಿ ನಿಂತುಕೊಂಡಿರುವಾಗ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿ ಚಿಕಿತ್ಸೆಯ ಅರ್ಧದಷ್ಟು ಖರ್ಚನ್ನು ಹಿಂದಿರುಗಿಸಿ ಕೊಡಿಸುವುದಾಗಿ ಶಾರದಮ್ಮನನ್ನು ನಂಬಿಸಿ ಮೋಸ ಮಾಡಿದ್ದಾನೆ.

ವಿಜಯಲಕ್ಷ್ಮಿ ಬಳಿ ಚಿಕಿತ್ಸೆಯ ಬಿಲ್ಲುಗಳನ್ನು ಜೆರಾಕ್ಸ್ ಮಾಡಿಸಿಕೊಂಡು ಬರಲು ಕಳುಹಿಸಿ, ಅಪರಿಚಿತ ವ್ಯಕ್ತಿ ಶಾರದಮ್ಮರವರ ಬಳಿ ಬಂದು ನೀವು ಚಿನ್ನದ ಆಭರಣಗಳನ್ನು ಹಾಕಿಕೊಂಡು ಹೋದರೆ ಆಸ್ಪತ್ರೆಯವರು ಬಿಲ್ಲು ಕಡಿಮೆ ಮಾಡುವುದಿಲ್ಲ, ಅದನ್ನು ತೆಗೆದು ಕೊಡಿ, ಬ್ಯಾಗ್‌ನಲ್ಲಿ ಇರಿಸುವಂತೆ ಹೇಳಿದ್ದು, ಶಾರದಮ್ಮ ನಂಬಿ ಚಿನ್ನದ ಸರವನ್ನು ಆತನ ಕೈಗೆ ಕೊಟ್ಟಿದ್ದಾರೆ.

ಚಿನ್ನದ ಸರವನ್ನು ಒಂದು ಪೇಪರ್‌ನಲ್ಲಿ ಕಟ್ಟಿ ಅವನೇ ತಂದಿದ್ದ ಬ್ಯಾಗಿಗೆ ಹಾಕಿ, ನಂತರ ಆ ಬ್ಯಾಗನ್ನು ಶಾರದಮ್ಮರವರಿಗೆ ಕೊಟ್ಟು ಬ್ಯಾಗ್‌ನೊಳಗೆ ಚಿನ್ನದ ಸರ ಇದೆ ಎಂದು ಹೇಳಿ ಹೊರಟು ಹೋದನು. ಬಳಿಕ ಶಾರದಮ್ಮ ಬ್ಯಾಗ್‌ನ್ನು ಪರೀಶಿಲಿಸಿದಾಗ ಚಿನ್ನದ ಸರ ಬ್ಯಾಗ್‌ನಲ್ಲಿ ಹಾಕದೆ ಚಾಣಾಕ್ಷತನದಿಂದ 30 ಗ್ರಾಂ ತೂಕದ 70,000 ಮೌಲ್ಯದ ಚಿನ್ನದ ಸರವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!